ಐಟಿ ರೇಡ್ ಕುರಿತು ಕೊತ್ತಲವಾಡಿ ಸಿನಿಮಾ ನಿರ್ಮಾಪಕಿ ಪುಷ್ಪಾ ಅರುಣ್ ಮಾತು

Published : Aug 23, 2025, 10:41 PM ISTUpdated : Aug 24, 2025, 11:51 AM IST
Pushpa Arunkumar

ಸಾರಾಂಶ

ಐಟಿ ರೇಡ್​ ಕುರಿತು ಅವರ ನಿರ್ಮಾಪಕಿ ಪುಷ್ಪಾ ಅರುಣಕುಮಾರ್​​ ಮಾತನಾಡಿದ್ದಾರೆ. ಏನಿದು ಐಟಿ ದಾಳಿ ಕತೆ 

ಈಗ ಎಲ್ಲೆಲ್ಲೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿರುವ ಸುದ್ದಿಗಳೇ ಬರುತ್ತಿವೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ಒಂದೆಡೆ ರೇಡ್​​ ಮಾಡಿದ್ರೆ ಆದಾಯ ತೆರಿಗೆ ಅಧಿಕಾರಿಗಳು ಮತ್ತೊಂದೆಡೆ, ಒಟ್ಟಿನಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ದಾಳಿಗಳು ಹೆಚ್ಚಾಗಿವೆ. ಇಂಥ ಸಂದರ್ಭದಲ್ಲಿ ನಟ ಯಶ್​ ಅವರ ಅಮ್ಮ ಪುಷ್ಪಾ ಅರುಣ್​ಕುಮಾರ್​ ಅವರು, ತಮ್ಮ ಮನೆಯ ಮೇಲೆ ಆಗಿರುವ ಐಟಿ ರೇಡ್​ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು 2020ರ ಸಮಯದಲ್ಲಿ. ಸ್ಯಾಂಡಲ್​ವುಡ್​ ಕಲಾವಿದರು ಹಾಗೂ ನಿರ್ಮಾಪಕರಿಗೆ ಶಾಕ್​ ಕೊಟ್ಟ ದಿನವದು. ಬೆಂಗಳೂರಿನಲ್ಲಿ ಸುಮಾರು 200 ಅಧಿಕಾರಿಗಳು ರೇಡ್​ ನಡೆಸಿದ್ದರು. ಪುನೀತ್​ ರಾಜ್​ಕುಮಾರ್​ ಮನೆ, ಸುದೀಪ್​, ಶಿವರಾಜ್​ಕುಮಾರ್​ ಮನೆ ಹಾಗೂ ಯಶ್​ ಮನೆಯ ಮೇಲೆ ದಾಳಿ ನಡೆದಿತ್ತು. ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದರು.

ಇದರ ಜೊತೆ, ಖ್ಯಾತ ನಿರ್ಮಾಪಕರ ಮೆನಯ ಮೇಲೂ ದಾಳಿ ನಡೆದಿತ್ತು. ರಾಕ್​ಲೈನ್​ ವೇಂಟಕೇಶ್​ ಮನೆ ಮೇಲೆ 8 ಅಧಿಕಾರಿಗಳ ತಂಡ ದಾಳಿ ನಡೆಸಿದ್ದರು. 'ಕೆಜಿಎಫ್' ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ 'ವಿಲನ್' ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್ ಮನೆ ಮೇಲೂ ಐಟಿ ರೇಡ್​ ನಡೆದಿತ್ತು. ತೆರಿಗೆ ಪಾವತಿಯಲ್ಲಿ‌ ಭಾರೀ ಗೋಲ್‌ಮಾಲ್‌ ಆಗಿತ್ತು ಎನ್ನುವ ಆರೋಪವಿತ್ತು. ಕನ್ನಡ ಚಿತ್ರಗಳ ಸಂಖ್ಯೆ ಹಾಗೂ ಬಜೆಟ್ ಜಾಸ್ತಿಯಾಗಿದೆ. ಆದಾಗ್ಯೂ ಆದರೆ ತೆರಿಗೆ ಸಂದಾಯ ಪ್ರಮಾಣದಲ್ಲಿ ಯಾವುದೇ ಹೆಚ್ಚಳ ಆಗಿಲ್ಲ. ಈ ಹಿನ್ನಲೆ ಐಟಿ ದಾಳಿ ನಡೆದಿದೆ ಎಂದು ಸದ್ದಾಗಿತ್ತು. ಈ ಸಮಯದಲ್ಲಿ ನಡೆದ ಘಟನೆಯ ಬಗ್ಗೆ ಪುಷ್ಪಾ ಅವರು ಕನ್ನಡ ಪಿಕ್ಚರ್ಸ್​ಗೆ ನೀಡಿರುವ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ನಮ್ಮ ಮನೆಗೂ ಎಷ್ಟು ದುಡ್ಡಿದೆ ಎಂದು ಕೇಳುತ್ತಾ ಅಧಿಕಾರಿಗಳು ಬಂದರು. ಆ ಸಮಯದಲ್ಲಿ ಒಂದಿಷ್ಟು ನೋಟ್​ಗಳ ಮೇಲೆ ಯಶ್​ ಫೋಟೋ ಹಾಕಿ ಅಭಿಮಾನಿಗಳು ನನಗೆ ಕೊಟ್ಟಿದ್ದರು. ಅದನ್ನು ಬೀರುವಿನ ಮೇಲೆ ಅಂಟಿಸಿಕೊಂಡಿದ್ದೆ. ಇಷ್ಟೇ ಇರೋದು ನೋಡಿ ಎಂದು ಅಧಿಕಾರಿಗಳಿಗೆ ಹೇಳಿದೆ. ಅವರು ಎಲ್ಲಾ ಚೆಕ್​ ಮಾಡಿ ವಾಪಸ್​ ಹೊರಟುಹೋದರು ಎಂದು ಅಂದು ನಡೆದ ತಮಾಷೆಯ ಘಟನೆಯ ಬಗ್ಗೆ ಹೇಳಿದ್ದಾರೆ.

ಇನ್ನು, ಯಶ್ (Yash) ಅವರ ತಾಯಿ ಪುಷ್ಪ ಅರುಣ್ ಕುಮಾರ್ ಅವರ ಬಹುನಿರೀಕ್ಷಿತ ಕೊತ್ತಲವಾಡಿ (Kothalavadi) ಚಿತ್ರ ಆಗಸ್ಟ್​1ರಂದು ತೆರೆ ಕಂಡಿದ್ದು, ಬಾಕ್ಸ್​ ಆಫೀಸ್​​​ ನಿರೀಕ್ಷೆಗಳನ್ನು ತಲುಪುವಲ್ಲಿ ಹಿನ್ನೆಡೆ ಕಂಡಿದೆ ಎಂದು ಹೇಳಲಾಗುತ್ತಿದೆ. ಯಶ್​ ಅವರ ಅಮ್ಮನಾಗಿರುವ ಕಾರಣ, ಜನರು ಸಹಜವಾಗಿ ಚಿತ್ರಮಂದಿರಕ್ಕೆ ಬರುತ್ತಾರೆ ಎಂದುಕೊಳ್ಳಲಾಗಿತ್ತು. 'ಕೊತ್ತಲವಾಡಿ' ಬಿಡುಗಡೆಗೂ ಮುನ್ನ ಕ್ರೇಜ್​​ ಕ್ರಿಯೇಟ್​ ಮಾಡಿತ್ತು. ಆದರೆ ಅದು ನಿರೀಕ್ಷಿತ ಪ್ರಮಾಣದಲ್ಲಿ ಸಕ್ಸಸ್​ ಕಂಡಿಲ್ಲ.ಈ ಬಗ್ಗೆಯೂ ಹಿಂಮದೆ ಸಂದರ್ಶನದಲ್ಲಿ ಪುಷ್ಪಾ ಅವರು, ಕಾರಣ ನೀಡಿದ್ದರು. ಸಿನಿಮಾದ ಬಗ್ಗೆ ನಮ್ಮ ಪ್ರಚಾರ ನೋಡಿ ಭಯ ಇತ್ತು ಅವರಿಗೆ, ಸಿನಿಮಾ ಚೆನ್ನಾಗಿ ಓಡತ್ತೆ ಎಂದು. ಅದೇ ಕಾರಣಕ್ಕೆ ನಮ್ಮ ಸಿನಿಮಾ ಬಗ್ಗೆ ಮೊದಲೇ ಸುಳ್ಳು ಸುದ್ದಿ ಹಬ್ಬಿಸಿಬಿಟ್ಟಿದ್ದಾರೆ. ಇದು ನನಗೆ ಮೊದಲು ಗೊತ್ತೇ ಆಗಲಿಲ್ಲ. ಅದು ಈಗ ಗೊತ್ತಾಯ್ತು ನನಗೆ. ಏನು ಬೇಕೋ ಅದನ್ನು ಮಾಡಿದ್ದೇನೆ. ಸುಳ್ಳು ಸುದ್ದಿ ಹರಡಿಸಿದ್ದನ್ನೆಲ್ಲಾ ತೆಗೆಸಿದ್ದೇನೆ ಎಂದು ಪುಷ್ಪಾ ಹೇಳಿದ್ದರು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ