ನಟಿ ಪ್ರೇಮ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ವೆಡ್ಡಿಂಗ್ ಗಿಫ್ಟ್’ ಚಿತ್ರ ಜೂನ್ ತಿಂಗಳಲ್ಲಿ ಚಿತ್ರಮಂದಿರಗಳಿಗೆ ಬರಲಿದೆ.
ಪ್ರಸ್ತುತ ಚಿತ್ರದ ಆಡಿಯೋ ಬಿಡುಗಡೆ ಆಗಿದೆ. ವಿಕ್ರಂ ಪ್ರಭು ನಿರ್ಮಿಸಿ, ನಿರ್ದೇಶಿಸಿರುವ ಚಿತ್ರ ಇದಾಗಿದೆ. ನಿರ್ಮಾಪಕರಾದ ಭಾ ಮ ಹರೀಶ್ ಹಾಗೂ ಸುನೀಲ… ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು. ಚಿತ್ರಕ್ಕೆ ಬಾಲಚಂದ್ರ ಪ್ರಭು ಸಂಗೀತ, ಉದಯಲೀಲ ಛಾಯಾಗ್ರಾಹಣ ಮಾಡಿದ್ದಾರೆ.
ಆಡಿಯೋ ಬಿಡುಗಡೆ ನಂತರ ಮಾತನಾಡಿದ ವಿಕ್ರಮ್ ಪ್ರಭು, ‘ಇದು ನನ್ನ ಮೊದಲ ನಿರ್ದೇಶನದ ಸಿನಿಮಾ. ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಅವರ ಹಕ್ಕು ಮತ್ತು ಸ್ವಾತಂತ್ರ್ಯ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಹತ್ತಾರು ಕಾನೂನುಗಳು ಇವೆ. ಅದೇ ಕಾನೂನುಗಳನ್ನು ಕೆಲ ಹೆಣ್ಣು ಮಕ್ಕಳು ಯಾವ ರೀತಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಹೇಳಿರುವ ಕತೆ ಈ ಚಿತ್ರದಲ್ಲಿದೆ’ ಎಂದರು.
ನಿಶಾಂತ್ ಹಾಗೂ ಸೋನು ಗೌಡ ಚಿತ್ರದ ಜೋಡಿ. ವಿಕ್ರಮ್ ಪ್ರಭು ಹೇಳಿದ ಕತೆ ತುಂಬಾ ಇಷ್ಟವಾಗಿ ನಟಿ ಪ್ರೇಮಾ ಈ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ನಟಿಸಿದ್ದಾರಂತೆ. ಹೀಗಾಗಿ ಅವರು ದುಡ್ಡಿಗಾಗಿ ಅಥವಾ ಅವಕಾಶಕ್ಕಾಗಿ ಈ ಚಿತ್ರದಲ್ಲಿ ನಟಿಸಿಲ್ಲವಂತೆ. ಅಚ್ಯುತಕುಮಾರ್, ಪವಿತ್ರ ಲೋಕೇಶ್ ಚಿತ್ರದ ಮುಖ್ಯ ಪಾತ್ರಧಾರಿಗಳು.
ವಿಕ್ರಮ್ (Vikram) ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ನಂದೀಶ್ ನಾಣಯ್ಯ ನಾಯಕನಾಗಿ (Nandish Nannaya) ಕಾಣಿಸಿಕೊಳ್ಳಲಿದ್ದಾರೆ. ' ಹಾಲಿವುಡ್‌ನ 50 ಶೇಡ್ಸ್ ಆಫ್ ಗ್ರೇ (50 shades of grey) ಚಿತ್ರದಂತೆ ನೀವು ಈ ಚಿತ್ರದಲ್ಲಿ 50 ಶೇಡ್ಸ್ ಆಫ್ ಸೋನುವನ್ನು ನೋಡುಬಹುದು. ಹೆಣ್ಣು ಎಲ್ಲಾ ರೀತಿ ಭಾವನೆಗಳನ್ನು ಮತ್ತು ಗುಣಗಳನ್ನು ಹೊಂದಿರುತ್ತಾಳೆ. ಲಕ್ಷ್ಮಿ, ಸರಸ್ವತಿ, ದುರ್ಗಾಪರಮೇಶ್ವರಿ, ಕಾಳಿಕಾಂಬೆ, ಅನ್ನಪೂರ್ಣೇಶ್ವರಿ ಹೀಗೆ.... ಆಯಾ ಸಂದರ್ಭಕ್ಕೆ ತಕ್ಕಂತೆ ಅವಳಲ್ಲಿ ಈ ಗುಣ ಹೊರ ಬರುತ್ತದೆ. ನನಗೆ ಚಾಲೆಂಜಿಂಗ್ ರೋಲ್ ಎನ್ನಿಸಿತು,' ಎಂದು ಸೋನು ಗೌಡ್ ಖಾಸಗಿ ವೆಬ್‌ಸೈಟ್ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
Actress Prema: ಕೋರ್ಟ್ ಸೀನ್‌ನಲ್ಲಿ ನಟಿಸುವ ಬಗ್ಗೆ ಭಯ ಇತ್ತುನಾನು ಈವರೆಗೂ ಮಾಡಿರದ ಪಾತ್ರ ಸಿಗಬೇಕು ಅಂದುಕೊಳ್ಳುತ್ತಿದೆ. ಈ ಚಿತ್ರದಲ್ಲಿ ಸಿಕ್ಕಿದೆ. ಗಂಡ-ಹೆಂಡತಿಯಲ್ಲಿ ಯಾವತ್ತೂ ನನ್ನದು ಎನ್ನುವುದು ಬರಕೂಡದು. ನಮ್ಮದು ಅಂತ ಇರಬೇಕು. ಯಾವಾಗ ನನ್ನದು ಅಂತ ಬರುತ್ತದೆಯೋ, ಆಗ ಅವರಿಬ್ಬರ ನಡುವೆ ಏನಾಗುತ್ತದೆ. ಎಂಬುದೇ ಕಥಾಹಂದರ. ನನಗೆ ಈ ಪಾತ್ರ ತುಂಬಾ ಇಷ್ಟವಾಯಿತು. ಎಲ್ಲರಿಗೂ ಹಿಡಿಸಲಿದೆ ಎಂಬ ನಂಬಿಕೆಯಿದೆ ಎಂದು ಚಿತ್ರದ ನಾಯಕಿ ಸೋನು ಗೌಡ ಹೇಳಿದರು. ನಾನು ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್‌ನಲ್ಲಿ ಅಭಿನಯ ತರಬೇತಿ ಪಡೆದಿದ್ದೇನೆ. ಮಲೆಯಾಳಂ ಸೇರಿದಂತೆ ವಿವಿಧ ಭಾಷೆಗಳ ಇಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡದಲ್ಲಿ ಮೊದಲ ಚಿತ್ರ. ಕಥೆ ತುಂಬಾ ಇಷ್ಟವಾಯಿತು. ವಿಲಾಸ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಚಿತ್ರದ ನಾಯಕ ನಿಶಾಂತ್ ತಿಳಿಸಿದರು.
'ಈ ಸಿನಿಮಾ ಕಥೆ ಹೇಳಿದ್ದಾಗ ತುಂಬಾನೇ ವಿಭಿನ್ನ ಅನಿಸಿತ್ತು. ಏಕೆಂದರೆ ಸಿನಿಮಾದಲ್ಲಿ ಒಳ್ಳೆಯ ಮೆಸೇಜ್ ಇದೆ. ಇದರಿಂದ ನಾನು ತುಂಬಾನೇ ಖುಷಿ ಆದೆ. ವರ್ಕ್ ಕೂಡ ಯಾವುದೇ ಪ್ರೆಷರ್ ಇರಲಿಲ್ಲ. ತುಂಬಾನೇ ನೀಟ್ ಆಗಿ ಮಾಡಿದ್ದೀವಿ. ನಿರ್ದೇಶಕರ ಜೊತೆ ಕೆಲಸ ಮಾಡಿ ಖುಷಿ ಅಗಿದೆ. ಮೊದಲನೇ ಸಲ ಈ ತರ ಕ್ಯಾರೆಕ್ಟರ್ ಅನ್ನು ನಾನು ಮಾಡ್ತಾ ಇದ್ದೀನಿ. ಪಾತ್ರ ಡಿಫರೆಂಟ್ ಆಗಿದೆ. ನಿರ್ದೇಶಕರಿಗೆ ಧನ್ಯವಾಗಳನ್ನು ಹೇಳಬೇಕು. ಸಿನಿಮಾವನ್ನು ನಾನು ಎಂಜಾಯ್ ಮಾಡಿದೆ,' ಎಂದು ಪ್ರೇಮಾ ಪಾತ್ರದ ಬಗ್ಗೆ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ್ದಾರೆ.