'ದ್ವಿತ್ವ' ಪೋಸ್ಟರ್ ವಿವಾದ; ನಕಲು ಮಾಡಿ ಜನಪ್ರಿಯತೆ ಪಡೆದರೇ?

Suvarna News   | Asianet News
Published : Jul 03, 2021, 09:41 AM IST
'ದ್ವಿತ್ವ' ಪೋಸ್ಟರ್ ವಿವಾದ; ನಕಲು ಮಾಡಿ ಜನಪ್ರಿಯತೆ ಪಡೆದರೇ?

ಸಾರಾಂಶ

ವೈರಲ್ ಆಗುತ್ತಿರುವ ಪೋಸ್ಟರ್‌ ನಕಲು ಎಂಬ ಆರೋಪ. ಪುನೀತ್ ರಾಜ್‌ಕುಮಾರ್‌ ಜೊತೆ ಚಿತ್ರೀಕರಣ ಮಾಡಿಲ್ಲ.   

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ 'ಯುವರತ್ನ' ನಂತರ ಪುನೀತ್ ರಾಜ್‌ಕುಮಾರ್ ಯಾವ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಎಂಬ ಕುತೂಹಲವಿತ್ತು. ಕೆಲವು ದಿನಗಳ ಹಿಂದೆ ಪೋಸ್ಟರ್ ರಿಲೀಸ್ ಮಾಡುವ ಮೂಲಕ 'ದ್ವಿತ್ವ' ಎಂಬ ಶೀರ್ಷಿಕೆ ಬಿಡುಗಡೆ ಮಾಡಿದ್ದರು. ಚಿತ್ರ ಅನೌನ್ಸ್ ಆದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿತ್ತು.

ಸ್ಪ್ಲಿಟ್ ಪರ್ಸನಾಲಿಟಿ ಪಾತ್ರದಲ್ಲಿ ಪುನೀತ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಟೈಟಲ್‌ಗೆ ಸೂಕ್ತವಾಗಿರುವ ಡಿಸೈನ್‌ ಕೂಡ ಇದೆ ಎಂದು ನೆಟ್ಟಿಗರು ಹೊಗಳಿದರು. ಆದರೆ ಇದು ನಕಲಿ ಪೋಸ್ಟರ್, ಪುನೀತ್ ಈ ಚಿತ್ರಕ್ಕೆ ಇನ್ನೂ ಫೋಟೋ ಶೂಟ್ ಮಾಡಿಸಿಲ್ಲ, ಹಕ್ಕು ಬೇರೆಯವರದ್ದು ಎಂಬ ಆರೋಪಗಳು ಕೇಳಿ ಬರುತ್ತಿವೆ. ಪೋಸ್ಟರ್ ಡಿಸೈನ್‌ ಮಾಡಿರುವ ಆದರ್ಶ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

'ದ್ವಿತ್ವ ಸಿನಿಮಾಗೆ ಮಾಡಿರುವ ಪೋಸ್ಟರ್ ಕೃತಿಚೌರ್ಯದ್ದಲ್ಲ, ಬದಲಿಗೆ ಷಟರ್ ಸ್ಟಾಕ್‌ ಹೆಸರಿನ ಚಿತ್ರಗಳನ್ನು ಮಾರುವ ವೆಬ್‌ನಿಂದ ಖರೀದಿಸಿದ್ದು,' ಎಂದು ಆದರ್ಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 'ಷಟರ್ ಸ್ಟಾಕ್‌ನಿಂದ ಆ ಚಿತ್ರವನ್ನು ಖರೀದಿಸಿ ಅದನ್ನು ದ್ವಿತ್ವ ಸಿನಿಮಾಗೆ ಅನುಗುಣವಾಗಿ ಅಮೂರ್ತ ಪೋಸ್ಟರ್ ಅನ್ನಾಗಿ ಬದಲಾಯಿಸಿದ ವಿಷಯ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆಗಾಗಲಿ ಅಥವಾ ನಿರ್ದೇಶಕ ಪವನ್ ಕುಮಾರ್ ಅವರಿಗಾಗಲಿ ಗೊತ್ತಿರಲಿಲ್ಲ. ಸಿನಿಮಾ ಪೋಸ್ಟರ್ ಮಾಡುವ ವೇಳೆಗೆ ಲಾಕ್‌ಡೌನ್‌ ಇತ್ತು. ಹಾಗಾಗಿ ಪುನೀತ್ ರಾಜ್‌ಕುಮಾರ್ ಅವರ ಪೋಟೋಶೂಟ್‌ ಮಾಡಿಸಲು ಆಗಲಿಲ್ಲ. ನಾವು ಷಟರ್‌ ಸ್ಟಾಕ್‌ನಿಂದ ಸಿನಿಮಾಗೆ ಪೂರಕವಾಗುವ ಚಿತ್ರವನ್ನು ತೆಗೆದುಕೊಂಡು, ಅದನ್ನು ಉನ್ನತೀಕರಿಸಿ ಪೋಸ್ಟರ್ ಆಗಿ ಬಳಸಿಕೊಂಡೆವು,' ಎಂದು ಆದರ್ಶ ಸ್ಪಷ್ಟ ಪಡಿಸಿದ್ದಾರೆ.

ಪುನೀತ್ ರಾಜ್‌ಕುಮಾರ್ 'ದ್ವಿತ್ವ'; ಈ ಚಿತ್ರದಲ್ಲಿ ಸ್ಪ್ಲಿಟ್ ಪರ್ಸನಾಲಿಟಿ ಡಿಸಾರ್ಡರ್ ಹೊಂದಿರುವ ವ್ಯಕ್ತಿಯೇ! 

'ದ್ವಿತ್ವ' ಪೋಸ್ಟರ್‌ನ ಮೂಲ ಚಿತ್ರವನ್ನು ಕ್ರಿಯೇಟಿವ್ ಕ್ರಿವ್ ಸಂಸ್ಥೆಯವರು ಮಾಡಿಲ್ಲವಾದರೂ, ಅದರ ಮೇಲಿನ ಎಲ್ಲಾ ಕಾನೂನಾತ್ಮಕ ಹಕ್ಕುಗಳು ನಮ್ಮದೇ ಆಗಿವೆ. ಇದರ ದಾಖಲಾತಿಗಳು ನಮ್ಮ ಬಳಿ ಇವೆ. ನಾವು ಖರೀದಿಸಿದ ಚಿತ್ರ ಯಾರದ್ದೇ ಆಸ್ತಿ ಆಗಿರವುದಿಲ್ಲ. ನಮ್ಮದು ಡಿಸೈನ್ ಏಜೆನ್ಸಿಯಾಗಿದ್ದು, ನಮ್ಮ ಡಿಸೈನ್‌ಗೆ ಅವಶ್ಯಕತೆ ಇರುವ ಚಿತ್ರಗಳನ್ನು ಎಲ್ಲಿಂದ ಪಡೆಯಬೇಕು, ಹೇಗೆ ಬಳಸಬೇಕು ಎಂಬುವುದು ನಮ್ಮ ವಿವೇಚನೆಗೆ ಬಿಟ್ಟ ವಿಚಾರ. ಅನಾವಶ್ಯಕವಾಗಿ ಸಿನಿಮಾ ನಿರ್ಮಾಣ ಸಂಸ್ಥೆಯನ್ನಾಗಲಿ, ನಿರ್ದೇಶರನ್ನಾಗಲಿ ಹೊಣೆಗಾರರಾಗಿ ವಿವಾದಕ್ಕೆ ಸಿಲುಕಿಸಬಾರದು ಎಂದು ಮಾನವಿ ಮಾಡುತ್ತೇನೆ,' ಎಂದು ಆದರ್ಶ್ ಹೇಳಿದ್ದಾರೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Actor Dileep Case: ಖ್ಯಾತ ನಟಿ ಮೇಲಿನ ಅ*ತ್ಯಾಚಾರ ಆರೋಪ; 8 ವರ್ಷಗಳ ಹೋರಾಟ, ನಟ ದಿಲೀಪ್‌ಗೆ ನಿರಾಳ!
ಅಂದು ಕನ್ನಡಿಗರ ಕೆಣಕಿದ್ದ ಕರಾವಳಿ ಹುಡುಗಿ ಇಂದು ಮನೆಮಗಳು ಆಗಿದ್ದು ಹೇಗೆ? ಸೀಕ್ರೆಟ್ ಸ್ಟ್ರಾಟಜಿ ಏನು?