ಅಪ್ಪು ಮತ್ತು ಕಾಂತಾರ ಸಿನಿಮಾಗಿರುವ ಸಂಬಂಧದ ಬಗ್ಗೆ ಸತ್ಯವೊಂದನ್ನು ಬಹಿರಂಗ ಪಡಿಸಿದ ಕಾರ್ತಿಕ್...
ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಕಾಂತಾರ ಸಿನಿಮಾ ಸೆಪ್ಟೆಂಬರ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಜೊತೆಯಾಗಿ ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಅನೇಕರಿದ್ದಾರೆ. ಕೆಜಿಎಫ್ ಖ್ಯಾತಿಯ ವಿಜಯ್ ಕಿರಗಂದೂರ್ ಅವರು ಹೊಂಬಾಳೆ ಫಿಲ್ಮ್ ಬ್ಯಾನರ್‌ನಲ್ಲಿ ಮೂಡಿ ಬರುತ್ತಿದೆ. ನಟನೆ ಮಾತ್ರವಲ್ಲ ರಿಷಬ್ ಈ ಚಿತ್ರಕ್ಕೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ.
ಪುನೀತ್ ರಾಜ್‌ಕುಮಾರ್ ಮಾಡಬೇಕಿತ್ತು?
ಕಾಂತಾರ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಬೇಕಿತ್ತಂತೆ. ಹೀಗಂತ ನಿರ್ಮಾಪಕ ಕಾರ್ತಿಕ್ ಗೌಡ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ಅಪ್ಪು ಬಾಸ್ ಒಂದು ಕ್ಲಿಪ್ ಆದರೂ ನೋಡಿದ್ದಾರಾ ಕಾಂತಾರಾ ಸಿನಿಮಾದು' ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಮಾಡಿದ್ದಾರೆ.
'ಯಾರಿಗೂ ತಿಳಿಯದ ವಿಚಾರ. ಅಪ್ಪು ಸರ್ ಕಾಂತಾರ ಸಿನಿಮಾದಲ್ಲಿ ಲೀಡ್ ಪಾತ್ರದಲ್ಲಿ ನಟಿಸಬೇಕಿತ್ತು. ಒಂದು ನಿಗದಿತ ಅವಧಿಯಲ್ಲಿ ಸಿನಿಮಾ ಚಿತ್ರೀಕರಣ ಮಾಡಬೇಕಿತ್ತು ಆದರೆ ಅಪ್ಪು ಸರ್‌ಗೆ ದಿನಾಂಕ ಕ್ಲಾಸ ಆಗುತ್ತಿದ್ದ ಕಾರಣ ಅವರೇ ರಿಷಬ್ ಶೆಟ್ಟಿ ಅವರನ್ನು ಲೀಡ್ ಪಾತ್ರಕ್ಕೆ ಆಯ್ಕೆ ಮಾಡಿ ನಟಿಸುವಂತೆ ಸಲಹೆ ಕೊಟ್ಟರು' ಎಂದು ಕಾರ್ತಿಕ್ ಉತ್ತರ ಕೊಟ್ಟಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮರ್ ಪ್ರತಿಯೊಂದು ಚಿತ್ರದಲ್ಲೂ ಸಖತ್ ಡಿಫರೆಂಟ್ ಆಗಿ ಕಾಣಿಸುತ್ತಾರೆ. ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡು ಮಹತ್ವ ಸಾರುತ್ತಾರೆ. ಅವರ ಕೊನೆ ಸಿನಿಮಾ ಜೇಮ್ಸ್ ಮತ್ತು ಲಕ್ಕಿಮ್ಯಾನ್ ಮೂಲಕ ಸಿನಿ ರಸಿಕರ ಮನಸ್ಸಿನಲ್ಲಿ ಉಳಿದುಕೊಂಡು ಬಿಟ್ಟಿದ್ದಾರೆ. ಅಪ್ಪು ಮತ್ತೊಂದು ಕೊನೆ ಸಿನಿಮಾ ಗಂಧದಗುಡಿ ಅಕ್ಟೋಬರ್ ರಿಲೀಸ್ ಆಗಲಿದೆ. ಒಂದೇ ವರ್ಷದಲ್ಲಿ ಅಪ್ಪು ಬಾಸ್ ಮೂರು ಸಿನಿಮಾ ರಿಲೀಸ್ ಆಗಲಿದೆ. ಕಾಂತಾರ ಸಿನಿಮಾದಲ್ಲೂ ಅಭಿನಯಿಸಿದ್ದರೆ ನಾಲ್ಕು ಸಿನಿಮಾ ಆಗುತ್ತಿತ್ತು, ಅಪ್ಪುನ ಮಿಸ್ ಮಾಡಿಕೊಳ್ಳುತ್ತೀವಿ ಎಂದಿದ್ದಾರೆ ಅಭಿಮಾನಿಗಳು.
ಕಾಂತಾರ ಸಿನಿಮಾ ಬಗ್ಗೆ ನೆಟ್ಟಿಗರು ಕೇಳಿರುವ ಪ್ರಶ್ನೆಗಳಿಗೆ ಕಾರ್ತಿಕ್ ಉತ್ತರ ಕೊಟ್ಟಿದ್ದಾರೆ.
ಜಾನರ್ ಯಾವುದು?
ಆಕ್ಷನ್ ಡ್ರಾಮ್ ಮತ್ತು ಕೊಂಚ ಫ್ಯಾಂಟಸಿ
ಯಶ್ ಬಾಸ್ ಅಪ್ಡೇಟ್ ಕೊಡಿ
ಯಶ್ ಸರ್ ಕಾಂತಾರ ಸಿನಿಮಾದಲ್ಲಿ ನಟಿಸಿಲ್ಲ, ಇದೇ ಹೊಸ ಅಪ್ಡೇಟ್.
ಮಾಡರ್ನ್ ಹುಡುಗಿಯಾಗಿ ಮೂಗಿನ ಎರಡೂ ಸೈಡ್ ಚುಚ್ಚಿಸಿಕೊಂಡ Kantara ನಟಿ ಸಪ್ತಮಿ ಗೌಡ!
ಸ್ವಮೇಕ್ ಕಥೆನಾ? ಕಥೆ ಕಂಪೋಸ್ ಮಾಡಿರುವುದು ಹೇಗೆ?
ರಿಷಬ್ ಶೆಟ್ಟಿ ಅವರು ತಮ್ಮ ಸ್ನೇಹಿತರ ಜೊತೆ ತಮ್ಮ ಜಾಗದ ಸುತ್ತ ಆಗುತ್ತಿರುವ ವಿಚಾರಗಳನ್ನು ಚರ್ಚೆ ಮಾಡಿ ಈ ಕಥೆಯನ್ನು ಬರೆದಿರುವುದು.
ಯಾವ ಭಾಷೆಯಲ್ಲಿ ಬಿಡುಗಡೆ?
ಕನ್ನಡ ಭಾಷೆಯಲ್ಲಿ ಮಾತ್ರ ಕಾಂತಾರ ಸಿನಿಮಾ ರಿಲೀಸ್ ಆಗಲಿದೆ.
ಟ್ರೈಲರ್ mindblowing. ಯಾಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿಲ್ಲ?
A film for Indian audience is one of the Indian Languages.
ನಮ್ಮ ಸಂಸ್ಕೃತಿಯನ್ನು ಎತ್ತಿಡಿಯುವ ಸಿನಿಮಾ ಇದು. ಎರಡನೇ ಭಾಗ ಮಾಡಲು ಯಾಕೆ ಪ್ಲ್ಯಾನ್ ಮಾಡಿಲ್ಲ?
ಎರಡನೇ ಭಾಗ ಮಾಡಿಲ್ಲ ಏಕೆಂದರೆ ನಾವು ಒಂದೇ ಭಾಗದಲ್ಲಿ ಸಂಪೂರ್ಣ ಕಥೆ ಹೇಳಿ ಬಿಟ್ಟೆವು.
ಟ್ರೈಲರ್‌ನಲ್ಲಿ ವರಹ ಅವತಾರ ಪ್ರಕೃತಿಯನ್ನು ಉಳಿಸುವುದ ಬಗ್ಗೆ ಮಾತನಾಡಿದೆ. ಇಲ್ಲಿ ಪ್ರಕೃತಿನಾ ನಂಬಿಕೆನಾ?
ಅದ್ಭುತವಾಗಿ ಗಮನಿಸಿದ್ದೀರಾ. ಎರಡನ್ನೂ ಸಮವಾಗಿ ಬ್ಯಾಲೆನ್ಸ್ ಮಾಡಲಾಗಿದೆ. ಸಂಪೂರ್ಣ ಮಾಹಿತಿಗೆ ಸಿನಿಮಾ ನೋಡಿ..
Rishab Shetty Kantara ಶೂಟಿಂಗ್ ಕೊನೆಗೆ ನಿಂಗಿದು ಬೇಕಿತ್ತ ಮಗನೇ ಹಾಡು ನೆನಪಾಗ್ತಿತ್ತು!
ರಿಷಬ್ ಶೆಟ್ಟಿ ಮಾತು:
'ಕಾಂತಾರ ಚಿತ್ರದಲ್ಲಿನ ಕೆಲವೊಂದು ಘಟನೆಗಳು ನನ್ನ ಬದುಕಿನಲ್ಲಿ ನೋಡಿದ್ದು. ಮುಖ್ಯ ಕಥೆಯೊಳಗೆ ಕೆಲವು ನಾನು ನೋಡಿದ ಅಂಶಗಳೂ ಸೇರಿಕೊಂಡಿವೆ.ದೊಡ್ಡ ಕ್ಯಾನ್ವಾಸ್ ಚಿತ್ರವಿದು. ನನ್ನ ಈವರೆಗಿನ ಸಿನಿಮಾ ಜರ್ನಿಯಲ್ಲಿ ಯಾವತ್ತೂ ಇಷ್ಟುದೊಡ್ಡ ಬಜೆಟ್ ಸಿನಿಮಾದಲ್ಲಿ ಕೆಲಸ ಮಾಡಿಲ್ಲ.ಪೌರಾಣಿಕ ಶಿವನ ರೇಜ್ ಈ ಚಿತ್ರದ ನಾಯಕ ಶಿವನ ಪಾತ್ರಕ್ಕಿದೆ. ಇದು ಆಗ್ರ್ಯಾನಿಕ್ ಆಗಿ ಬಂದ ಹೆಸರು, ಅಷ್ಟೇ ಸಹಜವಾಗಿ ಇಡೀ ಸಿನಿಮಾ ವ್ಯಾಪಿಸಿರುವ ಪಾತ್ರ. ಆತನ ಸಿಟ್ಟು, ಎನರ್ಜಿ ಎಂಥಾದ್ದು ಅನ್ನೋದು ಟ್ರೇಲರ್‌ನಲ್ಲಿ ಗೊತ್ತಾಗುತ್ತೆ. ಧರ್ಮಸ್ಥಳದ ಮಂಜುನಾಥನಿಂದಲೇ ಸಿನಿಮಾ ಆರಂಭವಾದದ್ದು, ಇಡೀ ಸಿನಿಮಾ ಪ್ರೊಸೆಸ್ ಒಂದು ಸ್ಪಿರಿಚ್ಯುವಲ್ ಜರ್ನಿ.ಕಂಬಳದ್ದು ಮತ್ತೊಂದು ಅನುಭವ. ಈ ಚಿತ್ರಕ್ಕಾಗಿ 36 ರೌಂಡ್ ಕೋಣ ಓಡಿಸಿದ್ದೇನೆ. ಅದಕ್ಕಾಗಿ ಸಾಕಷ್ಟುಶ್ರಮವನ್ನೂ ಹಾಕಿದ್ದೀನಿ. ಕಂಬಳ ಕಥೆಗೆ ಪೂರಕವಾಗಿ ಬರುತ್ತದೆಯೇ ಹೊರತು ಅದರ ಮೇಲೇ ಕಥೆ ನಡೆಯೋದಿಲ್ಲ. ಇಡೀ ಸಿನಿಮಾ ಪ್ರಕೃತಿ ಮತ್ತು ಮಾನವ ಸಂಘರ್ಷದ ಮೇಲೆ ನಡೆಯುತ್ತೆ'