
ನೈಜ ಘಟನೆಯಾಧರಿಸಿ ನಿರ್ಮಿಸಲಾಗಿರುವ ಚಿತ್ರ ಇದಾಗಿದ್ದು, ಕಾಮಿಡಿಯ ಜೊತೆಗೆ ಬೆಟ್ಟಿಂಗ್ ದಂಧೆಯ ಪರಿಣಾಮಗಳ ಬಗೆಗೂ ಸಿನಿಮಾದಲ್ಲಿ ಬೆಳಕು ಚೆಲ್ಲಲಾಗಿದೆ.
ಸಿನಿಮಾ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಖುಷಿಯನ್ನು ಹಂಚಿಕೊಳ್ಳಲೆಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಕುಮಾರ್ ಮಾತನಾಡಿದರು. ‘ಪ್ರತೀವರ್ಷ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಸಿಲುಕಿ ನೂರಾರು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಲವರು ಸಾಲದ ಸುಳಿಗೆ ಸಿಲುಕಿದ್ದಾರೆ. ಇಂಥಾ ಸತ್ಯಘಟನೆಯನ್ನು ಆಧರಿಸಿ ಈ ಚಿತ್ರ ಮಾಡಿದ್ದೇನೆ. ನಾಲ್ಕು ಆಯಾಮಗಳಲ್ಲಿ ಚಿತ್ರವಿದೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದಲ್ಲಿ ಎಲ್ಲರನ್ನೂ ನಗಿಸಿದ ತಬಲಾ ನಾಣಿ ಈ ಚಿತ್ರದಲ್ಲಿ ಲಾಯರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ’ ಎಂದರು.
40 ಸೆಕೆಂಡ್ ಡೈಲಾಗ್ ಹೇಳಿ ನಟ ಅಜಯ್ ರಾವ್‌ಗೆ ಸವಾಲ್ ಹಾಕಿದ ಹಾಸ್ಯ ನಟ ಚಿಕ್ಕಣ್ಣ ವಿಡಿಯೋ ವೈರಲ್!
ನಟ ತಬಲಾ ನಾಣಿ ಮಾತನಾಡುತ್ತಾ, ‘ಕೆಮಿಸ್ಟ್ರಿ ಆಫ್ ಕರಿಯಪ್ಪ ನನಗೆ ಅದೃಷ್ಟತಂದ ಚಿತ್ರ. ಆ ಸಿನಿಮಾದ ಬಳಿಕ ಹಲವು ಕಡೆ ಆಫರ್‌ಗಳು ಬಂದವು. ಇದೀಗ ಅದೇ ತಂಡದ ಜೊತೆಗೆ ಮತ್ತೆ ಕೆಲಸ ಮಾಡಲು ಖುಷಿ ಎನಿಸುತ್ತದೆ’ ಎಂದರು.
ಸುಚೇಂದ್ರ ಪ್ರಸಾದ್, ತರಂಗ ವಿಶ್ವ, ರಾಜೇಶ್ ನಟರಂಗ, ಅಪೂರ್ವ, ಅರುಣಾ ಬಾಲರಾಜ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ವೀರ್ ಸಮಥ್‌ರ್ ಸಂಗೀತ, ಶಿವ ಸೇನಾ ಮತ್ತು ಶಿವ ಶಂಕರ್ ಡಿಓಪಿ ಇದೆ. ಕೇಸರಿ ಫಿಲಂಸ್ ಕ್ಯಾಪ್ಚರ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಸೆನ್ಸಾರ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.