
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ತೆಲುಗಿಗೆ ಹಾರಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಸಕ್ಸಸ್‌ನಲ್ಲಿದ್ದಾರೆ. ಮಾಡಿದ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆಗುತ್ತಿವೆ. ಹೀಗಿರುವಾಗ ಟಾಲಿವುಡ್‌ಗೆ ಹಾರಿದ್ದು ಅಲ್ಲಿಯೂ ಕಮಾಲ್ ಮಾಡಬಹುದು ಎಂಬ ನಿರೀಕ್ಷೆ ಹುಟ್ಟಿಸಿದೆ.
ಕೈ ಯಲ್ಲಿ ಗನ್, ಖಡಕ್ ಲುಕ್; ಏನಿದು ದರ್ಶನ್ ಹೊಸ ಅವತಾರ?
ಟಾಲಿವುಡ್‌ಗೆ ಹಾರಿದ ನಂತರ ರಚಿತಾ 'ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ' ಎನ್ನುತ್ತಿದ್ದಾರೆ. ಅರೇ! ಇದ್ಯಾಕೆ ಹೀಗೆ ಹೇಳುತ್ತಿದ್ದಾರೆ ಎಂದುಕೊಳ್ಳಬೇಡಿ. ಇದು ಸಿನಿಮಾದ ಹೆಸರು. ಈ ಸಿನಿಮಾ ತೆಲುಗು ಹಾಗೂ ಕನ್ನಡದಲ್ಲಿ ಏಕಕಾಲದಲ್ಲಿ ತೆರೆಗೆ ಬರಲಿದೆ. ರಚಿತಾ ರಾಮ್ ಮೀನಾಕ್ಷಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುಲಿ ವಾಸು ನಿರ್ದೇಶನ ಮಾಡುತ್ತಿದ್ದಾರೆ.
‘ಪಂಚತಂತ್ರ’ದ ಚೆಲುವೆ ಜೊತೆಗೆ ಉಪ್ಪಿ ಮದುವೆ ಫಿಕ್ಸ್?
ಈ ಸಿನಿಮಾ ತಂದೆ- ಮಗಳ ಸಂಬಂಧದ ಬಗ್ಗೆ ಹೇಳುತ್ತದೆ. ಈಗಾಗಲೇ ಶೂಟಿಂಗ್ ಶುರುವಾಗಿದ್ದು ಬೆಂಗಳೂರು, ಚಿಕ್ಕಮಗಳೂರು, ಹೈದರಾಬಾದ್ ಹಾಗೂ ವಿಶಾಖಪಟ್ಟಣಂನಲ್ಲಿ ಶೂಟಿಂಗ್ ನಡೆದಿದೆ.
ಇದೊಂದು ರೊಮ್ಯಾಂಟಿಕ್ ಎಂಟರ್‌ಟೇನಿಂಗ್ ಸಿನಿಮಾ ಇದಾಗಿದ್ದು ಶಿವರಾಜ್ ಕೆ ಆರ್ ಪೇಟೆ ತಂದೆಯಾಗಿ ಕಾಣಿಸಿದ್ದಾರೆ. ರಚಿತಾ ಜೊತೆಗೆ ರಿಯಾ ಚಕ್ರವರ್ತಿ ನಟಿಸಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.