
ಆದರೂ ಕೆಲ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಮಾ.17ರಂದು ಬೆಳಗ್ಗೆಯೇ ಬೆಂಗಳೂರಿನ ಸದಾಶಿವನಗರದಲ್ಲಿರುವ ಪುನೀತ್ರಾಜ್ಕುಮಾರ್ ನಿವಾಸಕ್ಕೆ ಆಗಮಿಸಿದ್ದು ಕಂಡು ಬಂತು. ಹೀಗೆ ಬರುತ್ತಿದ್ದ ಅಭಿಮಾನಿಗಳನ್ನು ಚದುರಿಸುವ ಕೆಲಸ ಮಾಡುತ್ತಿದ್ದರು ಪೊಲೀಸ್ ಸಿಬ್ಬಂದಿ.
ಹೀಗೆ ಕೊರೋನಾಗೂ ಕ್ಯಾರೆ ಎನ್ನದೆ ತಮ್ಮ ನೆಚ್ಚಿನ ನಟನನ್ನು ನೋಡಲು ಮನೆಗೆ ಬಂದಿದ್ದ ಅಭಿಮಾನಿಗಳಿಗಿ ನಿರಾಸೆ ಎದುರಾಯಿತು. ಯಾಕೆಂದರೆ ಮಾ.16ರ ರಾತ್ರಿಯೇ ಪುನೀತ್ ರಾಜ್ಕುಮಾರ್ ಹೊರಗೆ ಹೋಗಿದ್ದರು. ಪುನೀತ್ ರಾಜ್ಕುಮಾರ್ ಮನೆಯಲ್ಲಿ ಇಲ್ಲದ್ದನ್ನು ಕಂಡು ಅಭಿಮಾನಿಗಳು ಬೇಸರದಿಂದ ಮರಳುತ್ತಿದ್ದರು. ಕೆಲವರು ಕೇಕ್ ತಂದಿದ್ದರು. ಅವರಿಗೆ ಪುನೀತ್ ಮನೆಯಲ್ಲಿ ಇಲ್ಲ ಎಂದು ಹೇಳುವುದೇ ಪೊಲೀಸರಿಗೆ ದೊಡ್ಡ ಸವಾಲು ಆಗಿತ್ತು. ಈ ಕಾರಣಕ್ಕೆ ಪುನೀತ್ ರಾಜಕುಮಾರ್ ಜನ್ಮ ದಿನಕ್ಕೆ ಮನೆ ಮುಂದೆ ಯಾವ ಸಂಭ್ರಮವೂ ಕಾಣಲಿಲ್ಲ. ಕೊರೋನಾ ಎಫೆಕ್ಟ್ನಿಂದ ಅಭಿಮಾನಿಗಳಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಮನೆಯಲ್ಲೂ ಇಲ್ಲದೆ ಹೊರ ಊರಿಗೆ ಹೋಗಿದ್ದರು ಪುನೀತ್.
ಈ ಕೆಲಸಕ್ಕಾಗಿ ಸಂಭಾವನೆಯನ್ನೇ ಪಡೆಯದ ಅಪ್ಪು, ನಿಜಕ್ಕೂ ಗ್ರೇಟ್!
ಆದರೂ ಬೆಳಗ್ಗಿನಿಂದಲೇ ಕಾಯುತ್ತಿದ್ದ ಅಪ್ಪು ಅಭಿಮಾನಿಗಳಿಗೆ ಪುನೀತ್ ಕುಟುಂಬದ ಸದಸ್ಯರು ನಂದಿನ ಬ್ರಾಂಡ್‌ನ ಮೈಸೂರು ಪಾಕ್ ನೀಡಿದರು. ಪುನೀತ್ರಾಜ್ಕುಮಾರ್ ಅವರನ್ನು ನೋಡಿಯೇ ಹೋಗುವುದಾಗಿ ವೀಲ್ ಚೇರ್ನಲ್ಲಿ ಬಂದಿದ್ದ ವಿಶೇಷ ಅಭಿಮಾನಿ ತೇಜಸ್ ಅವರಿಗೆ ಪುನೀತ್ ದರ್ಶನ ಸಿಗಲಿಲ್ಲ.
ಸಣ್ಣ ವಯಸ್ಸಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಪುನೀತ್ ಮಗಳು ದೃತಿ...
ಇಂಟರ್‌ನೆಟ್‌ನಲ್ಲಿ ಪುನೀತ್ ಹವಾ
ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಪುನೀತ್ ಹುಟ್ಟುಹಬ್ಬ ಜೋರಾಗಿಯೇ ನಡೆಯಿತು. ಯುವರತ್ನ ಡೈಲಾಗ್ ಟೀಸರ್‌ಗೆ ಭಾರಿ ಮೆಚ್ಚುಗೆ ದೊರೆಯಿತು. ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭ ಹಾರೈಸಿದರು. ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ, ರಾಜಕಾರಣಿ ವಿಜಯೇಂದ್ರ, ನಟರಾದ ಶಿವರಾಜ್ಕುಮಾರ್, ದರ್ಶನ್, ಸುದೀಪ್, ಜಗ್ಗೇಶ್, ಶ್ರೀಮುರಳಿ, ಗಣೇಶ್, ನೆನಪಿರಲಿ ಪ್ರೇಮ್, ತಮಿಳು ನಟ ಆರ್ಯ, ಡಾಲಿ ಧನಂಜಯ್, ನಿರ್ದೇಶಕರಾದ ಜೋಗಿ ಪ್ರೇಮ್, ಪ್ರಶಾಂತ್ ನೀಲ್, ಸಂತೋಷ್ ಆನಂದ್‌ರಾಮ್, ಸಿಂಪಲ್ ಸುನಿ, ನಟಿ ರಕ್ಷಿತಾ ಪ್ರೇಮ್, ನಿರ್ಮಾಪಕ ವಿಜಯ್ ಕಿರಗಂದೂರು, ಕೆ ಪಿ ಶ್ರೀಕಾಂತ್, ‘ಯುವರತ್ನ’ ಚಿತ್ರದ ನಾಯಕಿ ಸಯ್ಯೇಷಾ ಸೇರಿದಂತೆ ಹಲವರು ಪವರ್‌ಸ್ಟಾರ್ ಹುಟ್ಟುಹಬ್ಬಕ್ಕೆ ಶುಭ ಕೋರಿದರು. ಜತೆಗೆ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ಅಪರೂಪದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬಕ್ಕೆ ವಿಶ್ ಮಾಡಿದರು.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.