ತಮಿಳು ನಟ ಸಿದ್ಧಾರ್ಥ್‌ಗೆ ಸಪೋರ್ಟ್‌ ಮಾಡಿದ 'ಕನ್ನಡಿಗ' ಪ್ರಕಾಶ್‌ ರಾಜ್‌ಗೆ ನೆಟ್ಟಿಗರ ಕ್ಲಾಸ್!

By Shriram Bhat  |  First Published Sep 29, 2023, 12:27 PM IST

ಬೆಂಗಳೂರಿನಲ್ಲಿ ತಮಿಳು ನಟ ಸಿದ್ಧಾರ್ಥ್‌ ಸುದ್ದಿಗೋಷ್ಠಿಗೆ 'ಕರವೇ ಸ್ವಾಭಿಮಾನಿ ಸೇನೆ' ಕಡೆಯವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ನಟ ಪ್ರಕಾಶ್ ರಾಜ್‌ ಕನ್ನಡಿಗರ ಪರವಾಗಿ ಕ್ಷಮೆ ಕೇಳಿದ್ದಾರೆ. ಈ ಸಂಗತಿ ಈಗ ಪ್ರಕಾಶ್‌ ರಾಜ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.


ಕನ್ನಡಿಗ, ನಟ ಪ್ರಕಾಶ್ ರಾಜ್ (ಪ್ರಕಾಶ್ ರೈ) ನಿನ್ನೆ ತಮಿಳು ನಟ ಸಿದ್ಧಾರ್ಥ್ (Siddharth)ಅವರಿಗೆ ಸಪೋರ್ಟ್‌ ಮಾಡಿ ಟ್ವೀಟ್ ಮಾಡಿದ್ದಾರೆ. 'ಕಾವೇರಿ ಕಿಚ್ಚು ಹತ್ತಿಕೊಂಡಿರುವ ಈ ಸಮಯದಲ್ಲಿ ತಮಿಳು ನಟ ಸಿದ್ಧಾರ್ಥರ ಪತ್ರಿಕಾಗೋಷ್ಠಿಯ ಅಗತ್ಯವೇನಿದೆ' ಎಂದು ಪ್ರಶ್ನಿಸಿ ಕರವೇ ಸಂಘಟನೆ ಕಡೆಯವರು ಪತ್ರಿಕಾಗೋಷ್ಠಿ ರದ್ದಾಗಲು ಕಾರಣರಾಗಿದ್ದರು. ಈ ಬೆಳವಣಿಗೆಯನ್ನು ನಟ ಪ್ರಕಾಶ್ ರಾಜ್ ಖಂಡಿಸಿ ನಟ ಸಿದ್ಧಾರ್ಥ ಗೆ ಬೆಬಾಲಿಸಿ ಕನ್ನಡಿಗರ ಪರವಾಗಿ ಕ್ಷಮೆ ಕೇಳಿದ್ದರು. ಇದೀಗ, ಈ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧಕ್ಕೆ ಕಾರಣವಾಗಿದೆ. 

ನಟ ಸಿದ್ದಾರ್ಥ ನಟಿಸಿರುವ 'ಚಿತ್ಥ' ಚಿತ್ರದ ಸುದ್ದಿಗೋಷ್ಠಿ ಮಲ್ಲೇಶ್ವರಂನ SRV ಥಿಯೇಟರ್‌ನಲ್ಲಿ ನಡೆಯುತ್ತಿತ್ತು.  ಕರವೇ ಸ್ವಾಭಿಮಾನಿ ಬಳಗದವರು "ಕಾವೇರಿ ಕಿಚ್ಚು ಹತ್ತಿರೋ ಈ ಸಮಯದಲ್ಲಿ ತಮಿಳು ಚಿತ್ರದ ಪ್ರಚಾರದ ಅವಶ್ಯಕತೆ ಏನಿದೆ...? ಈ ಸಮಯದಲ್ಲಿ ಸುದ್ದಿಗೋಷ್ಠಿಗೆ ನಮ್ಮ ವಿರೋಧವಿದೆ. ದಯವಿಟ್ಟು ತಕ್ಷಣವೇ ಸುದ್ದಿಗೋಷ್ಠಿ ನಿಲ್ಲಿಸಿ.  ಇಲ್ಲಿ ಕಾವೇರಿ ಗಲಾಟೆ ನಡೆಯುತ್ತಿದೆ.. ಈಗ ಇದು ಬೇಕಿತ್ತಾ..? ಸಂಘರ್ಷಕ್ಕೆ ಇದು ದಾರಿ ಮಾಡಿಕೊಡಲ್ಲವಾ..? ಎಂದು ನಿಂಗರಾಜು ಗೌಡ ಮತ್ತು ಕರವೇ ಸ್ವಾಭಿಮಾನಿ ಸೇನೆ ತಂಡ ವಿರೋಧ ವ್ಯಕ್ತಪಡಿಸಿತ್ತು. 

Tap to resize

Latest Videos

ಕಾವೇರಿ ಹೋರಾಟ (Cauvery Water) ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಒಂದೇ ವಾರದಲ್ಲಿ ಕಾವೇರಿ ನೀರಿಗಾಗಿ ಎರಡು ಬಂದ್ ಆಗಿದೆ. ಇದೀಗ ಬೆಂಗಳೂರಿನಲ್ಲಿ ತಮಿಳು ನಟ ಸಿದ್ಧಾರ್ಥ್‌ ಸುದ್ದಿಗೋಷ್ಠಿಗೆ 'ಕರವೇ ಸ್ವಾಭಿಮಾನಿ ಸೇನೆ' ಕಡೆಯವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ನಟ ಪ್ರಕಾಶ್ ರಾಜ್‌ ಕನ್ನಡಿಗರ ಪರವಾಗಿ ಕ್ಷಮೆ ಕೇಳಿದ್ದಾರೆ. ಈ ಸಂಗತಿ ಈಗ ಪ್ರಕಾಶ್‌ ರಾಜ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಕಾಶ್ ರಾಜ್ , "ದಶಕಗಳಷ್ಟು ಹಳೆಯದಾದ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿರುವ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅದರ ಮುಖಂಡರನ್ನು ಪ್ರಶ್ನಿಸುವ ಬದಲು, ಕೇಂದ್ರದ ಮಧ್ಯಸ್ಥಿಕೆಗೆ ಒತ್ತಡ ಹೇರದ ಅನುಪಯುಕ್ತ ಸಂಸದರನ್ನು ಪ್ರಶ್ನಿಸುವ ಬದಲು  ಈ ರೀತಿ ಜನಸಾಮಾನ್ಯರಿಗೆ ಮತ್ತು ಕಲಾವಿದರಿಗೆ ತೊಂದರೆ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡಿಗನಾಗಿ , ಕನ್ನಡಿಗರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಸಿದ್ದಾರ್ಥ್‌ "ಎಂದು ತಮ್ಮ 'x' ನಲ್ಲಿ ಬರೆದುಕೊಂಡಿದ್ದಾರೆ.

ಯಾವುದೇ ಕಾರಣಕ್ಕೂ Rajinikanth ಕರ್ನಾಟಕಕ್ಕೆ ಬರಬಾರದು: ವಾಟಾಳ್ ನಾಗರಾಜ್

ಆದರೆ ಈ ಬಗ್ಗೆ ಹಲವರು "ಯಾಕೆ ಸೆಂಟ್ರಲ್ ಗವರ್ನ್ಮೆಂಟ್‌? 'ಇಂಡಿ'ಯಲ್ಲಿ ನಿಮ್ಮ ಕಡೆಯವರೇ ಇದ್ದಾರಲ್ಲ! ಅವರೇ ಒಟ್ಟಿಗೆ ಕುಳಿತು ಈ ಸಮಸ್ಯೆಯನ್ನು ಬಗೆಹರಿಸಕೊಳ್ಳಬಹುದಲ್ಲ? ಯಾಕೆ, ನೀವು ಇದಕ್ಕೆಲ್ಲಾ ಹೀಗೆ ಪ್ರತಿಕ್ರಿಯೆ ನೀಡುತ್ತೀರಿ?" ಎಂದು ಪ್ರಶ್ನಿಸಿದ್ದಾರೆ. ಹಲವರು "ಪ್ರಕಾಶ್‌ ರಾಜ್ ಟ್ವೀಟ್ ಒಪ್ಪಲು ಸಾಧ್ಯವಿಲ್ಲ. ಕನ್ನಡಿಗ ನಟರಾಗಿ ಪ್ರಕಾಶ್ ರಾಜ್ ಈ ಸಮಯದಲ್ಲಿ ತಮಿಳು ನಟರಿಗೆ ಸಪೋರ್ಟ್ ಮಾಡಿ ಈ ರೀತಿ ಟ್ವೀಟ್ ಮಾಡಿದರೆ ಖಂಡಿತವಾಗಿ ಇದನ್ನು ಒಪ್ಪಲು ಸಾಧ್ಯವಿಲ್ಲ" ಎಂದಿದ್ದಾರೆ. 

ಕಾವೇರಿ ಹೋರಾಟ: ತಮಿಳು ನಟನಿಗೆ ಕನ್ನಡಿಗರ ಪರ ಪ್ರಕಾಶ್ ರಾಜ್ ಕ್ಷಮೆ, ಯಾರೀ ಅಧಿಕಾರ ಕೊಟ್ಟಿದ್ದೆಂದ ಕರುನಾಡು!

ಈ ಬೆಳವಣಿಗೆ ನಡೆದ ಬೆನ್ನಲ್ಲೇ ತಮಿಳು ನಟ ಸಿದ್ಧಾರ್ಥ ಪ್ರೆಸ್‌ಮೀಟ್‌ನಿಂದ ಹೊರನಡೆದರು.  ನಾಯಕ ನಟ ಸಿದ್ಧಾರ್ಥ ಹೊರನಡೆದ ತಕ್ಷಣ 'ಪ್ರೇಸ್ ಮೀಟ್' ನಿಂತುಹೋಗಿ ಅಲ್ಲಿ ಮೌನ ಆವರಿಸಿತು. ಸೋಷಿಯಲ್ ಮೀಡಿಯಾದಲ್ಲಿ ಇದು ಪರ-ವಿರೋಧ ಚರ್ಚೆಗೆ ಕಾರಣವಾಗಿತ್ತು. ಬೆಂಕಿಗೆ ತುಪ್ಪ ಸುರಿದಂತೆ ನಟ ಪ್ರಕಾಶ್ ರಾಜ್ ಈ ಬಗ್ಗೆ ತಮಿಳು ನಟ ಸಿದ್ಧಾಥ್‌ಗೆ ಸಪೋರ್ಟ್ ಮಾಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. 

click me!