
ಕರುನಾಡ ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ಕುಟುಂಬದವರೇ ಹಾಗೆ, ಅಭಿಮಾನಿಗಳಲ್ಲಿ ದೇವರನ್ನು ಕಾಣುತ್ತಾರೆ. ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ, ಸ್ಪಂದಿಸುತ್ತಾರೆ. ಅಭಿಮಾನಿ ದೇವರನ್ನು ಕುಟುಂಬದವರಂತೆಯೇ ನೋಡಿಕೊಳ್ಳುತ್ತಾರೆ.
ಕೆಲವು ದಿನಗಳ ಹಿಂದೆ ಶಿವಣ್ಣ ಅಪ್ಪಟ ಅಭಿಮಾನಿ ರೋಷನ್ ಈಜು ಬಾರದಿದ್ದರೂ, ಸ್ನೇಹಿತರೊಂದಿಗೆ ಈಜಲು ಹೋಗಿದ್ದರು. ನೀರಲ್ಲಿ ಮುಳುಗಿ ಇಹಲೋಕ ತ್ಯಜಿಸಿದ್ದಾರೆ. ಘಟನೆ ತಿಳಿದಾಕ್ಷಣ ಶಿವಣ್ಣ, ಮೃತ ಅಭಿಮಾನಿಯ ಕುಟುಂಬಸ್ಥರ ನೋವಿಗೆ ಸ್ಪಂದಿಸಿದ್ದಾರೆ.
ಮಗುವಿನ ರೀತಿಯಲ್ಲಿ ಶಿವಣ್ಣನಿಗೆ ಕೈ ತುತ್ತು ಕೊಟ್ಟ ಶ್ರೀಮುರಳಿ!
ಅಭಿಮಾನಿಯ ಅಗಲಿಕೆ ತೀವ್ರ ನೋವುಂಟು ಮಾಡಿದ ಕಾರಣ ಶಿವಣ್ಣ ತಮ್ಮೆಲ್ಲ ಅಭಿಮಾನಿಗಳಲ್ಲಿ ಇಂಥ ದುಸ್ಸಾಹಸಕ್ಕೆ ಕೈ ಹಾಕದಂದೆ ವೀಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. 'ಈ ರೀತಿ ಮಾತನಾಡಲು ತುಂಬಾ ನೋವಾಗುತ್ತದೆ. ನನ್ನ ಪ್ರೀತಿಯ ಅಭಿಮಾನಿ ರೋಷನ್ ಸ್ವಿಮ್ಮಿಂಗ್ ಗೊತ್ತಿಲ್ಲದಿದ್ದರೂ ನೀರಿಗಿಳಿದಿದ್ದರು. ಗೊತ್ತಿಲ್ಲದ ಸಾಹಸಕ್ಕೆ ಕೈ ಹಾಕುವುದು ತಪ್ಪು. ಇದರಿಂದ ಎಲ್ಲರಿಗೂ ನೋವಾಗುತ್ತದೆ. ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ದಯವಿಟ್ಟು ಯಾರೂ ಈ ತಪ್ಪು ಮಾಡಬೇಡಿ,' ಎಂದು ದುಖಃದಲ್ಲಿಯೇ ಎಲ್ಲರಿಗೂ ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಖ್ಯಾತ ಇಂಗ್ಲಿಷ್ ದೈನಿಕದ ಪತ್ರಕರ್ತರೊಬ್ಬರು ಹೀಗೆ ಈಜಲು ಹೋಗಿ, ಮುಳುಗಿ ಮೃತಪಟ್ಟಿದ್ದರು. ಏನೋ ಸಾಹಸ ಮಾಡುತ್ತೇವೆ ಎಂದು ಹೋಗಿ, ಇಂಥ ದುಸ್ಸಾಹಸಕ್ಕೆ ಕೈ ಹಾಕಬಾರೆಂಬುವುದು ಸುವರ್ಣನ್ಯೂಸ್.ಕಾಮ್ ಕಳಕಳಿಯೂ ಹೌದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.