ಬರಗೂರು 'ಅಮೃತಮತಿ'ಗೆ ಅಂತಾರಾಷ್ಟ್ರೀಯ ಪ್ರಶಸ್ತಿ!

By Kannadaprabha News  |  First Published Jan 29, 2021, 9:04 AM IST

ಪ್ರತಿಷ್ಠಿತ ಅಟ್ಲಾಂಟ ಚಿತ್ರೋತ್ಸವದಲ್ಲಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಚಿತ್ರ ಅತ್ಯುತ್ತಮ ವಿದೇಶಿ ಸಿನಿಮಾ ಎನ್ನುವ ಪ್ರಶಸ್ತಿಗೆ ಪಾತ್ರವಾಗಿದೆ.


‘ಅಮೃತಮತಿ’ ಅಮೆರಿಕದ ಅಟ್ಲಾಂಟ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಆಂಗ್ಲೇತರ ಚಿತ್ರಗಳ ಜತೆ ಸ್ಪರ್ಧಿಸಿತ್ತು. ‘ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವದಲ್ಲಿ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದುಕೊಂಡಿರುವುದು ಕನ್ನಡದ ಚಿತ್ರರಂಗಕ್ಕೆ ಹೆಮ್ಮೆ ತರುವ ವಿಚಾರ’ ಎಂದು ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ಖುಷಿ ವ್ಯಕ್ತಪಡಿಸಿದ್ದಾರೆ.

ಹರಿಪ್ರಿಯಾ ಅಭಿನಯದ 'ಅಮೃತಮತಿ' ಸಿನಿಮಾ ಆಸ್ಟ್ರಿಯಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ! 

Tap to resize

Latest Videos

undefined

ಹರಿಪ್ರಿಯಾ, ದುನಿಯಾ ಕಿಶೋರ್‌ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಇದು. ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ನಿರ್ಮಿಸಿರುವ ಚಿತ್ರವಿದು. ಸುಂದರ್‌ರಾಜ್‌, ಪ್ರಮೀಳಾ ಜೋಷಾಯ್‌, ತಿಲಕ್‌, ಸುಪ್ರಿಯಾ ರಾವ್‌ ಮುಖ್ಯ ಪಾತ್ರಧಾರಿಗಳು. ಈಗಾಗಲೇ ನೋಯ್ಡಾ ವಿಶ್ವ ಸಿನಿಮೋತ್ಸವದಲ್ಲಿ ಈ ಚಿತ್ರದಲ್ಲಿನ ನಟನೆಗಾಗಿ ನಟಿ ಹರಿಪ್ರಿಯಾ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

 

click me!