ಬೀಚ್‌ನಲ್ಲಿ ಪತ್ನಿ ಜೊತೆ ಸಮಯ ಕಳೆದ ಧ್ರುವ ಸರ್ಜಾ; ರೋಮ್ಯಾಂಟಿಕ್ ಫೋಟೋ ವೈರಲ್!

Published : Mar 02, 2021, 02:04 PM IST
ಬೀಚ್‌ನಲ್ಲಿ ಪತ್ನಿ ಜೊತೆ ಸಮಯ ಕಳೆದ ಧ್ರುವ ಸರ್ಜಾ; ರೋಮ್ಯಾಂಟಿಕ್ ಫೋಟೋ ವೈರಲ್!

ಸಾರಾಂಶ

ನಟ ಧ್ರುವ ಸರ್ಜಾ  ಪತ್ನಿ ಪ್ರೇರಣಾ ರೊಮ್ಯಾಂಟಿಕ್ ಫೋಟೋ ಹಂಚಿ ಕೊಂಡಿದ್ದಾರೆ. ಅಣ್ಣ-ಅತ್ತಿಗೆ ಮೇಲೆ ಕಣ್ಣ ಬೀಳಬಾರದು ಎಂದು ದೃಷ್ಟಿ ತೆಗೆಯುತ್ತಿದ್ದಾರೆ ನೆಟ್ಟಿಗರು....  

ಸ್ಯಾಂಡಲ್‌ವುಡ್‌ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೊಗರು ಚಿತ್ರದ ಮೂಲಕ ಬಾಕ್ಸ್‌ ಆಫೀಸ್‌ ಕಿಂಗ್ ಎಂಬ ಬಿರುದು ಪಡೆದು ಕೊಂಡಿದ್ದಾರೆ.  ಬಿಡುಗಡೆಯಾದ 10 ದಿನದಲ್ಲಿ 51 ಕೋಟಿ ರೂ. ಕಲೆಕ್ಷನ್ ಮಾಡಿದೆ. ರಾಜ್ಯಾದ್ಯಾಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, 100 ದಿನ  ಪ್ರದರ್ಶನ ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲ.  ಮೂರು ವರ್ಷಗಳ ಕಾಲ ಒಂದೇ ಸಿನಿಮಾಗೆ ಮೀಸಲಿಟ್ಟ ಧ್ರುವ ಸರ್ಜಾ ಇದೀಗ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಪತ್ನಿ ಪ್ರೇರಣಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ರೊಮ್ಯಾಂಟಿಕ್ ಫೋಟೋ...

ಧ್ರುವ ಹಾಗೂ ಪ್ರೇರಣಾ ಯಾವ ಬೀಚ್ ಬಳಿ ಸಮಯ ಕಳೆಯುತ್ತಿದ್ದಾರೆ ಎಂದು ತಿಳಿದಿಲ್ಲ. ಆದರೆ ರಾತ್ರಿ ಹೊತ್ತಿನಲ್ಲಿ ಸಮುದ್ರದ ದಡದಲ್ಲಿ ಅಲೆಗಳ ಸದ್ದು ಕೇಳುತ್ತಾ ಕುಂತರೆ ಅದೇನೋ ನೆಮ್ಮದಿ. ಈ ವೇಳೆ ಸೆರೆ ಹಿಡಿದ ಫೋಟೋವನ್ನು ಪ್ರೇರಣಾ ಅಪ್ಲೋಡ್ ಮಾಡಿದ್ದಾರೆ. 'ನೋಡು ನೋಡು ಎಷ್ಟು ಚೆಂದ ಕಾಣ್ತಾ ಇದ್ದಾರೆ ನಮ್ ಅಣ್ಣ ಮತ್ತು ಅತ್ತಿಗೆ. ಯಾರ ಕೆಟ್ಟ ಕಣ್ಣು ನಿಮ್ಮ ಮೇಲೆ ಬೀಳದಿರಲಿ, ಜೈ ಆಂಜನೇಯ, ಜೈ ಶ್ರೀ ರಾಮ್,' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 

ಪತ್ನಿಗೆ ರೋಮ್ಯಾಂಟಿಕ್ ಬರ್ತ್‌ಡೇ ಡೇಟ್‌ ಮಾಡಿಸಿದ ಧ್ರುವ ಸರ್ಜಾ; ವಿಡಿಯೋ ವೈರಲ್! 

ಪ್ರೇರಣಾ ದಯಾನಂದ್ ಸಾಗರ್ ಕಾಲೇಜ್‌ನಲ್ಲಿ ಪ್ರೊಫೆಸರ್ ಆಗ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪತಿಯ ಚಿತ್ರದ ಬಗ್ಗೆಯೂ ಕೆಲವೊಮ್ಮೆ ಪ್ರಚಾರ ಮಾಡಿದ್ದಾರೆ. ಬಾಲ್ಯ ಸ್ನೇಹಿತರಾಗಿದ್ದ ಧ್ರುವ ಹಾಗೂ ಪ್ರೇರಣಾ ಪ್ರೀತಿಸಿ, ಗುರು ಹಿರಿಯರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪ್ರೀತಿಯ ಅಣ್ಣ ಚಿರಂಜೀವಿ ಹಾಗೂ ಅತ್ತಿಗೆ ಮೇಘನಾ ರಾಜ್‌ ಮುಂದೆ ನಿಂತು ಮದುವೆ ಮಾಡಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನಾನು ಮಾಡಿದ ಸಿನಿಮಾ ಯಾರೂ ನೋಡ್ಲಿಲ್ಲ, 15 ಮಂದಿ ಅಷ್ಟೇ ಥಿಯೇಟರ್‌ನಲ್ಲಿದ್ರು..' ಹೀರೋ ದಿನಗಳನ್ನು ನೆನೆದ ಅಕುಲ್‌ ಬಾಲಾಜಿ
'ಅನ್ನ ವಿಷ ಮಾಡಿದರೆ ಅವರ ವಂಶವೇ ಸರ್ವನಾಶ..' ಹೋಟೆಲ್ ಮಾಫಿಯಾ ವಿರುದ್ಧ ಸಿಡಿದೆದ್ದ ಜಗ್ಗೇಶ್‌