
ಶ್ರೀನಿ ನಿರ್ದೇಶಿಸಿ ನಟಿಸಿರುವ 'ಓಲ್ಡ್ ಮಾಂಕ್' ಚಿತ್ರದ ಟ್ರೇಲರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದ್ದಾರೆ. ‘ಡಿಫರೆಂಟ್ ಆಗಿರುವ ಟ್ರೇಲರ್‌ನಂತೆ ಸಿನಿಮಾವೂ ಒಳ್ಳೆಯ ಮನರಂಜನೆ ನೀಡಲಿ,’ ಎಂದು ಪುನೀತ್ ಇಡೀ ತಂಡಕ್ಕೆ ಹಾರೈಸಿದ್ದಾರೆ. ನಾಯಕಿ ಅದಿತಿ ಪ್ರಭುದೇವ, ಆನಂದ್ ಆಡಿಯೋದ ಶ್ಯಾಮ್ ಹಾಗೂ ಚಿತ್ರ ತಂಡದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಚಿತ್ರದಲ್ಲಿ ಓಲ್ಡ್ ಮಾಂಕ್ ಅಂದರೆ ನಾರದ. ಪ್ರೀತಿಸಿ ಮದುವೆಯಾಗುವ ಶಾಪಕ್ಕೆ ತುತ್ತಾಗಿ ಭೂಲೋಕಕ್ಕೆ ಬರುವ ನಾರದ ಏನೆಲ್ಲಾ ರಂಪಾಟ ಮಾಡಿದ ಅನ್ನುವುದು ಕತೆಯ ಒನ್‌ಲೈನ್. ಅದಿತಿ ಪ್ರಭುದೇವ, ಹಿರಿಯ ನಟ ರಾಜೇಶ್, ಎಸ್ ನಾರಾಯಣ್, ಸುನೀಲ್ ರಾವ್ ಮತ್ತಿತರರು ನಟಿಸಿದ್ದಾರೆ. ಪ್ರದೀಪ್ ಶರ್ಮಾ ಚಿತ್ರದ ನಿರ್ಮಾಪಕರು.
ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ಹಲವು ವರ್ಷಗಳ ನಂತರ ಹಿರಿಯ ನಟ ರಾಜೇಶ್ ಬಣ್ಣ ಹಚ್ಚುತ್ತಿದ್ದಾರೆ. 'ಚಿತ್ರದಲ್ಲಿರುವ ಒಂದು ವಿಶೇಷ ಪಾತ್ರದ ಮೂಲಕ ರಾಜೇಶ್ ಮತ್ತೆ ಬಣ್ಣ ಹಚ್ಚಿದರೆ ಹೇಗಿರುತ್ತದೆ ಎನ್ನುವ ಆಲೋಚನೆ ಬಂತು. ಅವರನ್ನು ಭೇಟಿ ಮಾಡಿ ಕಥೆ ಹೇಳಿದೆ ಖುಷಿಯಿಂದ ಒಪ್ಪಿ ಕೊಂಡಿದ್ದಾರೆ.ನಮ್ಮ ಚಿತ್ರದಲ್ಲಿ ಹಿರಿಯ ನಟರೊಬ್ಬರು ಇದ್ದಾರೆ ಎಂದರೆ ನಮಗೆ ಹೆಮ್ಮೆ' ಎಂದು ಶ್ರೀನಿ ಈ ಹಿಂದೆ ಹೇಳಿದ್ದರು. ಓಲ್ಡ್ ಮಾಂಕ್ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲ, ತೆಲುಗಿನಲ್ಲೂ ಬಿಡುಗಡೆ ಮಾಡಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.