ರಚಿತಾ ಕೈಗೆ ಸಿಗರೇಟ್, ರಕ್ಷಿತಾ ಕೈಗೆ ಎಣ್ಣೆ ಬಾಟ್ಲಿ, ಫ್ಯಾನ್ಸ್‌ ಕೈಯಲ್ಲಿ ಪ್ರೇಮ್!

By Suvarna News  |  First Published Feb 14, 2020, 12:48 PM IST

ಚಂದನವನದ ಡಿಂಪಲ್ ಸುಂದರಿ ರಚಿತಾ ರಾಮ್‌ ಕೈಯಲ್ಲಿ ಸಿಗರೇಟ್‌ ನೋಡಿ ಅಭಿಮಾನಿಗಳು ಫುಲ್‌ ಶಾಕ್‌ ಆಗಿದ್ದಾರೆ, ಅಲ್ಲದೇ ಹೆಂಡ್ತಿ ರಕ್ಷಿತಾ ಕೈಗೆ ಎಣ್ಣೆ ಬಾಟಲ್ ಬೇರೆ ಕೊಟ್ಟಿದ್ದಾರೆ. ಇದಕ್ಕೆ ಅಭಿಮಾನಿಗಳು ಹೇಗೆ ರಿಯಾಕ್ಟ್ ಮಾಡ್ತಿದ್ದಾರೆ ಗೊತ್ತಾ?
 


ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ದಿನೇ ದಿನೇ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದಾರೆ. ಜೋಗಿ ಪ್ರೇಮ್‌ ನಿರ್ದೇಶನದ 'ಏಕ್‌ ಲವ್‌ ಯಾ' ಚಿತ್ರದಲ್ಲಿ ಬ್ಯುಸಿಯಾಗಿರುವ ರಚಿತಾ ರಾಮ್‌ ಹಿಂಗ್ಯಾಕ್‌ ಮಾಡಿದ್ರು? ಅಭಿಮಾನಿಗಳೂ ತಲೆ ಕೆರೆದು ಕೊಳ್ಳುತ್ತಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ರಚಿತಾ ರಾಮ್ ಫಾಲೋ ಮಾಡ್ತೀರಾ? ಈ ಖಾತೆಯಿಂದ ಮೋಸ!

Tap to resize

Latest Videos

ರಚಿತಾ ರಾಮ್‌ ಕೈಯಲ್ಲಿ ಸಿಗರೇಟ್‌ ಕೊಟ್ಟು, ಪತ್ನಿ ರಕ್ಷಿತಾ ಕೈಗೆ ಎಣ್ಣೆ ಬಾಟಲ್ ಕೊಟ್ಟ ಪ್ರೇಮ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಮಂದಿ ಕಾಲೆಳೆಯುತ್ತಿದ್ದಾರೆ. ಇದು ಬರೀ ಫೋಸಾ ಅಥವಾ ನಿಜವಾಗ್ಲೂ ಸ್ಮೋಕ್ ಮಾಡಿದ್ದಾರಾ ರಚಿತಾ, ಎಣ್ಣೆ ಹೊಡೆದ್ರಾ ರಕ್ಷಿತಾ?

'ಏಕ್‌ ಲವ್‌ ಯಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ರಾಣಾ, ರಕ್ಷಿತಾ ಪ್ರೇಮ್‌ ಅವರ ತಮ್ಮ. ರಾಣಾಗೆ ಜೋಡಿಯಾಗಿ ರಚಿತಾ ರಾಮ್‌ ಬೋಲ್ಡ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಚಿತ್ರದ ಮೂಲಕ ರಕ್ಷಿತಾ ಎಣ್ಣೆ ಬಾಟ್ಲು ಹಿಡಿದು ಕಮ್‌ ಬ್ಯಾಕ್‌ ಮಾಡುತ್ತಿರುವುದು ಮತ್ತೊಂದು ವಿಶೇಷ. 

ಅಕ್ಕನ ಮದುವೆಯಲ್ಲಿ ಭಾವನ ಜೊತೆ ಮಿಂಚಿದ ರಚಿತಾ ರಾಮ್; ಇಲ್ಲಿವೆ ಕಲರ್‌ಫುಲ್‌ ಫೋಟೋಗಳು!

ಇತ್ತೀಚಿಗೆ ರಚಿತಾ ರಾಮ್‌ ಸಿಗರೇಟ್‌ ಸೇದುತ್ತಿರುವ ಫೋಟೋ ರಿವೀಲ್‌ ಮಾಡಿದೆ ಚಿತ್ರತಂಡ, ಚಿತ್ರದ ಬಗ್ಗೆ ಸಸ್ಪೆನ್ಸ್‌ ಹೆಚ್ಚಿದೆ. 'ಜೋಗಿ' ಚಿತ್ರದ ಮೂಲಕ ಶಿವರಾಜ್‌ಕುಮಾರ್‌‌ಗೆ ಲಾಂಗ್‌ ಕೊಟ್ಟ ಪ್ರೇಮ್‌ ಏಕ್‌ ಲವ್‌  ಯಾ' ಚಿತ್ರದ ಮೂಲಕ ರಚಿತಾಗೆ ಸಿಗರೇಟ್‌ ಕೊಟ್ಟವ್ರೆ ಎಂದು ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ. ರಚಿತಾ ಕೈಯಲ್ಲಿ ಸಿಗರೇಟ್ ಕೊಟ್ಟರೆ, ಪತ್ನಿ ರಕ್ಷಿತಾ ಕೈಗೆ ಬಾಟಲ್ ಕೊಟ್ಟಿರುವುದು ಪ್ರೇಮ್ ಅವರ ವಿಶೇಷ.

click me!