ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ಕೊಡುಗೆ ನೀಡಿದ ಪ್ರಣೀತಾ

Published : May 05, 2021, 09:08 AM ISTUpdated : May 05, 2021, 09:28 AM IST
ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ಕೊಡುಗೆ ನೀಡಿದ ಪ್ರಣೀತಾ

ಸಾರಾಂಶ

ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ಖರೀದಿಗೆ 1 ಲಕ್ಷ ರುಪಾಯಿ ನೆರವು | ಫಂಡ್‌ ರೈಸ್ ಮಾಡ್ತಿದ್ದಾರೆ ಬಹುಭಾಷಾ ನಟಿ

ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ಖರೀದಿಗೆ 1 ಲಕ್ಷ ರು. ನೀಡುವ ಜೊತೆಗೆ ಕ್ರೌಡ್‌ಫಂಡಿಂಗ್‌ಗೂ ಮುಂದಾಗಿದ್ದಾರೆ ನಟಿ ಪ್ರಣೀತಾ ಸುಭಾಷ್‌. ಈ ಬಗ್ಗೆ ಮಾಹಿತಿ ನೀಡಿದ ಪ್ರಣೀತಾ, ‘ಕೊರೋನಾ ರೋಗಿಗಳಿಗೆ ಆಕ್ಸಿಜನ್‌ ಕೊರತೆ ಹೆಚ್ಚೆಚ್ಚು ಕಾಡುತ್ತಿದೆ.

ಈ ಹಿನ್ನೆಲೆಯಲ್ಲಿ ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ನೀಡಿದರೆ ಹೆಚ್ಚು ಪ್ರಯೋಜನಕಾರಿ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಮುಂದಾದೆ’ ಎಂದಿದ್ದಾರೆ. ‘ಸಾಮಾನ್ಯವಾಗಿ ಸೆಲೆಬ್ರಿಟಿಗಳು ಕೊರೋನಾ ಪೀಡಿತರ ನೆರವಿಗೆ ಧಾವಿಸಿದರೆ ಸಾಮಾನ್ಯ ಜನರೂ ಮುಂದೆ ಬರುತ್ತಾರೆ.

ಕೊರೋನಾ ಸಂಕಷ್ಟಕ್ಕೆ ಧಾವಿಸಿದ ಕಿಚ್ಚ ಸುದೀಪ್ ಆಕ್ಸಿಜನ್

ಈ ಹಿನ್ನೆಲೆಯಲ್ಲಿ ನಾನೇ ಮುಂದಾಗಿ 1 ಲಕ್ಷ ರು. ಮೊತ್ತ ನೀಡಿ, ಕ್ರೌಡ್‌ ಫಂಡಿಂಗ್‌ಗೆ ಮುಂದಾಗಿರುವೆ. ಮುಂದಿನ ದಿನಗಳಲ್ಲಿ ಕ್ರೌಡ್‌ ಫಂಡಿಂಗ್‌ ಮೂಲಕ ಸುಮಾರು 25 ಸಾವಿರದಷ್ಟುಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ಖರೀದಿಸಿ ಆಸ್ಪತ್ರೆಗಳಿಗೆ ನೀಡುವ ಯೋಜನೆ ಇದೆ’ ಎಂದು ಪ್ರಣೀತಾ ಹೇಳಿದ್ದಾರೆ.

‘ಇದರ ಜೊತೆಗೆ ಸೋಷಿಯಲ್‌ ಮೀಡಿಯಾವನ್ನೂ ಪರಿಣಾಮಕಾರಿಯಾಗಿ ಬಳಸಿಕೊಂಡು ಕೊರೋನಾ ರೋಗಿಗಳ ನೆರವಿಗೆ ಮುಂದಾಗುತ್ತಿದ್ದೇವೆ’ ಎಂದಿದ್ದಾರೆ. ಈಗಾಗಲೇ  ಸೋನು ಸೂದ್, ಪ್ರಿಯಾಂಕ ಚೋಪ್ರಾ, ಕರೀನಾ ಕಪೂರ್, ಕಿಚ್ಚ ಸುದೀಪ್ ಸೇರಿ ಬಹಳಷ್ಟು ಸಿನಿಮಾ ತಾರೆಯರು ಕೊರೋನಾ ವಿರುದ್ಧ ಹೋರಾಟದಲ್ಲಿ ಕೈಜೋಡಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?