ರಾಮನವಮಿಯ ಸಡಗರದ ನಡುವೆಯೇ, ರಾಮ ಮಂದಿರದ ಭವ್ಯ ಇತಿಹಾಸದ ಕುರಿತು ಕನ್ನಡದಲ್ಲಿ ಬಯೋಪಿಕ್ ಬರಲಿದೆ. ಇಲ್ಲಿದೆ ಮಾಹಿತಿ...
ಇಂದು ಎಲ್ಲೆಲ್ಲೂ ರಾಮನವಮಿಯ ಸಂಭ್ರಮ. ಒಂದೆಡೆ ಅಯೋಧ್ಯೆಯ ರಾಮಲಲ್ಲಾನ ಸೂರ್ಯ ತಿಲಕದಿಂದ ಕೋಟ್ಯಂತರ ಮಂದಿ ಭಕ್ತರು ಪುಳಕಿತರಾಗಿರುವ ನಡುವೆಯೇ, ಇತ್ತ ರಾಮನವಮಿಯಂದೇ ಇನ್ನೊಂದು ಘೋಷಣೆಯಾಗಿದೆ. ಅದು ರಾಮ ಮಂದಿರದ ಬಯೋಪಿಕ್ ನಿರ್ಮಾಣದ ಕುರಿತು. ಹೌದು. ಇದಾಗಲೇ ಬಯೋಪಿಕ್ ಹಲವಾರು ಬಂದಿವೆ. ಆದರೆ ಬಹುತೇಕ ಎಲ್ಲವೂ ವ್ಯಕ್ತಿಯ ಬಗ್ಗೆ ಈ ಬಯೋಪಿಕ್‌ಗಳು ಬಂದಿವೆ. ಆದರೆ ಇದೀಗ ರಾಮ ಮಂದಿರದ ಕುರಿತು ಬಯೋಪಿಕ್ ಮಾಡುವ ಯೋಚನೆ ಮಾಡಿದ್ದಾರೆ ನಿರ್ದೇಶಕ ಶ್ರೀನಿವಾಸ್ ರಾಜು. 'ದಂಡುಪಾಳ್ಯ' ಸರಣಿ ಸಿನಿಮಾಗಳ ನಿರ್ದೇಶಕರಾಗಿರುವ ಇವರು, ಇದೀಗ ರಾಮಮಂದಿರದ ಬಯೋಪಿಕ್ ಮಾಡುತ್ತಿದ್ದಾರೆ. ಕನ್ನಡದಲ್ಲಿಯೇ ಈ ಚಿತ್ರ ಬರುತ್ತಿರುವುದು ಬಹುವಿಶೇಷ.
ಅಷ್ಟಕ್ಕೂ ರಾಮಮಂದಿರ ಕಥೆಯೇ ರೋಚಕ. ಇದು ಒಂದಲ್ಲ... ಎರಡಲ್ಲ... ಐದುನೂರು ವರ್ಷಕ್ಕೂ ಹಳೆಯದಾಗಿರುವ ಹೋರಾಟ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಗೆ ಸಾಕ್ಷಿಯಾಗಿರುವ ಈ ವರ್ಷದ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ರಾಜಾ ವಿಕ್ರಮಾದಿತ್ಯ ಪ್ರತಿಷ್ಠಾಪಿಸಿದ ಶ್ರೀರಾಮ ಮಂದಿರದಿಂದ ಈ ಚಿತ್ರದ ಕಥೆ ಶುರುವಾಗಲಿದ್ದು ಬಳಿಕ ಅದನ್ನು ಒಡೆದು ಬಾಬರಿ ಮಸೀದಿ ನಿರ್ಮಾಣವಾಗಿದ್ದು 500 ವರ್ಷಗಳ ಹೋರಾಟದ ಬಳಿಕ ಮತ್ತೆ ಭವ್ಯ ರಾಮಮಂದಿರ ನಿರ್ಮಾಣವಾದ ಕಥೆಯನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
undefined
ಬಿಂಕದ ಸಿಂಗಾರಿ... ಡಾ.ರಾಜ್ ಹಾಡಿಗೆ ಸೀತಾ-ರಾಮ ಮಾಡರ್ನ್ ಸ್ಟೆಪ್: ಮನಸೋತ ಅಭಿಮಾನಿಗಳು
ಚಿತ್ರದಲ್ಲಿ ರಾಮಾಯಣ ಕಾವ್ಯ ಪೌರಾಣಿಕ ಕಥೆಯೂ ಇರಲಿದ್ದು ಅದನ್ನು ಹೇಳುವ ಪ್ರಯತ್ನಕ್ಕೆ ಶ್ರೀನಿವಾಸ್ ರಾಜು ಮುಂದಾಗಿದ್ದಾರೆ. 1528 ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಾಣವಾಯಿತು. ಆನಂತರ ಆ ಜಾಗದಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗಬೇಕೆಂದು ಸಾಕಷ್ಟು ಹೋರಾಟಗಳು ನಡೆದವು. ರಾಮ ಜನ್ಮಭೂಮಿಯಲ್ಲಿ ರಾಮನ ಆಲಯ ನಿರ್ಮಿಸಲು ಸಾಕಷ್ಟು ಹೋರಾಟ ನಡೆಯಿತು. ವಿವಾದ ಕೋರ್ಟ್ ಮೆಟ್ಟಿಲೇರಿ ನೂರಕ್ಕೂ ಹೆಚ್ಚು ವರ್ಷಗಳ ಕಾಲ ಪದೇ ಪದೆ ವಿಚಾರಣೆ ನಡೆದು 2019 ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ನಿರ್ಮಾಣಕ್ಕೆ ಅನುಮತಿ ಸಿಕ್ಕಿತ್ತು.
ಕೊನೆಗೂ 2019ರಲ್ಲಿ ನ್ಯಾಯಾಲಯ ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ನಿರ್ಮಾಣಕ್ಕೆ ಅನುಮತಿ ನೀಡಿತ್ತು. ಅದರಂತೆ ಇದೇ ವರ್ಷದ ಜನವರಿಯಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಾಯಿತು. 500 ವರ್ಷಗಳ ಇತಿಹಾಸವನ್ನು ಮೂರು ಭಾಗಗಳಾಗಿ ಸಿನಿಮಾ ರೂಪದಲ್ಲಿ ತೆರೆಗೆ ತರುವುದಾಗಿ ಚಿತ್ರತಂಡ ಹೇಳಿದೆ. ದಶರಥ, ರಾಮ, ಸೀತಾ, ಹನುಮಂತ, ವಾಲಿ ಹಾಗೂ ವಾಲ್ಮೀಕಿ ಜೊತೆಗೆ ತುಳಸಿದಾಸರ ಪಾತ್ರಗಳನ್ನು ತೆರೆಮೇಲೆ ತೋರಿಸುವ ಚಿಂತನೆ ಮಾಡಲಾಗಿದೆ. ಶ್ರೀರಾಮನ ಆದರ್ಶದ ಗುಣಗಳನ್ನು ಈ ಚಿತ್ರದಲ್ಲಿ ತೋರಿಸುತ್ತೇವೆ ಎಂದು ನಿರ್ದೇಶಕರು ಹೇಳಿದ್ದಾರೆ.
ಸೀತಾರಾಮ ಸೀರಿಯಲ್ ಅಶೋಕ್- ಪ್ರಿಯಾ ರೀಲ್ ಮದ್ವೆಗೂ ಇಷ್ಟೊಂದು ಖರ್ಚಾ? ವಿವಾಹದ ಮೇಕಿಂಗ್ ವಿಡಿಯೋ ವೈರಲ್