
ಮೊದಲ ಮದುವೆಯನ್ನು ಮುರಿದುಕೊಂಡ ಬಹುಭಾಷಾ ನಟಿ ಪವಿತ್ರಾ ಲೋಕೇಶ್ ( Pavitra Lokesh ) ಅವರು ಆ ನಂತರ ನಟ ಸುಚೇಂದ್ರ ಪ್ರಸಾದ್ ಜೊತೆ 12-13 ವರ್ಷಗಳ ಕಾಲ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಈ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆ ಬಳಿಕ ಪವಿತ್ರಾ ಅವರು ಸುಚೇಂದ್ರ ಪ್ರಸಾದ್‌ರಿಂದ ದೂರವಾಗಿ, ತೆಲುಗು ನಟ ನರೇಶ್ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ. ಸುಚೇಂದ್ರ ಪ್ರಸಾದ್‌ರಿಂದ ದೂರ ಆಗಿದ್ದು ಯಾಕೆ ಎಂದು ಪವಿತ್ರಾ ತಾಯಿ ಪಾರ್ವತಿ ಅವರು ಚಿತ್ರಲೋಕ.ಕಾಂ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
“ನನ್ನ ಮಗಳು ದುಡಿದ ಹಣದಿಂದಲೇ ಸುಚೇಂದ್ರ ಪ್ರಸಾದ್ ತನ್ನ ಖರ್ಚನ್ನೆಲ್ಲ ಮ್ಯಾನೇಜ್ ಮಾಡಕೊಳ್ತಿದ್ದ. ಬ್ಯಾಂಕ್ ಲೋನ್ ತಗೊಂಡು ಅವಳು ಮನೆ ಮಾಡಿಕೊಳ್ಳುತ್ತಿದ್ದಳು, ಅವಳು ಬ್ಯಾಂಕ್ ಸಾಲ ತೀರಿಸುತ್ತಿದ್ದಳು. ಅವರಿಬ್ಬರು ಶೂಟಿಂಗ್ ಹೋದಾಗ ನಾನು ಮಕ್ಕಳನ್ನು ನೋಡಿಕೊಂಡು ಇರುತ್ತಿದ್ದೆ. ಸುಚೇಂದ್ರ ಪ್ರಸಾದ್‌ಗೆ ಬೇಳೆ ಸಾರು ಬೇಕು, ಅವನು ಕುಂಬಳಕಾಯಿ ಮಾತ್ರ ತಿನ್ನುತ್ತಾನೆ, ಉಪ್ಪಿಟ್ಟಿಗೆ ಈರುಳ್ಳಿ, ಬೆಳ್ಳುಳ್ಳಿ ಕೂಡ ಹಾಕೋ ಹಾಕಿಲ್ಲ. ಅವನಿಗೆ ಇಷ್ಟವಿಲ್ಲದ ಅಡುಗೆ ಮಾಡಿದ್ರೆ ಊಟ ಮಾಡದೆ ಎದ್ದು ಹೋಗ್ತಿದ್ದ. ಅದನ್ನೆಲ್ಲ ನಾನು ನೋಡಿದ್ದೀನಿ” ಎಂದು ಪಾರ್ವತಿ ಲೋಕೇಶ್ ಹೇಳಿದ್ದಾರೆ.
“ನನ್ನ ಮಗಳು ಅಷ್ಟು ದುಡಿದರೂ ಕೂಡ ಅವಳಿಗೆ ನೆಮ್ಮದಿ ಇಲ್ಲ. ಮನೆಯಲ್ಲಿ ಇರುವವರನ್ನು ಚೆನ್ನಾಗಿ ನೋಡ್ಕೋಬೇಕು, ಅದರಲ್ಲಿಯೂ ಹಗಲು ರಾತ್ರಿ ದುಡಿಯುತ್ತಾಳೆ. ಅವಳ ಕಷ್ಟ ಸುಖ ಕೇಳಬೇಕು ಅಲ್ವಾ? ದುಡ್ಡು ಸಿಗತ್ತೆ ಅಂತ ನನ್ನ ಮಗಳು ಸಣ್ಣ ಜಾಹೀರಾತು ಸಿಕ್ಕರೂ ಕೂಡ ಬಿಡುತ್ತಿರಲಿಲ್ಲ. ನನ್ನ ಮಗಳು ಒಂದು ಹಿಂದಿ ಸಿನಿಮಾ ಮಾಡಿದಾಳೆ, ಅದಕ್ಕಾಗಿ ಅವಳು ಬಾಂಬೆಗೆ ಹೋಗಿ 15 ದಿನ ಇದ್ದಾಳೆ. ಮನೆಯಿಂದ ಬೆಳಗ್ಗಿಂದ ಅವಳು ಐದುವರೆಗೆ ಹೊರಟರೆ ಆ ಶೂಟಿಂಗ್ ಸ್ಪಾಟ್ ಸಿಗೋದು 12 ಗಂಟೆ ಆಗುತ್ತಂತೆ. ಅಷ್ಟು ದೂರ ಇದೆ ಜರ್ನಿ. ಅಲ್ಲಿ ಕೆಲಸ ಮಾಡ್ಕೊಂಡು ಮತ್ತೆ ಅದೇ ಜರ್ನಿ ಮಾಡ್ಕೊಂಡು ಅವಳು ಇರೋ ಜಾಗಕ್ಕೆ ಬರೋದು ಕಷ್ಟ ಆಗುತ್ತಿತ್ತು. ಇಷ್ಟೆಲ್ಲ ಕಷ್ಟಪಡೋದು ಯಾರಿಗೆ ಅಂತ ಗೊತ್ತಿರಬೇಕಿತ್ತು” ಎಂದು ಪಾರ್ವತಿ ಹೇಳಿದ್ದಾರೆ.
“ನನ್ನ ಮಗಳು ವಿದ್ಯಾವಂತೆ, ಅವಳಿಗೆ ಯಾವುದು ತಪ್ಪು? ಯಾವುದು ಸರಿ ಅಂತ ಗೊತ್ತಿದೆ. ಸುಚೇಂದ್ರ ಪ್ರಸಾದ್ ಹಾಗೂ ಪವಿತ್ರಾ 12 ರಿಂದ 13 ವರ್ಷ ಜೊತೆಯಲ್ಲಿದ್ದರು. ಮದುವೆಯಾಗದಿದ್ದರೂ ಕೂಡ ಕಾನೂನಾತ್ಮಕವಾಗಿ ದೂರ ಆಗಿದ್ದಾರೆ. ನನ್ನ ಮಗಳಿಗೆ ಈಗ 46. ಸುಚೇಂದ್ರನನ್ನು ಮದುವೆ ಆಗು, ಅವನ ಜೊತೆ ಇರು ಅಂತ ನಾನು ಅವಳಿಗೆ ಹೇಳಿರಲಿಲ್ಲ. ಆದರೆ ಅವಳು ಯಾರ ಮಾತನ್ನು ಕೂಡ ಕೇಳಿರಲಿಲ್ಲ. ಸುಚೇಂದ್ರ ಪ್ರಸಾದ್ ತುಂಬ ಸುಳ್ಳು ಹೇಳುತ್ತಿದ್ದರು. ಎಷ್ಟು ಅಂತ ಸಹಿಸಿಕೊಳ್ಳೋದು ಅಂತ ನನ್ನ ಮಗಳು ಅವರಿಂದ ದೂರ ಆದಳು” ಎಂದಿದ್ದಾರೆ ಪಾರ್ವತಿ ಲೋಕೇಶ್.
“ನಾನು ದುಡಿದು, ದುಡಿದು ಸಾಕಾಗಿದ್ದೇನೆ. ನನಗೆ ನೆಮ್ಮದಿ ಬೇಕು. ಅದಿಕ್ಕೆ ನಾನು ನರೇಶ್ ಜೊತೆಗೆ ಇದ್ದೇನೆ ಅಂತ ಪವಿತ್ರಾ ನನಗೆ ಹೇಳಿದ್ದಾಳೆ. ನಾನು ಈ ಬಗ್ಗೆ ಅವಳಿಗೆ ಏನೂ ಪ್ರಶ್ನೆ ಕೇಳಿಲ್ಲ. ನನ್ನ ಮಗನಾಗಲೀ, ತಾಯಿಯಾಗಲೀ ಯಾರೂ ನನ್ನ ಮಾತು ಕೇಳಲ್ಲ, ಹೀಗಾಗಿ ನಾನು ಏನೂ ಹೇಳೋದಿಲ್ಲ. ಯಾರಾದರೂ ನಮ್ಮ ಮಾತು ಕೇಳಿದರೆ ಓಕೆ, ಕೇಳದೆ ಇದ್ರೆ ಬೇಸರ ಮಾಡಿಕೊಳ್ಳೋದಿಲ್ಲ, ಕೊರಗೋದಿಲ್ಲ. ಮದುವೆ ಆದಾಗಿನಿಂದ ನಾನು ಆರ್ಥಿಕವಾಗಿ ತುಂಬ ಕಷ್ಟಪಟ್ಟಿದ್ದೀನಿ, ಹೀಗಾಗಿ ಈಗ ಕೊರಗೋದು ಬಿಟ್ಟಿದ್ದೀನಿ” ಎಂದು ಅವರು ಹೇಳಿದ್ದಾರೆ.
“ಪವಿತ್ರಾ ಈಗ ಮಕ್ಕಳ ಜೊತೆ ಎಲ್ಲೋ ಹೊರಡಬೇಕು ಅಂತ ಸುಚೇಂದ್ರನಿಗೋಸ್ಕರ ಕಾಯುತ್ತಿರುತ್ತಾಳೆ. ಆದರೆ ಅವರು ಎಲ್ಲೋ ಹೊರಗಡೆ ಮಾತನಾಡುತ್ತ ನಿಂತಿರುತ್ತಾರೆ. ಇಲ್ಲೇ ಇದ್ದೀನಿ, ಇಲ್ಲೇ ಇದ್ದೀನಿ ಅಂತ ಹೇಳಿಕೊಂಡು ಲೇಟ್ ಆಗಿ ಬರ್ತಾರೆ. ಆಗ ನನ್ನ ಮಗಳು ಏನು ಮಾಡಬೇಕು? ಆಮೇಲೆ ನೀವೇ ಯಾವುದೋ ಟ್ಯಾಕ್ಸಿ ಮಾಡ್ಕೊಂಡು ಹೋಗಿ ಅಂತ ಸುಚೇಂದ್ರ ಪ್ರಸಾದ್ ಹೇಳ್ತಾರೆ. ಮಕ್ಕಳನ್ನು ನೋಡಿಕೊಳ್ಳೋದು ತಂದೆ ಕರ್ತವ್ಯ ಅಲ್ವಾ? ದುಡಿಯುವವರಿಗೆ ನೆಮ್ಮದಿ ಬೇಕು ಅಲ್ವಾ?” ಎಂದು ಪವಿತ್ರಾ ತಾಯಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.