ರಮ್ಯಾ-ದರ್ಶನ್ ಫ್ಯಾನ್ಸ್ ಗಲಾಟೆಗೆ ನಿರ್ಮಾಪಕ ಕೆ ಮಂಜು ಎಂಟ್ರಿ.. ಯಾರ ಪರ ನಿಂತ್ರು ನೋಡಿ!

Published : Jul 30, 2025, 03:55 PM ISTUpdated : Jul 30, 2025, 03:56 PM IST
K Manju Ramya

ಸಾರಾಂಶ

ಮೊದಲಿಗೆ ಮಹಿಳಾ ಆಯೋಗಕ್ಕೆ ದೂರು ನೀಡಿರುವ ನಟಿ ರಮ್ಯಾ, ಆ ಬಳಿಕ ಕಮೀಷನರ್‌ಗೆ ದೂರು ನೀಡಿದ್ದಾರೆ. 43 ದರ್ಶನ್ ಫ್ಯಾನ್ಸ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಟ ಶಿವರಾಜ್‌ಕುಮಾರ್ ಸೇರಿದಂತೆ, ದೊಡ್ಮನೆ ಕುಟುಂಬ, ನಟ ಪ್ರಥಮ್ ಹಾಗೂ ನಟಿ ಅನುಪಮಾ ಗೌಡ ಸೇರಿದಂತೆ ಹಲವರು ನಟಿ ರಮ್ಯಾ ಪರ ಬ್ಯಾಟ್ ಬೀಸಿದ್ದಾರೆ.

ಸದ್ಯ ಟ್ರೆಂಡಿಂಗ್‌ನಲ್ಲಿರೋ ಸುದ್ದಿ ಅಂದ್ರೆ ಅದು ನಟಿ ರಮ್ಯಾ (Ramya) ಹಾಗೂ ನಟ ದರ್ಶನ್ (Darshan Thoogudeepa) ಫ್ಯಾನ್ಸ್ ಗಲಾಟೆ. ನಟಿ ರಮ್ಯಾ ಅವರು 'ಸುಪ್ರೀಂ ಕೋರ್ಟ್ ಹೇಳಿಕೆಯನ್ನು ಉಲ್ಲೇಖಿಸಿ, ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ 'ಭಾರತದ ಸಾಮಾನ್ಯ ಜನರಿಗೂ ನ್ಯಾಯ ಸಿಗುವ ಆಶಾಕಿರಣ ಮೂಡಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ' ಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದರು. ಅದರಿಂದ ರೊಚ್ಚಿಗೆದ್ದ ನಟ ದರ್ಶನ್ ಫ್ಯಾನ್ಸ್, 'ಡಿ ಬಾಸ್ ಫ್ಯಾನ್ಸ್‌' ಹೆಸರಿನ ಕೆಲವು ಫೇಕ್ ಅಕೌಂಟ್‌ಗಳಿಂದ ನಟಿ ರಮ್ಯಾಗೆ ಬೈದು ಕೆಟ್ಟ ಅಂದರೆ ಅಶ್ಲೀಲ ಮೆಸೇಜ್ ಮಾಡಿದ್ದರು.

ಇದರಿಂದ ಸಿಟ್ಟಿಗೆದ್ದ ನಟಿ ರಮ್ಯಾ ಅವರು ಇದೀಗ ದರ್ಶನ್ ಫ್ಯಾನ್ಸ್ ವಿರುದ್ಧ ಸಮರ ಸಾರಿದ್ದಾರೆ. ಮೊದಲಿಗೆ ಮಹಿಳಾ ಆಯೋಗಕ್ಕೆ ದೂರು ನೀಡಿರುವ ನಟಿ ರಮ್ಯಾ, ಆ ಬಳಿಕ ಕಮೀಷನರ್‌ಗೆ ದೂರು ನೀಡಿದ್ದಾರೆ. 43 ದರ್ಶನ್ ಫ್ಯಾನ್ಸ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಟ ಶಿವರಾಜ್‌ಕುಮಾರ್ ಸೇರಿದಂತೆ, ದೊಡ್ಮನೆ ಕುಟುಂಬ, ನಟ ಪ್ರಥಮ್ ಹಾಗೂ ನಟಿ ಅನುಪಮಾ ಗೌಡ ಸೇರಿದಂತೆ ಹಲವರು ನಟಿ ರಮ್ಯಾ ಪರ ಬ್ಯಾಟ್ ಬೀಸಿದ್ದಾರೆ. ಆದರೆ, ದರ್ಶನ್ ಪತ್ನಿ ವಿಯಲಕ್ಷ್ಮೀ ಅವರು ನಟಿ ರಮ್ಯಾ ವಿರುದ್ಧ ಸಿಟ್ಟೊಗೆದ್ದಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದಂತೆ, ಕನ್ನಡದ ಖ್ಯಾತ ನಿರ್ಮಾಪಕರಾದ ಕೆ ಮಂಜು (K Manju) ಅವರು ಈ ವಿವಾದಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗಿದ್ದರೆ ಅವರೇನು ಹೇಳಿದ್ದಾರೆ ನೋಡಿ.. ಹೌದು, ಕೆ ಮಂಜು ಅವರು ದರ್ಶನ್ ಫ್ಯಾನ್ಸ್ ಪರ ಮಾತನಾಡಿಲ್ಲ. ಆದರೆ, ನಟಿ ರಮ್ಯಾ ಮೇಲೆ ಸಣ್ಣ ಆರೋಪ ಮಾಡಿದ್ದಾರೆ. ರಮ್ಯಾ ದರ್ಶನ್ ಫ್ಯಾನ್ಸ್ ಗಲಾಟೆ ಬಗ್ಗೆ ನಿರ್ಮಾಪಕ ಕೆ ಮಂಜು ಹೇಳಿಕೆ ಹೀಗಿದೆ.. 'ರಮ್ಯಾ ಅವ್ರು ಸ್ವಲ್ಪ ಯೋಚನೆ ಮಾಡಬೇಕಿತ್ತು. ಎಲ್ಲದಕ್ಕೂ ಮೊದಲು, ನಟ ದರ್ಶನ್ ಬಗ್ಗೆ ಅವ್ರು ಪೋಸ್ಟ್ ಮಾಡಿದು ತಪ್ಪು.. ರೇಣುಕಾಸ್ವಾಮಿ ಕೇಸ್ ಆದಾಗ ಎಲ್ಲರೂ ಮಾತಾಡಿದ್ದು ಆಗಿದೆ. ಈಗ ಈ ಕೇಸ್ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಸದ್ಯ ನ್ಯಾಯಾಲಯದಲ್ಲಿ ಇರುವ ಕೇಸ್ ಬಗ್ಗೆ ಈಗ ಮತ್ತೆ ಮಾತಾಡಬಾರದಿತ್ತು.

ರಮ್ಯಾ ಅವರು ಈಗ ಮೆಸೇಜ್ ಮಾಡಿದ್ದಕ್ಕೆ ಈಗ ಹೀಗೆಲ್ಲಾ ಆಗಿದೆ. ಆದರೆ, ರಮ್ಯಾ ಪೋಸ್ಟ್‌ಗೆ ದರ್ಶನ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡಿದ್ದು ಕೂಡ ತಪ್ಪು . ಅಭಿಮಾನಿಗಳ ಅತಿರೇಕದ ವರ್ತನೆ ಸರಿ ಅಲ್ಲ. ಯಾವ ಸ್ಟಾರ್ ಆದ್ರೂ ತಮ್ಮ ಅಭಿಮಾನಿಗಳಿಗೆ ಗಲಾಟೆ ಮಾಡಿ ಅಂತ ಹೇಳಲ್ಲ. ರಮ್ಯಾ ಹೇಳಿದ ತಕ್ಷಣ ರೇಣುಕಾಸ್ವಾಮಿ ಕುಟುಂಬಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗುತ್ತಾ? ಹೀಗಂತ ಕನ್ನಡದ ನಿರ್ಮಾಪಕ ಕೆ. ಮಂಜು ಅವರು ರಮ್ಯಾ ಮಾಡಿದ್ದು ಹಾಗೂ ಫ್ಯಾನ್ಸ್ ಮಾಡಿದ್ದು ಎರಡೂ ತಪ್ಪು ಅಂತ ಹೇಳಿದ್ದಾರೆ.

ಒಟ್ಟಿನಲ್ಲಿ, ಸದ್ಯಕ್ಕೆ ಈ ವಾದ-ವಿವಾದ ತಣ್ಣಗಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ದರ್ಶನ್ ಅಭಿಮಾನಿಗಳ ಪರ-ವಿರೋಧ ಎಂದು ಎರಡು ಪಂಗಡಗಳು ನಿರ್ಮಾಣವಾಗುವ ಎಲ್ಲಾ ಲಕ್ಷಣಗಳು ಇವೆ. ಕಾನೂನು ಪ್ರಕಾರವೂ ಈ ಸಮರ ಮುಂದುವರೆಯಲಿದೆ. ಒಮ್ಮೆ ಎಫ್‌ಐಆರ್ ಆದ ಬಳಿಕ ಕೂಡ ನಟಿ ರಮ್ಯಾಗೆ ದರ್ಶನ್ ಫ್ಯಾನ್ಸ್ ಫೇಕ್‌ ಪೇಜ್‌ಗಳಿಂದ ಕೊಳಕು ಮೆಸೇಜ್ ಬರುವುದು ನಿಂತಿಲ್ಲ. ಈ ಎಲ್ಲಾ ಬೆಳವಣಿಗೆ ನೋಡಿದರೆ, ಸದ್ಯಕ್ಕೆ ಈ ಸಮರ ಸುಖಾಂತ್ಯ ಕಾಣುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ