
ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಕಾರುಣ್ಯ ರಾಮ್ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಅದರಲ್ಲೂ 'ಕಿರಗೂರಿನ ಗಯ್ಯಾಳಿಗಳು' ಚಿತ್ರ ನೋಡಿದರಂತೂ ನೀವು ಫಿದಾ ಆಗೋದು ಗ್ಯಾರಂಟಿ.
ಇಂದು ಪ್ರೇಮಿಗಳ ದಿನ. ಎಲ್ಲಾ ತಾರೆಯರೂ ತಮ್ಮ ಆಪ್ತರೊಂದಿಗೆ ಫೋಟೋ ಅಪ್ಲೋಡ್ ಮಾಡಿ ವಿಶ್ ಮಾಡಿರುತ್ತಾರೆ. ಆದರೆ ಕಾರುಣ್ಯ ಸಿಕ್ಕಾಪಟ್ಟೆ ಡಿಫರೆಂಟ್...
ಸ್ಯಾಂಡಲ್‌ವುಡ್ ಕ್ಯೂಟಿ ಕಾರುಣ್ಯ ರಾಮ್ ಫೋನ್‌ನಲ್ಲಿ ಇದ್ನೆಲ್ಲ ಇಟ್ಕೊಂಡಿದ್ದಾರಾ?
ಕಾರುಣ್ಯ ರಾಮ್ ತಮ್ಮ ಬಾಯ್ ಫ್ರೆಂಡ್ ಫೋಟೋವನ್ನು ಸೀರೀಸ್ ಮೂಲಕ ರಿವೀಲ್ ಮಾಡಿದ್ದಾರೆ. 'ಇವರೇ ನನ್ನ ಬಾಯ್‌ಫ್ರೆಂಡ್. ಹೆಸರು ಏಕದಂತ. ಗುಟ್ಟಾಗಿ ನನ್ನೊಟ್ಟಿಗೆ ಫೋಸ್ ಕೊಡುವಂತೆ ಕೇಳುತ್ತಿದ್ದಾನೆ. ಕೆಲವು ದಿನಗಳ ಹಿಂದೆ ಕಾಡಿನಲ್ಲಿ ಸಿಕ್ಕ ಇವನಿಗೆ ತರಬೇತಿ ನೀಡಲಾಗುತ್ತಿದೆ,' ಎಂದು ಬರೆದುಕೊಂಡಿದ್ದಾರೆ.
ಹೌದು! ಕಾರುಣ್ಯ ಬಾಯ್‌ಫ್ರೆಂಡ್ ಏಕದಂತ ಎಂಬ ಆನೆ. 'ಎಷ್ಟು ತುಂಟನೆಂದರೆ, ಚೇಷ್ಟೆ ಮಾಡುವಾಗ ಒಂದು ದಂತವನ್ನೇ ಮುರಿದುಕೊಂಡಿದ್ದಾನೆ. ಅದಕ್ಕೆ ನಾನು ಇನ್ನೊಂದು ಹಿಡಿದಿರುವುದು. ನಾವಿಬ್ಬರೂ ಬ್ಲ್ಯಾಕ್ ಆ್ಯಂಡ್ ವೈಟ್ ಕಪಲ್ ಆಫ್ ಸ್ಯಾಂಡಲ್‌ವುಡ್,' ಎಂದು ಮತ್ತೊಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ಕ್ಯೂಟಿ ಕಾರುಣ್ಯ ರಾಮ್ ಹಾಟ್ ಫೋಟೋಗಳಿವು!
ಬಿಗ್‌ಬಾಸ್ ಕನ್ನಡ ಸೀಸನ್ 4ರಲ್ಲಿ ಸ್ಪರ್ಧಿಯಾಗಿದ್ದ ಈ ಕಾರುಣ್ಯ ರಾಮ್, ಕನ್ನಡ ನಾಡಿಗೆ ಚಿರಪರಿಚಿತರಾಗಿದ್ದೇ ಅವಾಗ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.