ನಟ ಶ್ರೇಯಸ್‌ಗೆ ಲಾಂಗ್‌ ಹಿಡಿಯಲು ಕಲಿಸಿದ ಶಿವಣ್ಣ!

By Suvarna NewsFirst Published Aug 28, 2021, 1:01 PM IST
Highlights

ಕೆ.ಮಂಜು ಪುತ್ರನಿಗೆ ಲಾಂಗ್ ಹಿಡಿಯುವ ಸ್ಟೈಲ್ ಹೇಳಿಕೊಟ್ಟ ಹ್ಯಾಟ್ರಿಕ್ ಹೀರೋ. ಇದು ರೌಡಿಸಮ್ ಸಿನಿಮಾವೇ?

'ಪಡ್ಡೆ ಹುಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶ್ರೇಯಸ್‌, ನಿರ್ಮಾಪಕ ಕೆ.ಮಂಜು ಅವರ ಪುತ್ರ. ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂದು ತಮ್ಮ ಶೈಯಲ್ಲಿ ವರ್ಕೌಟ್, ಆ್ಯಕ್ಟಿಂಗ್ ಕ್ಲಾಸ್ ತೆಗೆದು ಕೊಂಡು ಶ್ರಮಿಸುತ್ತಿದ್ದಾರೆ. ಮೊದಲ ಚಿತ್ರ ಹಿಟ್ ಅಗುತ್ತಿದ್ದಂತೆ, ನಿರ್ದೇಶಕ ನಂದ ಕಿಶೋರ್‌ ಜೊತೆ ಮತ್ತೊಂದು ಚಿತ್ರಕ್ಕೆ ಸಿಹಿ ಮಾಡಿದ್ದಾರೆ.

'ರಾಣಾ' ಚಿತ್ರದಲ್ಲಿ ನಾಯಕನಾಗಿರುವ ಶ್ರೇಯಸ್‌ ಕೆ. ಮಂಜು ಅವರಿಗೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಆ್ಯಕ್ಷನ್‌ ಸೀನ್‌ಗಳಲ್ಲಿ ಲಾಂಗ್‌ ಹಿಡಿದು ನಟಿಸುವ ಮ್ಯಾನರಿಸಂ ತಿಳಿಸಿಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಅಗುತ್ತಿದೆ. ನಂದ ಕಿಶೋರ್‌ ನಿರ್ದೇಶನದ ಈ ಚಿತ್ರವನ್ನು ಗುಜ್ಜಲ್‌ ಪುರುಷೋತ್ತಮ್‌ ನಿರ್ಮಿಸಿದ್ದಾರೆ.

ಆ್ಯಕ್ಷನ್ ಹೀರೋ ರಾಣ ಆದ ಶ್ರೇಯಸ್; ನಂದಕಿಶೋರ್ ಹಸನ್ಮುಖ, ಕೆ.ಮಂಜು ಭಾವುಕ

'ರಾಣಾ ಚಿತ್ರತಂಡ ಇವತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಜೊತೆಗಿದ್ದೀವಿ. ಇಡೀ ಭಾರತದಲ್ಲಿ, ಕರ್ನಾಟಕದಲ್ಲಿ ಓನ್ ಆಂಡ್ ಓನ್ಲಿ ಮ್ಯಾನ್ ಒಂದು ಲಾಂಗ್ ಹಿಡಿದರೆ, ಅದಕ್ಕೆ ಒಂದು ಗ್ರಿಪ್ ಇರೋದು ಒಂದು ಸ್ಟೈಲ್ ಇರೋದು ಅದರಲ್ಲೂ ನಮ್ಮ ಚಿತ್ರರಂಗಕ್ಕೆ ಲಾಂಗ್ ಪರಿಚಯ ಮಾಡಿಸಿಕೊಟ್ಟಿದ್ದು ನಮ್ಮಣ್ಣ ಶಿವರಾಜ್‌ಕುಮಾರ್ ಸರ್. 'ರಾಣಾ' ಚಿತ್ರದ ಮೂಲಕ ನಟ ಶ್ರೇಯಸ್ ಮಂಜು ಫಸ್ಟ್ ಟೈಂ ಲಾಂಗ್ ಹಿಡಿಯುತ್ತಿದ್ದಾರೆ. ಅದು ಹೇಗೆ, ಏನು? ಅಂತ ಶಿವಣ್ಣ ಅವರಿಂದಾನೆ ಕಲಿಯಬೇಕು ಅಂತ ನಾವು ಕೇಳಿಕೊಂಡಿದ್ದಕ್ಕೆ ಶಿವಣ್ಣ ಅವರು ತುಂಬಾ ಪ್ರೀತಿಯಿಂದ ನಮ್ಮನ್ನ ಕರೆಯಿಸಿಕೊಂಡಿದ್ದಾರೆ. ನೀವು ಶ್ರೇಯಸ್ ಅವರಿಗೆ ಶೀರ್ವಾದ ಮಾಡಬೇಕು,' ಎಂದು ನಿರ್ದೇಶಕ ನಂದಕಿಶೋರ್ ಮಾತನಾಡಿದ್ದಾರೆ.

 

click me!