ಕೊರೋನಾ ಸಂಕಷ್ಟಕ್ಕೆ ಧಾವಿಸಿದ ಕಿಚ್ಚ ಸುದೀಪ್ ಆಕ್ಸಿಜನ್

By Suvarna NewsFirst Published May 4, 2021, 10:34 PM IST
Highlights

ಕೊರೋನಾ ಸೋಂಕಿತರಿಗೆ ಉಸಿರಾದ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್/ ಕೊರೋನಾ ಸೋಂಕಿತರಿಗೆ ಕಿಚ್ಚ ಸುದೀಪ್ ಮಾರ್ಗದರ್ಶನದಲ್ಲಿ ನೆರವಿನ ಹಸ್ತ/ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರೇರಣೆಯ ಕೆಲಸ/ ಜನರು ಸಂಕಷ್ಟಕ್ಕೆ ಧಾವಿಸಿದ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ/ ಉಸಿರಿಗೆ ಉಸಿರಾಗಿರುವ ಆಕ್ಸಿಜನ್ ಪೊರೈಕೆ

ಬೆಂಗಳೂರು(ಮೇ 04)  ಕೊರೋನಾ ಸೋಂಕಿತರ ನೆರವಿಗೆ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ನಿಂತಿದೆ. ಕೊರೋನಾ ಸೋಂಕಿತರಿಗೆ ಕಿಚ್ಚ ಸುದೀಪ್ ಮಾರ್ಗದರ್ಶನದಲ್ಲಿ ನೆರವಿನ ಹಸ್ತ ಚಾಚಲಾಗಿದೆ.

ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರೇರಣೆಯ ಕೆಲಸ ನಡೆದಿದೆ. ಜನರು ಸಂಕಷ್ಟಕ್ಕೆ ಧಾವಿಸಿದ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ  ಆಕ್ಸಿಜನ್ ಪೊರೈಕೆ ಮಾಡಿದೆ. ಪ್ರತಿನಿತ್ಯ 300 ಆಕ್ಸಿಜನ್ ಸಿಲಿಂಡರ್ ಉಚಿತವಾಗಿ ಸೊಸೈಟಿ ವಿತರಣೆ ಮಾಡುತ್ತಿದೆ.

ನಿಷೇಧಾಜ್ಞೆ ಇದ್ದರೂ ಕರ್ನಾಟಕದಲ್ಲಿ ಕಡಿಮೆಯಾಗದ ಕೊರೋನಾ

ಅಗತ್ಯವಿರುವ ಆಸ್ಪತ್ರೆ ಹಾಗೂ ರೋಗಿಗಳಿಗೆ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಬೆಂಗಳೂರಿನ ಸರ್ಕಾರಿ ವೈದ್ಯರ ಸಂಪರ್ಕದ ಮೂಲಕ ಈಗಾಗಲೇ 300 ಆಕ್ಸಿಜನ್ ಸಿಲಿಂಡರ್  ನೀಡಲಾಗಿದೆ. ಬುಧವಾರ ಮತ್ತೊಂದು ಹಂತದಲ್ಲಿ ಸಿಲಿಂಡರ್ ಗಳ ವ್ಯವಸ್ಥೆಯನ್ನು ಟ್ರಸ್ಟ್ ಮಾಡಿದೆ.

ಕಳೆದ ವರ್ಷದಿಂದ  ಕೊರೋನಾ ಸಂದರ್ಭದಲ್ಲಿ ನೆರವು ನೀಡಿಕೊಂಡು ಬಂದಿದೆ. ಕಳೆದ ವರ್ಷ ಪುಡ್ ಕಿಟ್, ಮಾಸ್ಕ್ ನೀಡಿದ್ದ ಕಿಚ್ಚ ಸುದೀಪ್ ಟ್ರಸ್ಟ್  ಈ ವರ್ಷ ಉಚಿತ ಆಕ್ಸಿಜನ್, ಬೆಡ್ ಮತ್ತು ಲಸಿಕೆಯನ್ನು  ನೀಡುತ್ತಿದೆ.

ಕಳೆದ ನಾಲ್ಕು ವರ್ಷದಿಂದ ಸಮಾಜಮುಖಿ ಕೆಲಸ ಮಾಡಿಕೊಂಡು ಬಂದಿದೆ. ಕಳೆದ 2 ವರ್ಷದಿಂದ ನಿರಂತರ ಸೇವೆ ಮಾಡಿಕೊಂಡು ಬಂದಿದೆ. ಕೊರೋನಾ ಪೀಡಿತರ ನೆರವಿಗೆ ಧಾವಿಸುತ್ತಿರುವ ಸೊಸೈಟಿ ಪ್ರತಿ ಮನೆಯೂ ಮೊದಲಿನಂತೆ ಆಗಬೇಕೆಂಬ ಧ್ಯೇಯ ಇಟ್ಟುಕೊಂಡು ಕೆಲಸ ಮಾಡುತ್ತಿದೆ.

 

 

"ಪ್ರತಿ ಜೀವ ನಮಗೆ ಮುಖ್ಯ. ಆ ಜೀವನ ನಂಬಿಕೊಂಡು ಯಾರೋ.. ಎಲ್ಲೋ ಕಾಯ್ತಾ ಇರ್ತಾರೆ... ಅದನ್ನ ಉಳಿಸುವ ಪ್ರಯತ್ನ ಮಾಡೋಣ." - @...

Posted by Kichcha Sudeepa Charitable Society on Tuesday, 4 May 2021
click me!