ಪ್ರಮೋದ್‌ ನಟನೆಯ ಬಾಂಡ್‌ ರವಿ ಮುಹೂರ್ತ; ಶುಭ ಹಾರೈಸಿದ ಧ್ರುವ ಸರ್ಜಾ, ವಿನೋದ್‌ ಪ್ರಭಾಕರ್‌

Published : Apr 08, 2022, 09:15 AM IST
ಪ್ರಮೋದ್‌ ನಟನೆಯ ಬಾಂಡ್‌ ರವಿ ಮುಹೂರ್ತ; ಶುಭ ಹಾರೈಸಿದ ಧ್ರುವ ಸರ್ಜಾ, ವಿನೋದ್‌ ಪ್ರಭಾಕರ್‌

ಸಾರಾಂಶ

ಪ್ರಮೋದ್‌ ನಟನೆಯ ‘ಬಾಂಡ್‌ ರವಿ’ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಪ್ರಮೋದ್‌ ನಿರ್ದೇಶನದ ಈ ಚಿತ್ರದ ಮುಹೂರ್ತಕ್ಕೆ ಆಗಮಿಸಿದ ಧ್ರುವ ಸರ್ಜಾ ಮತ್ತು ವಿನೋದ್‌ ಪ್ರಭಾಕರ್‌ ಇಡೀ ತಂಡಕ್ಕೆ ಶುಭ ಹಾರೈಸಿದರು.

‘ಅಪ್ಪು ಸರ್‌ ಅಭಿಮಾನಿಯಾಗಿ ಈ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಪುನೀತ್‌ ಅವರ ಅಣ್ಣಾಬಾಂಡ್‌ ಸಿನಿಮಾದ ಬಾಂಡ್‌ ರವಿ ಪಾತ್ರದಂತೆ ಇರುವ ಪಾತ್ರ ನನ್ನದು’ ಎಂದು ಪ್ರಮೋದ್‌ ಹೇಳಿದರು. ಕಾಜಲ್‌ ಕುಂದರ್‌ ಸಿನಿಮಾದ ನಾಯಕಿ. ನರಸಿಂಹಮೂರ್ತಿ ಚಿತ್ರದ ನಿರ್ಮಾಪಕ. ಮಲ್ಲಿಕಾರ್ಜುನ್‌ ಕಾಶಿ, ಕ್ಸೇವಿಯರ್‌ ಫೆರ್ನಾಂಡಿಸ್‌ ಸಹ ನಿರ್ಮಾಪಕರು. ಮನೋಮೂರ್ತಿಯವ ಸಂಗೀತ, ಚಂದ್ರಶೇಖರ್‌ ಛಾಯಾಗ್ರಹಣ, ಅರ್ಜುನ್‌ ಕಿಟ್ಟು ಸಂಕಲನ, ಸುನೀಲ್‌- ದೇವರಾಜ್‌ ಸಂಭಾಷಣೆ ಚಿತ್ರಕ್ಕಿದೆ. ರವಿಕಾಳೆ, ಧರ್ಮ, ವಿಜಯ್‌ ಚೆಂಡೂರು, ಶೋಭರಾಜ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇತ್ತೀಚೆಗೆ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಗೊಂಡ 'ರತ್ನನ್ ಪ್ರಪಂಚ' ಸಿನಿಮಾದಲ್ಲಿ ಉಡಾಳ್ ಬಾಬು ಪಾತ್ರದಲ್ಲಿ ಇವರ ಅಭಿನಯ ಕಂಡು ಸಿನಿ ಪ್ರೇಕ್ಷಕರು ಕೊಂಡಾಡಿದ್ದರು. ಇದೀಗ ನಟ ಪ್ರಮೋದ್‌ ಅವರ ಖಾತೆಗೆ ಮತ್ತೊಂದು ಹೊಸ ಸಿನಿಮಾ ಜಮೆ ಆಗಿದೆ. ಯುಗಾದಿ ಹಬ್ಬದ (Ugadi Festival) ಅಂಗವಾಗಿ ಸೆಟ್ಟೇರಿ, ಘೋಷಣೆ ಆಗಿರುವ ಅವರ ಈ ಹೊಸ ಚಿತ್ರದ ಹೆಸರು ‘ಬಾಂಡ್‌ ರವಿ’ (Bond Ravi) ಎಂಬುದು.ಕಮರ್ಷಿಯಲ್‌ ಹಾಗೂ ಎಮೋಷನಲ್ ಥ್ರಿಲ್ಲರ್‌ ಜಾನರ್‌ ಚಿತ್ರವಿದು. ನರಸಿಂಹಮೂರ್ತಿ ನಿರ್ಮಾಪಕರು. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್‌, ಶೋಭರಾಜ್‌ ಮುಖ್ಯ ಪಾತ್ರಧಾರಿಗಳು. ಕೆ ಎಸ್‌ ಚಂದ್ರಶೇಖರ್‌ ಕ್ಯಾಮೆರಾ, ಸುನಿಲ್ ದೇವರಾಜ್‌ ಸಂಭಾಷಣೆ, ಮನೋಮೂರ್ತಿ ಸಂಗೀತ ಚಿತ್ರಕ್ಕಿದೆ.

English Manja Teaser: ಪ್ರಮೋದ್ ಚಿತ್ರದ ಟೀಸರ್ ರಿಲೀಸ್ ಮಾಡಿದ ದುನಿಯಾ ಸೂರಿ!

ಪ್ರಮೋದ್‌ 'ಇಂಗ್ಲಿಷ್‌ ಮಂಜ' (English Manja) ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದೆ. 2020ರಲ್ಲಿ ಸೆಟ್ಟೇರಿದ್ದ 'ಇಂಗ್ಲಿಷ್ ಮಂಜ' ಪಕ್ಕಾ ಆ್ಯಕ್ಷನ್, ರೌಡಿಸಂ ಹಿನ್ನೆಲೆಯುಳ್ಳ ಚಿತ್ರವಾಗಿದ್ದು, ಇದೀಗ ಬಿಡುಗಡೆಗೆ ಸಜ್ಜಾಗಿದೆ, ವಿಶೇಷವಾಗಿ ಈ ಚಿತ್ರದಲ್ಲಿ 15 ಮಂದಿ ನಿರ್ದೇಶಕರು ನಟಿಸಿದ್ದಾರೆ. ರೌಡಿಸಂ ಹಿನ್ನೆಲೆಯ ಕಥೆಗೆ ಬೇಕಾದ ಎಲ್ಲಾ ಕಮರ್ಶಿಯಲ್ ಎಳೆಯೂ 'ಇಂಗ್ಲಿಷ್ ಮಂಜ' ಚಿತ್ರದಲ್ಲಿದ್ದು ಅದರೊಂದಿಗೆ ಬ್ಯೂಟಿಫುಲ್ ಲವ್‌ಸ್ಟೋರಿ ಚಿತ್ರದಲ್ಲಿದೆ. ಲಾಂಗ್ ಹಿಡಿದು ರಗಡ್ ಲುಕ್‍ನಲ್ಲಿ ಅಬ್ಬರಿಸಿರುವ ಪ್ರಮೋದ್ ಲವರ್ ಬಾಯ್ ಆಗಿಯೂ ಚಿತ್ರದಲ್ಲಿ ಮಿಂಚಿದ್ದಾರೆ. ಇವರಿಗೆ ಜೋಡಿಯಾಗಿ ತೇಜಸ್ವಿನಿ ಶರ್ಮಾ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಪ್ರಮೋದ್ 'ಅಲಂಕಾರ್‌ ವಿದ್ಯಾರ್ಥಿ' (Alankar Vidyarthi) ಎಂಬ ಸಿನಿಮಾದಲ್ಲೂ ಕಾಲೇಜು ಹುಡುಗನಾಗಿ ನಟಿಸುತ್ತಿದ್ದಾರೆ. ಕೇಶವ್ ಎಸ್ ಇಂಡಲವಾಡಿ (Keshav S Indlavadi) ನಿರ್ದೇಶನದ ಚಿತ್ರವಿದು. ಇಲ್ಲಿಯವರೆಗೆ ನಾನು ಫುಲ್‌ ಕಾಮಿಡಿ ಇರುವ ಸಿನಿಮಾದಲ್ಲಿ ನಟಿಸಿರಲಿಲ್ಲ. ಈ ಕಾರಣಕ್ಕೆ ಈ ಚಿತ್ರ ಒಪ್ಪಿಕೊಂಡೆ. ಪೂರ್ಣ ಕಾಲೇಜು ಸ್ಟೋರಿ ಇರುವ ಚಿತ್ರದಲ್ಲಿ ಮಿಸ್ಟರಿ ಕೂಡ ಇದೆ. ಫ್ರೆಂಡ್‌ಶಿಪ್‌ನಲ್ಲಿರುವ ಫನ್‌, ಲವ್‌ ಎಲ್ಲಇವೆ' ಎಂದು ಪ್ರಮೋದ್ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?