ಸಲ್ಮಾನ್‌ನಿಂದ ಯಶ್ ಕೈಗೆ ಬಂದ ಪೆಪ್ಸಿ; ಪ್ರತಿಷ್ಠಿತ ಬ್ರಾಂಡ್‌ಗೆ KGF ಸ್ಟಾರ್ ಅಂಬಾಸಿಡರ್

Published : Jan 24, 2023, 01:29 PM ISTUpdated : Jan 24, 2023, 01:35 PM IST
ಸಲ್ಮಾನ್‌ನಿಂದ ಯಶ್ ಕೈಗೆ ಬಂದ ಪೆಪ್ಸಿ; ಪ್ರತಿಷ್ಠಿತ ಬ್ರಾಂಡ್‌ಗೆ KGF ಸ್ಟಾರ್ ಅಂಬಾಸಿಡರ್

ಸಾರಾಂಶ

ಪ್ರತಿಷ್ಠಿತ ಪೆಪ್ಸಿ ಬ್ರಾಂಡ್‌‌ನ ಅಂಬಾಸಿಡರ್ ಆಗಿ ಕೆಜಿಎಫ್ ಹೀರೋ , ರಾಕಿಂಗ್ ಸ್ಟಾರ್ ಯಶ್ ನೇಮಕಗೊಂಡಿದ್ದಾರೆ.

ಪ್ರತಿಷ್ಠಿತ ಪೆಪ್ಸಿ ಬ್ರಾಂಡ್‌‌ನ ಅಂಬಾಸಿಡರ್ ಆಗಿ ಕೆಜಿಎಫ್ ಹೀರೋ , ರಾಕಿಂಗ್ ಸ್ಟಾರ್ ಯಶ್ ನೇಮಕಗೊಂಡಿದ್ದಾರೆ. ಕೆಜಿಎಫ್ ಸಕ್ಸಸ್ ಬಳಿಕ ರಾಕಿಂಗ್ ಸ್ಟಾರ್ ರಾಷ್ಟ್ರ-ಅತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಸಳಿಸಿರುವ ಯಶ್ ಸದ್ಯ ಪೆಪ್ಸಿ ಬ್ರಾಂಡ್ಗೆ ಅಂಬಾಸಿಡರ್ ಆಗಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಕೆಜಿಎಫ್ 2 ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಬಾಚಿಕೊಂಡಿದೆ. ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪೈಕಿ ಕೆಜಿಎಫ್ -2 ಕೂಡ ಒಂದು. ಕೆಜಿಎಫ್ 2 ಬಳಿಕ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಹೆಚ್ಚಾಗಿತ್ತು. ಆದರೆ ಸಿನಿಮಾಗೂ ಮೊದಲು ಯಶ್ ಪೆಪ್ಸಿ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. 

ಸದ್ಯ ಪೆಪ್ಸಿ ಜಾಹೀರಾತಿನ ಒಂದು ತುಣುಕು ಹಂಚಿಕೊಂಡಿದ್ದಾರೆ. 'ಐ  ಲವ್ ಯೂ ಪೆಪ್ಸಿ' ಎಂದು ಪೆಪ್ಸಿ ಬಾಟಲ್‌ಗೆ ಕಿಸ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಪ್ರತಿಷ್ಠಿತ ಬ್ರಾಂಡ್‌ನ ಅಂಬಾಸಿಡರ್ ಆಗಿರುವ ಬಗ್ಗೆ ರಾಕಿಂಗ್ ಸ್ಟಾರ್ ಸಂತಸ ಹಂಚಿಕೊಂಡಿದ್ದಾರೆ. 'ನಾನು ಪೆಪ್ಸಿ ಬ್ರಾಂಡ್ ಜೊತೆ ತೊಡಗಿಕೊಂಡಿರುವುದು ಮತ್ತು ಪೇಪ್ಸಿ ಬ್ರಾಂಡ್‌ನ ಫೇಸ್ ಆಗಿ ಅವರೊಂದಿಗೆ ಸೇರಲು ತುಂಬಾ ಉತ್ಸುಕನಾಗಿದ್ದೇನೆ. ನಾನು ಜೀವನವನ್ನು ಸಂಪೂರ್ಣವಾಗಿ ಜೀವಿಸುತ್ತೇನೆ, ಪ್ರತಿ ಕ್ಷಣವನ್ನು ಹೆಚ್ಚು ಬಳಸಿಕೊಳ್ಳುತ್ತೇನೆ. ಹೊಸ ವರ್ಷವನ್ನು ಪ್ರಾರಂಭಿಸಲು ಇದು ಉತ್ತಮವಾದ ಮಾರ್ಗವಾಗಿದೆ, ಮತ್ತು ನನ್ನ ಅಭಿಮಾನಿಗಳು ನನ್ನನ್ನು ಹೊಸ ಅವತಾರದಲ್ಲಿ ನೋಡುವವರೆಗೆ ನಾನು ಕಾಯಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. 

'ಯಶ್‌ ಬಾಸ್ 19ನೇ ಚಿತ್ರದ ಘೋಷಣೆ ಯಾವಾಗ'?: ರಾಕಿಂಗ್ ಸ್ಟಾರ್‌ಗೆ ಪತ್ರ ಬರೆದ ಅಭಿಮಾನಿಗಳು

ಯಶ್ ಶೇರ್ ಮಾಡಿರುವ ಪೋಸ್ಟ್‌ಗೆ ಅಭಿಮಾನಿಗಳು ತರಹೇವಾರಿ ಪೋಸ್ಟ್ ಮಾಡುತ್ತಿದ್ದಾರೆ. ಅಭಿಮಾನಿಗಳು ಮೆಚ್ಚಿಕೊಂಡು ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ. ಅನೇಕರು ಯಶ್ ಸಖತ್ ಸೆಕ್ಸಿ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ರಾಕಿಂಗ್ ಸ್ಟಾರ್ ಸ್ಟೈಲ್‌ಗೆ ಫಿದಾ ಆಗಿದ್ದಾರೆ. 

ಪ್ರಭಾಸ್ 'ಸಲಾರ್' ಸಿನಿಮಾದಲ್ಲಿ KGF ಸ್ಟಾರ್ ಯಶ್? ಕುತೂಹಲ ಹೆಚ್ಚಿಸಿದ ಪ್ರಶಾಂತ್ ನೀಲ್

ಅಂದಹಾಗೆ 2022ರಲ್ಲಿ ಪೆಪ್ಸಿ ಬ್ರಾಂಡ್‌ಗೆ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅಂಬಾಸಿಡರು ಆಗಿದ್ದರು. ಈ ವರ್ಷ 2023ಗೆ ಯಶ್ ಆಗಿರುವುದು ಅಭಿಮಾನಿಗಳಿಗೆ ಹಾಗೂ ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಸಲ್ಮಾನ್ ಕೈಯಿಂದ ಯಶ್ ಕೈಗೆ ಬಂದಿರುವುದನ್ನು ನೋಡಿ ಯಶ್ ಅಭಿಮಾನಿಗಲು ಸಂತಸ ಹಂಚಿಕೊಳ್ಳುತ್ತಿದ್ದಾರೆ. ಯಶ್ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಸುದ್ದಿ ಖುಷಿ ನೀಡಿದೆ. ಜೊತೆಗೆ ಮುಂದಿನ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ