ಅಯ್ಯಪ್ಪ ಸ್ವಾಮಿ ನಂತರ 'ಪುನೀತ್ ರಾಜ್‌ಕುಮಾರ್ ಮಾಲೆ' ಹಾಕುತ್ತಿರುವ ಅಭಿಮಾನಿಗಳು; ವ್ರತ ಮಾಡೋ ವಿಧಾನ ಹೀಗಿದೆ..

By Vaishnavi ChandrashekarFirst Published Feb 22, 2023, 1:16 PM IST
Highlights

ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಮಾಲೆ ಮಾಹಿತಿ ವೈರಲ್ ಆಗುತ್ತಿದೆ. ಮಾರ್ಚ್‌ ತಿಂಗಳಿನಲ್ಲಿ ನಡೆಯುವ ಅಪ್ಪು ದೇವರ ಮಾಲೆ ಆಚರಣೆಯ ವಿಧಾನ ಹೀಗಿದೆ.... 

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಒಂದುವರೆ ವರ್ಷ ಕಳೆದಿದೆ. ಅಪ್ಪು ಸ್ಮರಿಸದೆ ಒಂದು ದಿನವೂ ಒಂದು ಕಾರ್ಯವೂ ಆರಂಭವಾಗಿಲ್ಲ. ಅಭಿಮಾನಿಗಳೇ ದೇವರು ಎಂದ ರಾಜಣ್ಣ ಹೇಳುತ್ತಿದ್ದರು ಆದರೆ ಅಭಿಮಾನಿಗಳಿಗೆ ಅಪ್ಪು ದೇವರಾಗಿ ಬಿಟ್ಟರು ಎಂದು ಎಲ್ಲೆಡೆ ಬರೆದಿರುವ ಸಾಲುಗಳನ್ನು ನೋಡಬಹುದು. ಈಗ ಸಾಮಾಜಿಕ ಜಾಲತಾಣದಲ್ಲಿ ಒಂದು ಪತ್ರ ವೈರಲ್ ಆಗುತ್ತಿದೆ. ಅಪ್ಪು ದೇವರ ಮಾಲೆ ಧರಿಸಿ ವ್ರತ ಆಚರಣೆಯ ಮಾಡುವ ವಿಧಾನ ಎಂದು. 

ಹೌದು! ಇಷ್ಟು ದಿನ ನೀವು ಅಯ್ಯಪ್ಪ ಸ್ವಾಮಿ ಮಾಲೆ, ಓಂ ಶಕ್ತಿ ಮಾಲೆ ಹಾಕುವುದನ್ನು ಕೇಳಿದ್ದೀರಿ ಆದರೆ ಈ ವರ್ಷ ಇದೇ ಮೊದಲು ಅಪ್ಪು ದೇವರ ಮಾಲೆ ಎಂದು ಅಭಿಮಾನಿಗಳು ಆರಂಭಿಸಿದ್ದಾರೆ.ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿರುವ ಅಪ್ಪು ನಿಜಕ್ಕೂ ದೇವರು ಹೀಗಾಗಿ ಅವರಿಗೆ ವಿಶೇಷ ಪೂಜೆ ಸಲ್ಲಿಸಬೇಕು ಎಂದು ಈ ಆಚರಣೆ ಆರಂಭಿಸಲಾಗಿದೆ. ಮಾರ್ಚ್‌ 18ರಂದು ಅಪ್ಪು ಹುಟ್ಟುಹಬ್ಬವೂ ಇದೆ. 

ಹೃದಯಾಘಾತಕ್ಕೆ ಜೀವ ತೊರೆದ ಸೌತ್‌ ಇಂಡಸ್ಟ್ರಿಯ ಕಣ್ಮಣಿಗಳಿವರು

ಯಾವತ್ತು:

'ದಿನಾಂಕ ಮಾರ್ಚ್‌ 1, 2023ರಂದು ಮಾಲಾಧಾರಿಗಳು ಮಾಲೆಯನ್ನು ಧರಿಸಬಹುದು ಮತ್ತು ದಿನಾಂಕ ಮಾರ್ಚ್‌ 17,2023ರಂದು ಎಲ್ಲಾ ಅಪ್ಪು ಅಭಿಮಾನಿಗಳು ವ್ರತವನ್ನು ಆಚರಿಸಿ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ವಿಶೇಷ ಪೂಜೆ ಸಲ್ಲಿಸಿ ದಿನಾಂಕ ಮಾರ್ಚ್‌ 18, 2023ರಂದು ಬೆಳಗಿನ ಜಾವ ಅಪ್ಪು ದೇವರ ಪುನ್ಯ ಭೂಮಿಗೆ ಎಲ್ಲರೂ ಹೋಗಿ ದರ್ಶನ ಪಡೆದುಕೊಳ್ಳುವುದು'

ಪೂಜೆ ವಿಧಾನ:

'ಮಾಲೆ ಹಾಕುವ ವಿಧಾನ ಅಪ್ಪು ದೇವರು ಇರುವ ಡಾಲರ್ ಮತ್ತು ಕೇಸರಿ ಶಾಕು, ಕೇಸರಿ ಪಂಚೆ, ಕೇಸರಿ ಶರ್ಟ್‌ ತೊಟ್ಟು ಅಪ್ಪು ದೇವರ ಫೋಟೋವನ್ನು ಇಟ್ಟು ಪೂಜೆ ಮಾಡುವುದು.'

 ಸ್ನಾನ ವಿಧಾನ:

'ಸ್ನಾನ ಮಾಡೋ ವಿಧಾನ ಬೆಳಗ್ಗೆ ಸೂರ್ಯ ಹುಟ್ಟುವ ಮೊದಲು ಸ್ನಾಗ ಹಾಗೂ ಸಂಜೆ ಸೂರ್ಯ ಮುಳುಗಿದ ನಂತರ ಸ್ನಾನ.

Puneeth Rajkumar ಸಮಾಧಿಗೆ ಪೂಜೆ ಸಲ್ಲಿಸಿದ ಜಾನಿ ಮಾಸ್ಟರ್; ಅತ್ತಿಗೆಯನ್ನು ಭೇಟಿ ಮಾಡಿದೆ ಎಂದು ಪೋಸ್ಟ್‌

ಪ್ರದಾಸ:

ಪ್ರದಾಸಸ ವಿದಾಯ ಬೆಳಗ್ಗೆ ಉಪಹಾರ (ಟಿಫಿನ್), ಮಧ್ಯಾಹ್ನ ಊಟ ಹಾಗೂ ರಾತ್ರಿ ಉಪಹಾರ (ಟಿಫಿನ್).

ಸೂಚನೆ:

ಈ ಮಾಲೆ ಹಾಕುವರೆಲ್ಲರೂ ಯಾವ ಕೆಟ್ಟ ಚಟಗಳಿಗೆ ಹೋಗಬಾರದು ಹಾಗಿದ್ದರೆ ಮಾಲೆ ಹಾಕಿ. ಮಾಲೆ ಹಾಕುವ ಎಲ್ಲಾ ಅಭಿಮಾನಿಗಳು ಐದು ದಿವಸ, 11 ದಿವಸ, ಒಂದು ದಿನವ ಮಾಲೆ ಹಾಕಬಹುದು. ಮಾಲೆ ಹಾಕುವ ಎಲ್ಲಾ ಅಪ್ಪು ಸ್ವಾಮಿಗಳಿಗೆ ಒಂದು ವಿನಂತಿ, ನಾವು ಇಲ್ಲಿಂದ ಮಾಲೆ ಪುಣ್ಯಭೂಮಿಗೆ ಹೋಗುವಾಗ ನಮ್ಮ ಕೈಲಾದ ದಿನಸಿಗಳನ್ನು ಇರುಮುಡಿಯಾಗಿ ತೆಗೆದುಕೊಂಡು ಹೋಗತಕ್ಕದ್ದು ಅದರಲ್ಲಿ ಅಕ್ಕಿ ಬೆಳೆ ಎಣ್ಣೆ ಇನ್ನು ಮುಂತಾದ ದಿನಸಿಗಳನ್ನು ನಾವು ತೆಗೆದುಕೊಂಡು ಹೋಗತಕ್ಕದ್ದು. ಇದು ಅಪ್ಪು ದೇವರ ಮಾಲೆಯ ವಿದಾಯ. 

ವಿಶೇಷ ಸೂಚನೆ:

ಎಲ್ಲಾ ಮಾಲೆ ಧರಿಸುವಂತಹ  ಮಾಲಾಧಾರಗಳು ಅಪ್ಪು ದೇವರ ಪುಣ್ಯ ಭೂಮಿಗೆ ದರ್ಶನ ಪಡೆದು ವಾಪಸ್ಸು ಬಂದ ನಂತರ ಹಂಪಿಯ ಪುಣ್ಯ ನದಿಯಲ್ಲಿ ಸ್ನಾನವನ್ನು ಮಾಡಿ ಶ್ರೀ ವಿರುಪಾಕ್ಷೇಶ್ವರ ಸ್ವಾಮಿಯ ಪೂಜೆಯನ್ನು ಸಲ್ಲಿಸಿ ಮಾಲೆಯನ್ನು ವಿಸರ್ಜನೆ ಮಾಡತಕ್ಕದ್ದು.

ಮಾಲೆ ಧರಿಸುವ ಸ್ಥಳ: ವಿಜಯನಗರ ಜಿಲ್ಲೆ ಹೊಸಪೇಟೆಯ ಪುನೀತ್ ರಾಜ್‌ಕುಮಾರ್ ವೃತ್ತ. 

ಈ ಸಂಪೂರ್ಣ ಅಧ್ಯಕ್ಷತೆ ಅಪ್ಪು ಅಭಿಮಾನಿಗಳು ಹಾಗೂ ಸಮಾಜ ಸೇವಕರಾದ ಯುವ ನಾಯಕ ಶ್ರೀ ಸಿದ್ಧಾರ್ಥ್‌ ಸಿಂಗ್ ಅವರು ಮಾಲಾಧಾರಿಗಳ ವಿಧಿವಿಧಾನಗಳಿಗೆ ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದಾರೆ. 

click me!