
ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅಕ್ಟೋಬರ್ 29ರಂದು ಹೃದಯಾಘಾತದಿಂದ ಅಗಲಿದರು. ಅಪ್ಪು ಇನ್ನಿಲ್ಲ ಅನ್ನೋ ನೋವು ಡಾ.ರಾಜ್‌ಕುಮಾರ್ ಕುಟುಂಬಸ್ಥರಿಗೆ ಮಾತ್ರವಲ್ಲ ಇಡೀ ಕರ್ನಾಟಕದ ಜನತೆಗೆ ಕಾಡುತ್ತಿದೆ. ರಸ್ತೆ ರಸ್ತೆಯಲ್ಲೂ ಅಪ್ಪು ಬ್ಯಾನರ್, ಪುತ್ಥಳಿ, ರಕ್ತ ದಾನ, ನೇತ್ರಾ ದಾನ ನಡೆಯುತ್ತಿರುವುದು ನೋಡಬಹುದು. ಅಪ್ಪುಗೆ ನಮನ ಸಲ್ಲಿಸಿದ ನಂತರವೇ ಪ್ರತಿಯೊಂದು ಕಾರ್ಯಕ್ರಮ ಆರಂಭವಾಗುವುದು. ಎದೆ ಮೇಲೆ ಕೈ ಮೇಲೆ ಅಪ್ಪು ಅಚ್ಚೆ ಹಾಕಿಸಿಕೊಂಡಿರುವವರೂ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿದೆ.
ಈಗ ವೈರಲ್ ಆಗುತ್ತಿರುವುದು ಆಟೋ ಮೇಲೆ ಬರೆದಿರುವ ಸಾಲುಗಳು. ಆಟೋ ಚಾಲಕನೊಬ್ಬ 'ವರ್ಷದ ಎಲ್ಲಾ ತಿಂಗಳುಗಳು ಪ್ರತಿ 17ನೇ ತಾರೀಖು 50% ಡಿಸ್ಕೌಂಟ್ (ಮೀಟರ್ ದರದಲ್ಲಿ) ಅಪ್ಪು ಅಭಿಮಾನದ ಪ್ರಯುಕ್ತ' ಎಂದು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ಮಾಹಿತಿ ಪ್ರಕಾರ ಆಟೋ ನಂ KA 02 AD 0520 ಎನ್ನಲಾಗಿದೆ. ದೇವಾಧಿತ್ಯ ಎಂಬ ಹಾಸನ ಮೂಲಕ ವ್ಯಕ್ತಿ ಅಪ್ಪಟ ಅಪ್ಪು ಅಭಿಮಾನಿಯಾಗಿದ್ದು ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದಾರೆ. ಅಪ್ಪು ಮೇಲಿರುವ ಅಭಿಮಾನಕ್ಕೆ ಈ ರೀತಿ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
'ಅಪ್ಪು ಅವರು ಯಾರಿಗೂ ಕಾಣದಂತೆ ಸೇವೆ ಮಾಡಿದ್ದಾರೆ ಅದೇ ರೀತಿ ತನ್ನ ಪುಟ್ಟ ಕೆಲಸವನ್ನು ಮಾಡಲು ನಿರ್ಧಾರ ಮಾಡಿರುವೆ. ನನ್ನ ಉಸಿರು ಇರೋ ತನಕ ಈ ಸೇವೆ ಮಾಡುವೆ ಸದ್ಯ ನನ್ನ ಆಟೋ ಮೇಲೆ ಸಾಲ ಇದೆ ಹೀಗಾಗಿ ಅದು ತೀರಿದ ನಂತರ ಪ್ರತಿ ತಿಂಗಳು 17ರಂದು ಡಿಸ್ಕೌಂಟ್ ತೆಗೆದು ಫ್ರೀ ಮಾಡುತ್ತೀನಿ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಬಳ್ಳಾರಿಯಲ್ಲಿ ಪ್ರತಿಮೆ:
ಪುನೀತ್ ರಾಜ್‌ಕುಮಾರ್ 23 ಅಡಿ ಎತ್ತರದ ಪ್ರತಿಮೆಯನ್ನು ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ 21ರಂದು ಬಳ್ಳಾರಿ ಉತ್ಸವದ ದಿನ ಚಾಲನೆ ನೀಡಲಾಗಿದೆ. ಸುಮಾತು 3000 ಕೆಜಿ ತೂಕದ ಫೈಬರ್ ಆರ್ಟ್ ನಿಂದ ನಿರ್ಮಾಣ ಮಾಡಿರುವ ಕಲಾ ಕೃತಿ ನೈಜತೆಯಿಂದ ಕೂಡಿದೆ. ಈ ಪ್ರತಿಮೆ ಶಿವಮೊಗ್ಗ ತಾಲೂಕಿನ ನಿಧಿಗೆ ಗ್ರಾಮದಲ್ಲಿ ಸಿದ್ಧಗೊಂಡಿದೆ.
ಬೆಂಗಳೂರು ವಿವಿ ಬಿಕಾಂ ಪಠ್ಯ ಪುಸ್ತಕದಲ್ಲಿ ಪುನೀತ್ ರಾಜ್‌ಕುಮಾರ್!
ಅಪ್ಪುವಿನ 23 ಅಡಿ ಎತ್ತರದ ವಿಗ್ರಹವನ್ನು ಸುಮಾರು 22 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 23 ಅಡಿ ಎತ್ತರದ ಪ್ರತಿಮೆಯನ್ನು 3 ತಿಂಗಳಲ್ಲಿ ನಿರ್ಮಾಣವಾಗಿದೆ. ಕಬ್ಬಿಣ, ಫೈಬರ್‌ನಿಂದ ನಿರ್ಮಿಸಲಾಗಿದ್ದು, ಒಟ್ಟು 3 ಸಾವಿರ ಕೆ.ಜಿ. ತೂಕವನ್ನು ಹೊಂದಿದೆ. ಕಬ್ಬಿಣವೇ 1ಸಾವಿರ ಕೆ.ಜಿ. ಇದೆ. ನಿಧಿಗೆ ಗ್ರಾಮದಲ್ಲಿರುವ ಜೀವನ್ ಕಲಾ ಸನ್ನಿಧಿ ಹೆಸರಿನ ಶಿಲ್ಪಕಲಾ ಸಂಸ್ಥೆಯ ಜೀವನ್ ಮತ್ತವರ 15 ಜನಶಿಲ್ಪಿಗಳು ಈ ಪ್ರತಿಮೆಗಾಗಿ ಶ್ರಮವಹಿಸಿದ್ದಾರೆ. ಮೊದಲು ಮಣ್ಣಿನಲ್ಲಿ ಪ್ರತಿಮೆಯನ್ನು ತಯಾರಿಸಿ ಮೌಲ್ಡಿ ನಿರ್ಮಿಸಿಕೊಂಡು ಆನಂತರದಲ್ಲಿ ಪ್ರತಿಮೆಯನ್ನು ಮಾಡಲಾಗಿದೆ. ಅದಕ್ಕಾಗಿ 16 ಜನರ ತಂಡ ದಿನದ 24 ಗಂಟೆಗಳ ಕಾಲ ಹಗಲು ರಾತ್ರಿ 3 ತಿಂಗಳ ಕಾಲ ಕೆಲಸ ಮಾಡಿದೆ. 40 ಅಡಿ ಉದ್ದದ 20 ಚಕ್ರದ ಲಾರಿಯಲ್ಲಿ ಪುನೀತ್ ಪ್ರತಿಮೆಯನ್ನು ಇಂದೇ ಬಳ್ಳಾರಿಗೆ ರವಾನೆ ಮಾಡಲಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.