
ಸಾಮಾನ್ಯವಾಗಿ ಹೊಸಬರ ಸಿನಿಮಾ ಪೋಸ್ಟರ್, ಟೀಸರ್ ಅಥವಾ ಸಾಂಗ್ ರಿಲೀಸ್ ಕಾರ್ಯಕ್ರಮಗಳನ್ನು ಸ್ಟಾರ್ ನಟ ನಟಿಯರ ಕೈಯಲ್ಲಿ ಮಾಡಿಸಲಾಗುತ್ತಿದೆ. ಮೊದಲ ಬಾರಿ ಹೊಸ ಚಿತ್ರತಂಡ ಮಾಡಿರುವ ವಿಭಿನ್ನ ಪ್ರಯತ್ನಕ್ಕೆ ಪುನೀತ್ ರಾಜ್‌ಕುಮಾರ್ ತಮಾಷೆಯಾಗಿ ಹೇಳಿರುವ ಮಾತು ಸೋಷಿಯಲ್ ಮೀಡಿಯಾದಲ್ಲಿ, ನೆಗೆಟಿವ್ ತಿರುವು ಪಡೆದು ಕೊಳ್ಳುತ್ತಿದೆ.
ರವಿವರ್ಮನ ಪೇಂಟಿಂಗ್‌ಗಳೇ ಮಾತಾಡುವಂತೆ ಮಾಡಿದ ವಿಡಿಯೋಗೆ ಮೆಚ್ಚುಗೆ!
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ..' ಸಿನಿಮಾ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಅತೀ ಎತ್ತರದ ಕಟ್ಟಡವೊಂದರ ಮೇಲೆ ಮಾಡಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿ ಪುನೀತ್ ರಾಜ್‌ಕುಮಾರ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಪೋಸ್ಟರ್ ನೋಡಿ ಶಾಕ್ ಆದ ಪುನೀತ್ ಏನು ಹೇಳಿದ್ದಾರೆ ನೋಡಿ...
'ಇದೇನಿದು ಮೆಮೊರಿ ಕಾರ್ಡ್ ಇದ್ದಂಗೆ ಇದೆ. ಬಿಡುಗಡೆ ಮಾಡೋಕೆ ಇಷ್ಟೆಲ್ಲ ಬಿಲ್ಡಪ್ ಬೇಕಿತ್ತಾ?' ಎಂದಿದ್ದಾರೆ. ಪೋಸ್ಟರ್ ನೋಡಲು ವಿಭಿನ್ನವಾಗಿದ್ದು 'ವರ್ಸ್ಟ್ ಮೂವೀ ಎವರ್ ಮೇಡ್ ಇನ್ ದ ಹಿಸ್ಟರಿ ಆಫ್ ಸಿನಿಮಾ' ಎಂದು ಬರೆಯಲಾಗಿದೆ. ಅದನ್ನು ನೋಡಿ ಪುನೀತ್ 'ಪ್ರಾಯಶಃ ಇದು ವರ್ಸ್ಟ್ ಸಿನಿಮಾ ಅಂತ ಕಾಣುತ್ತೆ. ಇದನ್ನೆಲ್ಲ ಮಾಡೋದು ಬಿಟ್ಟು ಬೇರೇನಾದರೂ ಒಳ್ಳೆಯ ಕೆಲಸ ಮಾಡಿ,' ಎಂದು ಕಾಲೆಳೆದಿದ್ದಾರೆ.
ಪುನೀತ್ ರಾಜ್‌ಕುಮಾರ್ ನಿಜವಾಗಿಯೂ ಹೀಗೆಲ್ಲಾ ಹೇಳಿಲ್ಲ...ಹುಡುಗರ ಸಿನಿಮಾ ಆಗಿರುವ ಕಾರಣ ಅರ್ಥ ಮಾಡಿಕೊಳ್ಳಿ ಯಾವೆಲ್ಲಾ ಎಲಿಮೆಂಟ್ ಚಿತ್ರದಲ್ಲಿ ಇರುತ್ತದೆ ಎಂದು. ಪುನೀತ್ ಕಾಲೆಯುತ್ತಾ ಚಿತ್ರಕ್ಕೆ ಒಂದೊಳ್ಳೆ ಸ್ಟಾರ್ಟ್ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.