
ರೋಹಿತ್ ಪದಕಿ ನಿರ್ದೇಶನದ, ಡಾಲಿ ಧನಂಜಯ್ ನಟನೆಯ ‘ರತ್ನನ್ ಪ್ರಪಂಚ’ ಚಿತ್ರಕ್ಕೆ ರೆಬಾ ನಾಯಕಿ ಆಗಿದ್ದಾರೆ.
ರೆಬಾ ಹಿನ್ನೆಲೆ ಏನು?
ಅಮ್ಮ ಹಾಗೂ ಮಗನ ಸೆಂಟಿಮೆಂಟ್ ಹೈಲೈಟ್ ಆಗಿಸಿಕೊಂಡಿರುವ ‘ರತ್ನನ್ ಪ್ರಪಂಚ’ಕ್ಕೆ ನಾಯಕಿಯಾಗಿರುವ ರೆಬಾ, ಮೂಲತಃ ಮಂಗಳೂರಿನ ಹುಡುಗಿ. ಓದಿದ್ದು ಬೆಂಗಳೂರು. ಬಣ್ಣ ಹಚ್ಚಿದು ಮಲಯಾಳಂನಲ್ಲಿ. 2016ರಲ್ಲಿ ತೆರೆಕಂಡ ‘ಜಾಕೋಬಿಂಟೆ ಸ್ವರ್ಗರಾಜ್ಯಂ’ ಇವರ ಮೊದಲ ಸಿನಿಮಾ.
ಅಗ್ನಿಶ್ರೀಧರ್ 'ದಾದಾಗಿರಿಯ ದಿನಗಳು' ಶೀರ್ಷಿಕೆ ರಿಲೀಸ್‌ಗೆ ಸಾಥ್ ಕೊಟ್ಟ ಪುನೀತ್ ರಾಜ್‌ಕುಮಾರ್!
ತಮಿಳಿನ ‘ಬಿಗಿಲ್’ ಚಿತ್ರದಲ್ಲಿ ಅನಿತಾ ಎನ್ನುವ ಪಾತ್ರ ಮಾಡಿದ್ದರು. ಹುಚ್ಚು ಪ್ರೇಮಿಯಿಂದ ಆ್ಯಸಿಡ್ ದಾಳಿಗೆ ಒಳಗಾಗಿ, ನಂತರ ಕ್ರೀಡಾ ಕ್ಷೇತ್ರದಲ್ಲಿ ಗೆಲುವು ಕಾಣುವ ಪಾತ್ರ ಅದು. ರೆಬಾ ಅವರಿಗೆ ಇದು ಮೊದಲ ಕನ್ನಡ ಚಿತ್ರವಲ್ಲ, ರಿಷಿ ಜತೆ ‘ಸಕಲಕಲಾ ವಲ್ಲಭ’ ಚಿತ್ರದಲ್ಲಿ ನಟಿಸಿದ್ದಾರೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.