'ಕರಿಯ' ಸಿನಿಮಾ ನಿರ್ಮಾಪಕನ ಪುತ್ರ, ನಟ ಸಂತೋಷ್‌ ಬಾಲರಾಜ್‌ ನಿಧನ! ಕೊನೆಗೂ ಚಿಕಿತ್ಸೆ ಫಲಕೊಡಲಿಲ್ಲ!

Published : Aug 05, 2025, 10:22 AM ISTUpdated : Aug 05, 2025, 10:24 AM IST
anekal balraj son santhosh

ಸಾರಾಂಶ

Anekal Balraj Son Santhosh News: 'ಕರಿಯ' ಸಿನಿಮಾ ನಿರ್ಮಾಪಕ ಆನೇಕಲ್‌ ಬಾಲ್‌ರಾಜ್‌ನ ಪುತ್ರ, ನಟ ಸಂತೋಷ್‌ ಬಾಲ್‌ರಾಜ್‌ ಅವರು ನಿಧನರಾಗಿದ್ದಾರೆ. ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಅಸುನೀಗಿದ್ದಾರೆ. 

ಕನ್ನಡದ ಯುವ ನಟ ಬಾಲರಾಜ್ ನಿಧನರಾಗಿದ್ದಾರೆ. ಹಿರಿಯ ನಿರ್ಮಾಪಕ‌ ಆನೇಕಲ್‌ ಬಾಲರಾಜ್ ಪುತ್ರ ಸಂತೋಷ ಬಾಲರಾಜ್ ಅವರು ಅಸು ನೀಗಿದ್ದಾರೆ. ಸಂತೋಷ್‌ ಅವರಿಗೆ 34 ವರ್ಷ ವಯಸ್ಸಾಗಿತ್ತು. ಸಿನಿಮಾಗಳಲ್ಲಿ ಯಶಸ್ಸು ಕಾಣಬೇಕು ಎಂದುಕೊಂಡಿದ್ದ ಸಂತೋಷ್‌ ಅವರು ಚಿಕ್ಕ ವಯಸ್ಸಿಗೆ ಬಾರದೂರಿಗೆ ಪಯಣ ಬೆಳೆಸಿದ್ದಾರೆ.

ಸಂತೋಷ್‌ಗೆ ಏನಾಗಿತ್ತು?

ಕಿರಿಯ ವಯಸ್ಸಿಗೆ ಜಾಂಡೀಸ್ ಕಾಯಿಲೆಯಿಂದ ಬಳಲಿ ಐಸಿಯುನಲ್ಲಿದ್ದರು. ಕೊನೆಗೂ ಸಂತೋಷ್ ಬಾಲರಾಜ್ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕುಮಾರಸ್ವಾಮಿ ಲೇಔಟ್‌ನ ಸಾಗರ್ ಅಫೋಲೋ ಆಸ್ಪತ್ರೆಗೆ ದಾಖಲಾಗಿದ್ದರು.

ಯಾವ ಸಿನಿಮಾಗಳಲ್ಲಿ ನಟಿಸಿದ್ದಾರೆ?

ʼಕರಿಯಾ-2ʼ, ʼಕೆಂಪʼ, ʼಗಣಪʼ, ʼಬರ್ಕ್ಲಿʼ, ʼಸತ್ಯʼ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದರು. ಜಾಂಡೀಸ್ ಕಾಯಿಲೆ ಮೈಗೆಲ್ಲ ಹರಡಿ ಗಂಭೀರ ಸ್ಥಿತಿಯಲ್ಲಿದ್ದರು.

ಕರಿಯ ಸಿನಿಮಾ ನಿರ್ಮಾಪಕನ ಪುತ್ರ!

ಅಪ್ಪ ಅನೇಕಲ್ ಬಾಲರಾಜ್ ದರ್ಶನ್ ಅವರಿಗೆ ʼಕರಿಯʼ ಸಿನಿಮಾ ಮಾಡಿದ್ದರು. ಜೋಗಿ ಪ್ರೇಮ್‌ ಹಾಗೂ ನಟ ದರ್ಶನ್‌ ತೂಗುದೀಪ ಕಾಂಬಿನೇಶನ್‌ನಲ್ಲಿ ಮೂಡಿ ಬಂದ ಈ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. 2022ರಲ್ಲಿ ರಸ್ತೆ ಅಪಘಾತದಲ್ಲಿ ಆನೇಕಲ್‌ ಬಾಲರಾಜ್‌ ಅವರು ನಿಧನರಾಗಿದ್ದರು. ಸಂತೋಷ್ ಬಾಲರಾಜ್‌ಗೆ ಮದುವೆ ಆಗಿರಲಿಲ್ಲ, ತಾಯಿ ಜೊತೆಗಿದ್ದರು. ಜಾಂಡೀಸ್‌ ಎಂದು ಅವರು ವಾರಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ