
ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾ ಇದೇ ಏಪ್ರಿಲ್ 1ರಂದು ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆ ಮಾಡಲಾಗಿದ್ದು ಮೂರನೇ ಹಾಡು ಫೆ.21ಕ್ಕೆ ಬಿಡುಗಡೆ ಮಾಡುವುದಾಗಿ ತಂಡ ಮಾಹಿತಿ ನೀಡಿದ್ದು, ಆದರೆ ಪುನೀತ್ ವಿಡಿಯೋ ಮಾಡುವ ಮೂಲಕ ಬೇಸರದ ಸುದ್ದಿ ಹಂಚಿಕೊಂಡಿದ್ದಾರೆ.
ಪುನೀತ್ ರಾಜ್‌ಕುಮಾರ್ 'ಫ್ಯಾಮಿಲಿ ಫ್ಯಾಕ್' ಹೇಗಿರಲಿದೆ?
'ನಮ್ಮ ಯುವರತ್ನ ಚಿತ್ರದ 3ನೇ ಹಾಡು 21ಕ್ಕೆ ರಿಲೀಸ್ ಮಾಡಬೇಕಿತ್ತು. ಆದರೆ ಸಣ್ಣದೊಂದು ತಾಂತ್ರಿಕ ಸಮಸ್ಯೆಯಿಂದ ರಿಲೀಸ್ ಮುಂದಕ್ಕೆ ಹಾಕಲಾಗಿದೆ. ಆದಷ್ಟು ಬೇಗ ಆ ಹಾಡನ್ನು ರಿಲೀಸ್ ಮಾಡುತ್ತೇವೆ ಎಲ್ಲರೂ ಸಹಕರಿಸುತ್ತೀರಿ ಎಂದು ಭಾವಿಸುತ್ತೇವೆ,' ಎಂದು ಪುನೀತ್ ಮಾತನಾಡಿದ್ದಾರೆ.
"
ಯುವರತ್ನ ಚಿತ್ರದ ಪ್ರಮೋಷನ್ ಆರಂಭವಾಗಿದ್ದು, ಸಿನಿಮಾ ರಿಲೀಸ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇದು ಯಾವುದೋ ಸಣ್ಣ ತಾಂತ್ರಿಕ ದೋಷವೆಂದು ಕೊಂಡು ಅಭಿಮಾನಿಗಳು ಸುಮ್ಮನಾಗಿದ್ದಾರೆ. ಆನಂದ್ ರಾಮ್ ಹಾಗೂ ಪುನೀತ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ.
ಗೋಕರ್ಣ ಬೀಚ್‌ನಲ್ಲಿ ಅಪ್ಪು ಪವರ್‌ಫುಲ್ ಸ್ಟಂಟ್!
ಬಿಗ್ ಬಜೆಟ್ ಸಿನಿಮಾ ಪೊಗರು ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ದಾಖಲೆ ಮಾಡುತ್ತಿದೆ. ರಾಬರ್ಟ್ ಹಾಗೂ ಯುವರತ್ನ ರೆಕಾರ್ಡ್ ಬ್ರೇಕ್ ಮಾಡುವುದರಲ್ಲಿ ಅನುಮಾವಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.