ಸಾಹಸಿ ವ್ಯಕ್ತಿತ್ವದ, ನೇರ ನುಡಿಯ ಸರಳ ಜೀವಿ : ಸಾಮಾನ್ಯ ವ್ಯಕ್ತಿಯಂತೆ ಇರುತ್ತಿದ್ದರು

By Kannadaprabha News  |  First Published Oct 30, 2021, 12:20 PM IST
  • ಅತ್ಯಂತ ಸರಳ ಹಾಗೂ ಸಾಮಾನ್ಯ ವ್ಯಕ್ತಿಯಂತೆ ಇರುತ್ತಿದ್ದರು ಪುನೀತ್ ರಾಜ್‌ಕುಮಾರ್
  • ತಮ್ಮ ಸರಳ ವ್ಯಕ್ತಿತ್ವದಿಂದಲೇ ಸೆಳೆಯುತ್ತಿದ್ದ ಕರುಣಾಮಯಿಯಾಗಿದ್ದರು

ಯಶವಂತಪುರದ (Yashwanthpur) ಎಪಿಎಂಸಿ (APMC) ಆವರಣದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಪುನೀತ್‌ (Puneet Rajkumar) ಕಳ್ಳರನ್ನು ಅಟ್ಟಿಸಿಕೊಂಡು ಹೋಗುವ ದೃಶ್ಯ. ದೂರದಿಂದ ಓಡಿ ಬಂದು ಬಂಡಿಯಿಂದ ಬಂಡಿಗೆ ಹಾರಿ, ಲಾರಿಯೊಳಗೆ ಜಿಗಿದು, ಅಲ್ಲಿಂದ ಲಾರಿಯ ಮತ್ತೊಂದು ಬಾಗಿಲಿನಿಂದ ಹೊರಗೆ ಹಾರಿ, ಕಳ್ಳರನ್ನು ಹಿಡಿಯುವ ಸನ್ನಿವೇಶವನ್ನು ಸಾಹಸ ನಿರ್ದೇಶಕ (Director) ಚಿತ್ರೀಕರಿಸಿಕೊಳ್ಳುತ್ತಿದ್ದರು. ಆ ದೃಶ್ಯದಲ್ಲಿ ಪುನೀತ್‌ ಎರಡು ಸಾರಿ ಓಡೋಡಿ ಬಂದು ಜಿಗಿದು ಆ ದೃಶ್ಯದಲ್ಲಿ ನಟಿಸಿದರು. ಎಲ್ಲೂ ಡ್ಯೂಪ್‌ಗಳನ್ನು (Dupe) ಬಳಸಲಿಲ್ಲ. ಅತ್ಯಂತ ಕಠಿಣವಾದ ಸನ್ನಿವೇಶವನ್ನೂ ತಾವೇ ನಿಭಾಯಿಸುವ ಅವರ ನಿರ್ಧಾರವನ್ನು ಪುನೀತ್‌ ಎಷ್ಟು ಸಾಧ್ಯವೋ ಅಷ್ಟು ಪಾಲಿಸಿಕೊಂಡು ಬರುತ್ತಿದ್ದರು.

"

Tap to resize

Latest Videos

undefined

ಅದೇ ದಿಟ್ಟತನವನ್ನು ಅವರು ಬದುಕಿನಲ್ಲೂ ಅನುಸರಿಸಿಕೊಂಡು ಬಂದವರು. ಪುನೀತ್‌ ಯಾವತ್ತೂ ಮತ್ಯಾರನ್ನೋ ಮೆಚ್ಚಿಸುವುದಕ್ಕೆಂದು ಸುಳ್ಳು ಹೇಳಲಿಲ್ಲ. ಸಿನಿಮಾ (Movie) ಚೆನ್ನಾಗಿಲ್ಲ ಅನ್ನಿಸಿದರೆ ನೇರವಾಗಿಯೇ ಚೆನ್ನಾಗಿಲ್ಲ ಎಂದು ಹೇಳುತ್ತಿದ್ದರು. ಅದು ಅವರದೇ ಚಿತ್ರವಾದರೂ ಸರಿಯೇ, ಸುಮ್ಮನೆ ಮೆಚ್ಚಿಕೊಂಡು ಮಾತಾಡುತ್ತಿರಲಿಲ್ಲ. ಅವರು ಯಾವತ್ತೂ ತನ್ನ ಸಿನಿಮಾ ಚೆನ್ನಾಗಿದೆ ಬಂದು ನೋಡಿ ಅಂದವರೇ ಅಲ್ಲ, ಬಂದು ನೋಡಿ ಚೆನ್ನಾಗಿದೆಯೋ ಎಂದು ನೀವು ಹೇಳಿ ಎನ್ನುತ್ತಿದ್ದರು.

ಬೆಳಗಾವಿ: ಪುನೀತ್‌ ರಾಜಕುಮಾರ್‌ ನಿಧನ, ಮನನೊಂದು ಇಬ್ಬರು ಯುವಕರ ಸಾವು

ತನ್ನ ನಿರ್ಧಾರಗಳನ್ನು ಪುನೀತ್‌ ತಾನೇ ತೆಗೆದುಕೊಳ್ಳುತ್ತಿದ್ದ ನಟ. ಅವರ ಕತೆಯನ್ನು ಅವರೇ ಕೇಳುತ್ತಿದ್ದರು. ಅವರೇ ನಿರ್ಧಾರ ಮಾಡುತ್ತಿದ್ದರು. ಕತೆಗಾರರಿಂದಲೋ (story) ನಿರ್ಮಾಪಕರಿಂದಲೋ ಅವರು ಕತೆ ಕೇಳುತ್ತಿರಲಿಲ್ಲ. ನಿರ್ದೇಶಕರೇ ಕತೆ ಹೇಳಬೇಕು ಅನ್ನುತ್ತಿದ್ದರು. ಒಮ್ಮೆ ಒಪ್ಪಿಗೆಯಾದ ಕತೆಯನ್ನು ಬದಲಾಯಿಸಲಿಕ್ಕೂ ಅವರು ಒಪ್ಪುತ್ತಿರಲಿಲ್ಲ. ಆಯಾ ಪಾತ್ರಕ್ಕೆ ಬೇಕಾದ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದರು.

ಪುನೀತ್‌ ಹಿಂದೆ ಮುಂದೆ ಸಾಮಾನ್ಯವಾಗಿ ಬೌನ್ಸರುಗಳಾಗಲೀ, ಬಾಡಿಗಾರ್ಡುಗಳಾಗಲೀ ಇರುತ್ತಿರಲಿಲ್ಲ. ತೀರಾ ದೊಡ್ಡ ಸಮಾರಂಭವಾಗಿದ್ದರೆ ಮಾತ್ರ, ನಿರ್ಮಾಪಕರೇ ಯಾರನ್ನಾದರೂ ನಿಯೋಜಿಸುತ್ತಿದ್ದರು. ಇಲ್ಲದೇ ಹೋದರೆ ಪುನೀತ್‌ ಒಬ್ಬರೇ ಬರುತ್ತಿದ್ದರು. ಹೆಚ್ಚಿನ ಸಲ ತಾವೇ ಡ್ರೈವಿಂಗ್‌ ಮಾಡಿಕೊಂಡು ಬಂದುಬಿಡುತ್ತಿದ್ದರು. ಮಲ್ಲೇಶ್ವರಂ ರಸ್ತೆಗಳಲ್ಲಿ ಕಾರು ಓಡಿಸುವ, ಬನ್ನೇರುಘಟ್ಟದ ದಾರಿಯಲ್ಲಿ ಸೈಕಲ್‌ ಓಡಿಸುವ, ಹೆಂಡತಿ ಮಕ್ಕಳ ಜತೆ ಥೇಟ್‌ ಮಧ್ಯಮವರ್ಗದ ವಿಧೇಯ ಗಂಡನಂತೆ ಹೋಟೆಲಿಗೆ ಹೋಗಿ ಊಟ ಕೊಡಿಸುವುದನ್ನು ಕೂಡ ನೋಡಿದವರಿದ್ದಾರೆ.

ಆ ಮಟ್ಟಿಗೆ ಪುನೀತ್‌ ನೇರನುಡಿಯ, ತಮಗನಿಸಿದ್ದನ್ನು ಮಾಡುವ, ದಿಟ್ಟತನದ ವ್ಯಕ್ತಿ.

ಫ್ಯಾಮಿಲಿ ಸ್ಟಾರ್ ಅಪ್ಪು

 ಬಾಲನಟರಾಗಿ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಪುನೀತ್‌(Puneeth Rajkumar) ಪೂರ್ಣಪ್ರಮಾಣದ ನಾಯಕರಾದದ್ದು ತಮ್ಮ 27ನೇ ವಯಸ್ಸಿಗೆ. ಮೊದಲ ಚಿತ್ರ ಅಪ್ಪು. ಅದರ ನಿರ್ದೇಶನಕ್ಕೆ ಅಪ್ಪು ಸ್ವತಃ ಆರಿಸಿಕೊಂಡದ್ದು ತೆಲುಗು ನಿರ್ದೇಶಕ ಪೂರಿ ಜಗನ್ನಾಥ್‌ಅವರನ್ನು. ಈ ಚಿತ್ರ ಹಲವು ಚಿತ್ರಮಂದಿರಗಳಲ್ಲಿ ಸತತವಾಗಿ 200 ದಿನ ಪ್ರದರ್ಶನ ಕಂಡಿದ್ದಷ್ಟೇ ಅಲ್ಲ, ತೆಲುಗು, ತಮಿಳು, ಬೆಂಗಾಲಿ ಭಾಷೆಗಳಲ್ಲಿ ಮರುನಿರ್ಮಾಣಗೊಂಡಿತು. ಒಂದೇ ಚಿತ್ರದಲ್ಲಿ ಪುನೀತ್‌‘ಸ್ಟಾರ್‌’ ಆಗಿಬಿಟ್ಟರು. ಈ ಚಿತ್ರದ ಮೂಲಕ ರಕ್ಷಿತಾ ಕೂಡ ಚಿತ್ರರಂಗಕ್ಕೆ ಕಾಲಿಟ್ಟರು.

ಪುನೀತ್‌ಎರಡನೆಯ ಚಿತ್ರವನ್ನು ನಿರ್ದೇಶಿಸಿದ್ದು ನಿರ್ದೇಶಕ ದಿನೇಶ್‌ಬಾಬು(Dinesh Babu). ಆ ಚಿತ್ರವೂ ಭರ್ಜರಿ ಯಶಸ್ಸು ಕಂಡಿತು. ತಮ್ಮ ನಟನೆ ಮತ್ತು ಹೊಡೆದಾಟದ ದೃಶ್ಯಗಳಿಂದಾಗಿ ಪುನೀತ್‌ಆ ಚಿತ್ರದಲ್ಲೂ ಪ್ರೇಕ್ಷಕರಿಗೆ ಆಪ್ತರಾದರು. ನಂತರದ ದಿನಗಳಲ್ಲಿ ಅವರು ಹೊಡೆದಾಟಗಳೇ ಪ್ರಧಾನವಾದ ಅನೇಕ ಚಿತ್ರಗಳಲ್ಲಿ ನಟಿಸಿದರು. ತೆಲುಗಿನ ರೀಮೇಕ್‌ಸಿನಿಮಾಗಳಲ್ಲೂ(Remake Movie) ಕಾಣಿಸಿಕೊಂಡರು.

‘ಮಿಲನ’ ಚಿತ್ರದಿಂದ ಪುನೀತ್‌ಅವರ ಇಮೇಜ್‌ಬದಲಾಯಿತು. ಹೊಡೆದಾಟದ ಚಿತ್ರಗಳಿಂದ ಭಾವಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಂಡು ಹೊಸ ಬಗೆಯ ಪ್ರೇಕ್ಷಕರನ್ನು ಗಳಿಸಿಕೊಳ್ಳಲು ‘ಮಿಲನ’ ಚಿತ್ರ ಕಾರಣವಾಯಿತು. ನಂತರದ ದಿನಗಳಲ್ಲಿ ವಂಶಿ, ನಿನ್ನಿಂದಲೇ, ಮೈತ್ರಿ, ರಾಜಕುಮಾರ- ಮುಂತಾದ ಚಿತ್ರಗಳಲ್ಲಿ ಪುನೀತ್‌ಕಾಣಿಸಿಕೊಂಡು ಮಾಗಿದ ಪ್ರೇಕ್ಷಕರ(Audience) ಮೆಚ್ಚುಗೆಗೂ ಪಾತ್ರರಾದರು.

ಬಾನದಾರಿಯಲ್ಲಿ ಜಾರಿ ಹೋದ ಕರುನಾಡ ಯುವರಾಜಕುಮಾರ

ಈ ಅವಧಿಯಲ್ಲೇ ಪುನೀತ್‌ತಮ್ಮ ತಂದೆ ರಾಜ್‌ಕುಮಾರ್‌ಶೈಲಿಯಲ್ಲಿ ರೂಪುಗೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯವೂ ಪ್ರೇಕ್ಷಕರಿಂದ ಬಂತು. ಇಂಥ ಚಿತ್ರಗಳ ನಡುವೆಯೇ ಪುನೀತ್‌ಅಂಜನೀಪುತ್ರ, ಜಾಕಿ, ಅಣ್ಣಾ ಬಾಂಡ್‌, ದೊಡ್ಮನೆ ಹುಡ್ಗ, ರಣವಿಕ್ರಮ, ನಟಸಾರ್ವಭೌಮ, ಚಕ್ರವ್ಯೂಹ, ಪವರ್‌ಮುಂತಾದ ಸಾಹಸಮಯ ಚಿತ್ರಗಳಲ್ಲೂ ನಟಿಸಿದರು,

ಪುನೀತ್‌ಮಕ್ಕಳ ಪಾಲಿನ ಪರಮಾತ್ಮ ಎಂದೇ ಕರೆಸಿಕೊಂಡವರು. ಅವರ ತಮಾಷೆ, ರಂಜನೆ, ಕಥೆಯ ಆಯ್ಕೆ, ಅಭಿನಯ ಎಲ್ಲವೂ ಸೇರಿ ಅವರನ್ನು ಫ್ಯಾಮಿಲಿ ಸ್ಟಾರ್‌ಎಂಬ ವಿಭಾಗಕ್ಕೆ ಸೇರಿಸಿತ್ತು. ಮಕ್ಕಳು ಪುನೀತ್‌ಸಿನಿಮಾಗಳನ್ನು ನೋಡಲು ಹಾತೊರೆಯುತ್ತಿದ್ದರು. ಹೊಡೆದಾಟ ಮತ್ತು ರಕ್ತಪಾತದ ಸಿನಿಮಾಗಳ ನಡುವೆ ಕುಟುಂಬ ಸಮೇತ ನೋಡುವಂಥ ಚಿತ್ರಗಳೆಂದು ಪುನೀತ್‌ಸಿನಿಮಾಗಳು ಮನೆಮಾತಾಗಿದ್ದವು. ನಾಯಕ ನಟರಾಗಿ ಒಟ್ಟು 30 ಸಿನಿಮಾಗಳಲ್ಲಿ ಅವರು ನಟಿಸಿದ್ದರು.

ಪುನೀತ್‌ ಕ್ರಮೇಣ ಪಾತ್ರಗಳ ಆಯ್ಕೆಯಲ್ಲಿ ತುಂಬಾ ಎಚ್ಚರಿಕೆ ವಹಿಸತೊಡಗಿದ್ದರು. ತಮ್ಮ ಎಂದಿನ ಶೈಲಿಯ ಚಿತ್ರಗಳಿಂದ ಅವರು ಬೇರೆ ರೀತಿಯ ಸಿನಿಮಾಗಳತ್ತ ಹೊರಳಿಕೊಳ್ಳುವ ಪ್ರಯತ್ನವಾಗಿ ಪವನ್‌ಕುಮಾರ್‌ನಿರ್ದೇಶನದ ದ್ವಿತ್ವ, ರಿಷಭ್‌ಶೆಟ್ಟಿ ನಿರ್ದೇಶನದ ಚಿತ್ರ, ದಿನಕರ್‌ತೂಗುದೀಪ ನಿರ್ದೇಶನದ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು.

ಪುನೀತ್‌ಅವರು ನಟಿಸಿದ ಸಿನಿಮಾಗಳ ಪೈಕಿ ಬಿಡುಗಡೆಯಾದ ಕೊನೆಯ ಸಿನಿಮಾ ಯುವರತ್ನ. ಈ ಚಿತ್ರ ಕೊರೋನಾ ನಂತರದ ದಿನಗಳಲ್ಲಿ ಚಿತ್ರಮಂದಿರಕ್ಕೆ ಬಂದಿತ್ತು. ಚಿತ್ರ ಬಿಡುಗಡೆಯಾದ ನಂತರ ವೀಕೆಂಡ್‌ಲಾಕ್‌ಡೌನ್‌ಹೊಡೆತ ತಾಳಲಾರದೆ, ಓಟಿಟಿ(OTT) ಫ್ಲಾಟ್‌ಫಾಮ್‌ರ್‍ನಲ್ಲಿ ಬಿಡುಗಡೆಯಾಗಿತ್ತು. ಅವರು ನಟಿಸಿರುವ, ಆದರೆ ಬಿಡುಗಡೆಗೆ(Release) ಕಾದಿರುವ ಚಿತ್ರ ಜೇಮ್ಸ್‌. ಪುನೀತ್‌ಅತೀವ ನಿರೀಕ್ಷೆ ಇಟ್ಟುಕೊಂಡ ಸಿನಿಮಾ ಅದು

click me!