
ಪ್ರೇಮದ ಊರಲಿ ಸಿನಿಮಾ ಬ್ಲಾಕ್ಬಸ್ಟರ್ ಆಗುತ್ತಲೇ ಸಾಗುತ್ತಿದೆ. ಅತ್ಯಂತ ಕಡಿಮೆ ಬಜೆಟ್ನಲ್ಲಿ, ಯಾವುದೇ ಪ್ರಚಾರವನ್ನೂ ಮಾಡದೇ ಒಂದು ಸಿನಿಮಾ ಹೇಗೆ ಓಡಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿರೋದು ಈ ಸಿನಿಮಾ. ಈ ಸಿನಿಮಾದ ವಿಶೇಷತೆ ಎಂದರೆ, ಕಲಾವಿದರ ಪೈಕಿ ಹಲವರು ರಂಗಭೂಮಿ ನಟರು. ಯಾರೂ ಸಿನಿಮಾದ ಸ್ಟಾರ್ ನಟರಲ್ಲ. ಆದರೂ ಸಿನಿಮಾ ಗೆದ್ದಿದೆ. ಈ ಗೆಲುವಿನ ಪಾಲಿನಲ್ಲಿ ಒಂದು ಹೆಸರು ಬರುವುದು ನಟಿ ಇಳಾ ವಿಟ್ಲಾ ಅವರದ್ದು. ಬಹುಶಃ ಇಳಾ ಎಂದರೆ ಕೆಲವರಿಗೆ ತಿಳಿಯದೇ ಹೋಗಬಹುದು. ಇವರ ಫೋಟೋ ಹಾಕಿದರೂ ಇವರು ಈ ಸಿನಿಮಾದಲ್ಲಿ ಇದ್ದರೇ ಎಂದು ಪ್ರಶ್ನಿಸಬಹುದು. ಆದರೆ ಇವರೇ ಸಿನಿಮಾದಲ್ಲಿ ಅಜ್ಜಿಯಾಗಿದವರು ಎಂದರೆ ಬಹುಶಃ ಯಾರೂ ನಂಬಲ್ಲ. ಅವರೇ ಇಳಾ ವಿಟ್ಲ.
ಇದೀಗ ಪ್ರೇಮದ ಊರಲಿ ಸಕ್ಸಸ್ ಬಳಿಕ ಇಳಾ ಅವರೂ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ಅವರು ತಮ್ಮ ಕಾಲೇಜಿನ ದಿನಗಳನ್ನು ನೆನೆಯುತ್ತಾ, ತಾವು ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರು ಕ್ಲಾಸ್ಮೇಟ್ಸ್ ಆಗಿದ್ವಿ ಎನ್ನುವ ವಿಷಯವನ್ನು ರಿವೀಲ್ ಮಾಡಿದ್ದಾರೆ. ಆ ದಿನಗಳಲ್ಲಿ ನನ್ನ ಬ್ಯೂಟಿ ಬಗ್ಗೆ ಗಣೇಶ್ ಸಿಕ್ಕಾಪಟ್ಟೆ ಹೇಳುತ್ತಿದ್ದರು. ನನ್ನ ಹಲ್ಲುಗಳೆಲ್ಲಾ ಓರೆಕೋರೆ ಇದ್ದವು. ಗಣೇಶ್ ನೀನು ಇಂಡಸ್ಟ್ರಿಗೆ ಬರಬೇಕು ಎಂದ್ರೆ ಬ್ಯೂಟಿ ನೋಡ್ಬೋಬೇಕು. ಹಲ್ಲೆಲ್ಲಾ ಸರಿ ಮಾಡಿಸಿಕೋ ಎಂದು ಹೇಳಿ, ಗಣೇಶ್ ಮತ್ತು ಅವರ ಫ್ರೆಂಡ್ಸ್ ಸೇರಿ ಆಸ್ಪತ್ರೆಗೆ ಕರ್ಕೊಂಡು ಹೋಗಿ ಹಲ್ಲಿಗೆ ಕ್ಲಿಪ್ ಹಾಕಿಸಿದ್ರು ಎನ್ನುವುದನ್ನು ನೆನಪಿಸಿಕೊಂಡು, ಅವರಿಂದಲೇ ನಾನು ಇಂದು ಈ ಮಟ್ಟಿಗೆ ಬೆಳೆಯಲು ಕಾರಣವಾಯಿತು ಎನ್ನೋದನ್ನು ನೆನಪಿಸಿಕೊಂಡಿದ್ದಾರೆ.
ನಾನು ಹೀಗೆ ಆಗಲು ಗಣೇಶ್ ಕಾರಣ ಎಂದು ಅವರ ಹೆಸರನ್ನು ಮೇಲಿಂದ ಮೇಲೆ ಹೇಳಲಿಲ್ಲ. ಅವರ ಬಾಯಲ್ಲಿಯೇ ನನ್ನ ಹೆಸರು ಬರಬೇಕು ಎನ್ನೋದು ತುಂಬಾ ಆಸೆ ಇತ್ತು. ಅಂಥ ದೊಡ್ಡ ಸ್ಟಾರ್ ಬಾಯಲ್ಲಿ ನನ್ನಂಥ ಚಿಕ್ಕ ಕಲಾವಿದೆ ಹೆಸರು ಬಂದರೆ, ನನಗೂ ಸ್ಟಾರ್ ಪಟ್ಟ ಬರುತ್ತದೆ. ಆದರೆ ಈಗ ಆ ಆಸೆ ಈಡೇರಿದೆ. ಗಣೇಶ್ ಅವರು, ಇಳಾ (ಮೊದಲ ಹೆಸರು ಮಾಲತಿ ಎಂದಾಗಿತ್ತು) ನನ್ನ ಕ್ಲಾಸ್‌ಮೇಟ್ ಆಗಿದ್ದರು ಎಂದಾಗ ನನಗೆ ಸಿಕ್ಕಾಪಟ್ಟೆ ಖುಷಿ ಆಯ್ತು. ಈಗ ನಾನೂ ಸ್ಟಾರ್ ಲೆವೆಲ್ಗೆ ಹೋದೆ ಎನ್ನಿಸುತ್ತಿದೆ ಎಂದು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟಿ ಹೇಳಿದ್ದಾರೆ.
ಅಂದಹಾಗೆ ಇಳಾ ವಿಟ್ಲಾ (Ila Vitla), ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ವಿಶಿಷ್ಟ ನಟನೆಯ ಮೂಲಕ ಗುರುತಿಸಿಕೊಂಡಿರುವ ಪ್ರತಿಭಾವಂತ ನಟಿ. ಇವರೀಗ ಮತ್ತೆ ಸುದ್ದಿಯಲ್ಲಿ ಇರೋದು ಬ್ಲಾಕ್ ಬಸ್ಟರ್ ಸಿನಿಮಾ ಎಂದು ಗುರುತಿಸಿಕೊಂಡಿರುವ ಪ್ರೇಮದ ಊರಲಿ ಸಿನಿಮಾ ಮೂಲಕ. ನಟಿಯಾಗುವ ಟ್ಯಾಲೆಂಟ್ ಇರೋ ಇಳಾ ಸದ್ಯ ಚಿಕ್ಕಪುಟ್ಟ ಪಾತ್ರದಲ್ಲಿಯೇ ಸಂತೃಪ್ತಿ ಪಟ್ಟುಕೊಳ್ಳುತ್ತಿದ್ದು, ಪ್ರೇಮದ ಊರಲಿ (Premada Oorali) ಸಿನಿಮಾದಲ್ಲಿ ಇನ್ನೂ ಒಂದು ಹಂತ ಮುಂದಕ್ಕೆ ಹೋಗಿದ್ದಾರೆ. ಇಲ್ಲಿ ನಾಯಕನ ಅಪ್ಪ, ಯೇ ಮುದ್ಕಿ... ಯೇ ಮುದ್ಕಿ... ಎಂದು ಅಮ್ಮನನ್ನು ತಮಾಷೆಯಾಗಿ ಕರೆಯೋದು ಉಂಟು. ಆ ಮುದುಕಿಯ ರೋಲ್ ಮಾಡಿರೋ ನಟಿನೇ ಇಳಾ ವಿಟ್ಲ. ಅಂದಹಾಗೆ ಗೂಗಲ್ ದಾಖಲೆ ಪ್ರಕಾರ ನಟಿ ಇಳಾ ವಿಟ್ಲಾ ಅವರಿಗೆ ಈಗ 44 ವರ್ಷ ವಯಸ್ಸು. ಆದರೆ ನೋಡಲು ಇನ್ನೂ ಯಂಗ್. ತಮ್ಮ ನೇರ ನುಡಿ ಹಾಗೂ ಬೋಲ್ಡ್ ವ್ಯಕ್ತಿತ್ವದಿಂದಲೇ ಸದ್ದು ಮಾಡುತ್ತಲೇ ಇರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.