ಲೀಲಾವತಿ ಅವ್ರೇ ಆ ಇನ್ನೊಂದು ಸತ್ಯ ಒಪ್ಪಿಕೊಂಡು ನೇರವಾಗಿ ಸ್ವರ್ಗಕ್ಕೆ ಹೋಗಿ; ಪ್ರಕಾಶ್ ರಾಜ್ ಮೆಹು

Published : Apr 15, 2023, 12:38 PM IST
ಲೀಲಾವತಿ ಅವ್ರೇ ಆ ಇನ್ನೊಂದು ಸತ್ಯ ಒಪ್ಪಿಕೊಂಡು ನೇರವಾಗಿ ಸ್ವರ್ಗಕ್ಕೆ ಹೋಗಿ; ಪ್ರಕಾಶ್ ರಾಜ್ ಮೆಹು

ಸಾರಾಂಶ

ಲೀಲಾವತಿ ಅವ್ರೇ ಆ ಇನ್ನೊಂದು ಸತ್ಯ ಒಪ್ಪಿಕೊಂಡು ನೇರವಾಗಿ ಸ್ವರ್ಗಕ್ಕೆ ಹೋಗಿ ಎಂದು ಪ್ರಕಾಶ್ ರಾಜ್ ಮೆಹು ಮತ್ತೊಂದು ಪೋಸ್ಟ್ ಶೇರ್ ಮಾಡಿದ್ದಾರೆ. 

ಸ್ಯಾಂಡಲ್ ವುಡ್‌ನ ಹಿರಿಯ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಮದುವೆ ವಿಚಾರವನ್ನು ನಿರ್ದೇಶಕ ಪ್ರಕಾಶ್ ರಾಜ್ ಮೆಹು ದಾಖಲೆ ಸಮೇತಾ ಬಹಿರಂಗ ಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ವಿನೋದ್ ರಾಜ್ ಅವರಿಗೆ ಮದುವೆಯಾಗಿ ಮಗನಿದ್ದಾನೆ, ಲೀಲಾವತಿ ಅವರ ಪತಿ  ಮಹಾಲಿಂಗ ಭಾಗವತರ್ ಎನ್ನುವ ಎರಡು ಶಾಕಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ನಿರ್ದೇಶಕ ಪ್ರಕಾಶ್ ರಾಜ್ ಮೆಹು ಅವರ ಈ ಪೋಸ್ಟ್ ಕಳೆದ ಕೆಲವು ದಿನಗಳಿಂದ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪ್ರಕಾಶ್ ರಾಜ್ ಬಹಿರಂಗ ಪಡಿಸಿದ ಬಳಿಕ ಹಿರಿಯ ನಟಿ ಲೀಲಾವತಿ ಅವರೇ ಪ್ರತಿಕ್ರಿಯೆ ನೀಡಿ ಮಗನ ಮದುವೆ ರಹಸ್ಯ ಬಿಚ್ಚಿಟ್ಟಿದ್ದರು. ಮಗನಿಗೆ ಮದುವೆಯಾಗಿದೆ ಎನ್ನುವ ಸತ್ಯವನ್ನು ಲೀಲಾವತಿ ಅವರೇ ಒಪ್ಪಿಕೊಂಡಿದ್ದರು. ಅಷ್ಟೆಯಲ್ಲದೇ  ಇದನ್ನು ಪ್ರಶ್ನೆ ಮಾಡಿದವರಿಗೆ ನರಕ ಪ್ರಾಪ್ತಿಯಾಗಲಿ ಎಂದಿದ್ದರು.

ಇದೀಗ ಪ್ರಕಾಶ್ ರಾಜ್ ಮೆಹು ಮತ್ತೊಂದು ಪೋಸ್ಟ್ ಶೇರ್ ಮಾಡಿದ್ದಾರೆ. ಮಗನ ಮದುವೆ ವಿಚಾರ ಒಪ್ಪಿಕೊಂಡು ನೀವು ಮತ್ತೊಂದು ಸತ್ಯವನ್ನು ಒಪ್ಪಿಕೊಳ್ಳಿ ಎಂದು ಹೇಳಿದ್ದಾರೆ. ಲೀಲಾವತಿ ಅವರ ನರಕ ಪ್ರಾಪ್ತಿ ಮಾತಿಗೆ ತಿರುಗೇಟು ನೀಡಿರುವ ಪ್ರಕಾಶ್ ರಾಜ್ ನಿಮ್ಮನ್ನು ಪ್ರಶ್ನಿಸಿದ ನನ್ನಂತ ಪಾಪಿಗೆ ನರಕ ಪ್ರಾಪ್ತಿಯಾದರೂ ಚಿಂತೆಯಿಲ್ಲ ಆದರೆ ಆ ಸತ್ಯ ಒಪ್ಪಿಕೊಳ್ಳಿ ಎಂದು ಪೋಸ್ಟ್ ಮಾಡಿದ್ದಾರೆ. 

ಪ್ರಕಾಶ್ ರಾಜ್ ಮೆಹು ಪೋಸ್ಟ್ 

'ಒಂದು ಸತ್ಯವನ್ನು ಒಪ್ಪಿಕೊಂಡದ್ದಕ್ಕೆ ಅಮ್ಮ-ಮಗನಿಗೆ ಧನ್ಯವಾದಗಳು. ಹಾಗೆ ಆ ಇನ್ನೊಂದು ಸತ್ಯವನ್ನೂ ಒಪ್ಪಿಕೊಂಡು ಧರ್ಮರಾಯನಂತೆ ನೇರವಾಗಿ ಸ್ವರ್ಗಕ್ಕೆ ನಡೆದುಕೊಂಡೇ ಹೊರಟುಬಿಡಿ ಆ ಮಹಾಲಿಂಗ ಭಾಗವತರರ ಆತ್ಮಕ್ಕೆ ಶಾಂತಿಯಾದರು ಸಿಗಲಿ. ನಿಮ್ಮನ್ನು ಪ್ರಶ್ನಿಸಿದ ನನ್ನಂತ ಪಾಪಿಗೆ ನರಕ ಪ್ರಾಪ್ತಿಯಾದರೂ ಚಿಂತೆಯಿಲ್ಲ."ಯುವರಾಜ"ನಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಹೇಳಿದ್ದಾರೆ. 

ಪ್ರಕಾಶ್ ರಾಜ್ ಮೆಹು ಆ ಸತ್ಯ ಒಪ್ಪಿಕೊಳ್ಳಿ ಎಂದು ಲೀಲಾವತಿ ಅವರಿಗೆ ಪತಿ ಯಾರೆಂದು ಒಪ್ಪಿಕೊಳ್ಳಿ ಎನ್ನುವುದು ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಈಗಾಗಲೇ ಪ್ರಕಾಶ್ ರಾಜ್ ಬಹಿರಂಗ ಪಡಿಸಿದ ಹಾಗೆ ವಿನೋದ್ ರಾಜ್ ಅವರ ತಂದೆ ಮಹಾಲಿಂಗ ಭಾಗವತರ್ ಅವರೇ ಎಂದು ಲೀಲಾವತಿ ಒಪ್ಪಿಕೊಳ್ಳುತ್ತಾರಾ ಗೊತ್ತಿಲ್ಲ. 

ಹಿರಿಯ ನಟಿ ಲೀಲಾವತಿ ಪುತ್ರನಿಗೆ ಮದುವೆಯಾಗಿ ಎಂಜಿನಿಯರ್ ಓದುತ್ತಿರುವ ಮಗನಿದ್ದಾನೆ!?, ನಿರ್ದೇಶಕನ ಪೋಸ್ಟ್ ವೈರಲ್

ಪುತ್ರನ ಮದುವೆ ಬಗ್ಗೆ ಲೀಲಾವತಿ ಹೇಳಿದ್ದೇನು?

ಯೂಟ್ಯೂಬ್ ಚಾನೆಲ್ ವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಲೀಲಾವತಿ ಮಗನ ಮದುವೆ ವಿಚಾರವನ್ನು ಬಿಚ್ಚಿಟ್ಟರು, ‘ನನ್ನ ಮಗನ ಮದುವೆ ಆಗಿದೆ. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಆದರೆ, ಸಿಂಪಲ್ ಆಗಿ ಮದುವೆ ಮಾಡಿದೆ. ನನ್ನ ಹತ್ತಿರ ದುಡ್ಡಿಲ್ಲದ ಕಾರಣ ತಿರುಪತಿ ಬೆಟ್ಟದ ಮೇಲೆ ಮಾಡಿದೆ. ಎಂತೆಂಥವರ ಮದುವೆ ಎಲ್ಲೆಲ್ಲೋ ಆಗಿದೆ. ಪ್ಯಾಲೇಸ್ ಗಳಲ್ಲಿ ಮಾಡಿದ್ದಾರೆ. ಆದರೆ, ನನಗೆ ಆ ಶಕ್ತಿ ಇರಲಿಲ್ಲ. ಅನೇಕರು ಈ ಕುರಿತು ಹೀಯಾಳಿಸಿದರು. ಹಾಗಾಗಿ ಚರ್ಚೆ ಮಾಡಲಿಲ್ಲ’ ಎಂದು ಹೇಳಿದ್ದರು.

‘ನನ್ನ ಮಗನ ಮದುವೆಗೆ 7 ಜನ ಕನ್ನಡಿಗರು ಬಂದಿದ್ದರು. ಏನ್ ಲೀಲಾವತಿ ಅವರೇ ನಿಮ್ಮ ಮಗನ ಮದುವೆಗೆ ಏಳೇ ಏಳು ಜನ ಬಂದಿದ್ದಾರೆ. ಜನ ಸಿಗಲಿಲ್ಲವಾ ಎಂದು ಅವಮಾನಿಸಿದ್ರು. ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಮೊಮ್ಮಗ ಮತ್ತು ಸೊಸೆ ಚೆನ್ನಾಗಿದ್ದಾರೆ. ಅವರಿಗೆ ಯಾವುದೇ ಕೊರತೆ ಮಾಡಿಲ್ಲ. ಅಂತರಂಗದ ಸುದ್ದಿಯನ್ನು ಈ ರೀತಿ ಕೇಳುತ್ತಾರೆ ಅಂತ ಬೇಸರವಾಗುತ್ತದೆ. ಯಾರು ಏನೇ ಹೇಳಲಿ ನನ್ನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವೆ’ ಎಂದು ಲೀಲಾವತಿ ಹೇಳಿದ್ದರು.

ವಿನೋದ್ ರಾಜ್‌ ಮದುವೆಯಲ್ಲಿ 7 ಜನ ಇದ್ರು ಅಷ್ಟೆ; ನೋವು ಕೊಡುವವರು ನರಕಕ್ಕೆ ಬೀಳ್ತಾರೆ ಎಂದ ಹಿರಿಯ ನಟಿ ಲೀಲಾವತಿ

ಪ್ರಕಾಶ್ ರಾಜ್ ಮೆಹು ಮೊದಲ ಪೋಸ್ಟ್ 

ಮೊದಲನೆಯ ವಿಷಯ: ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಅನ್ನುವುದು.ಇದು ಈ ಕೆಳಗೆ ಕೊಟ್ಟಿರುವ ಲೀಲಾವತಿಯವರ ಚನ್ನೈ ಆಸ್ತಿಯ ಪತ್ರ ತಮಿಳು ಭಾಷೆಯಲ್ಲಿದೆ ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ (ಲೀಲಾವತಿಯಮ್ಮ) ಅನ್ನುವುದು ಸ್ಪಷ್ಟವಾಗಿದೆ. 

ಎರಡನೆಯ ವಿಷಯ: ವಿನೋದ್ ರಾಜ್ ಮದುವೆಯನ್ನೇ ಆಗದೆ ತಾಯಿಯ ಸೇವೆಯಲ್ಲಿ ನಿರತರಾಗಿದ್ದಾರೆ ಅನ್ನುವವರಿಗೆ ಮಾಹಿತಿ. ಈ ಕೆಳಗಿನ ಫೋಟೋದಲ್ಲಿ ಸೋಫಾಮೇಲೆ ಕುಳಿತಿರುವವರು ವಿನೋದ್ ರಾಜ್ ಹೆಂಡತಿ ಮತ್ತು ಮಗ, ಚನ್ನೈನಲ್ಲಿದ್ದಾರೆ ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ. 

ಈ ಫ್ಯಾಮಿಲಿ ಫೋಟೋ ನನಗೆ ಸಿಕ್ಕಿ ಆರು ತಿಂಗಳ ಮೇಲಾಯ್ತು, ಆಗೇನಾದರೂ ಈ ಫೋಟೋ ಪ್ರಕಟಿಸಿದ್ದರೆ ಅವರು ಖಂಡಿತ "ಅವರು ಯಾರೋ ಅಭಿಮಾನಿಗಳು" ಅಂದು ಬಿಡುತ್ತಿದ್ದರು ಅದಕ್ಕಾಗಿ ಸೂಕ್ತ ದಾಖಲೆಗಾಗಿ ಕಾಯುತ್ತಿದ್ದೆ ಇಂದು ಗೆಳೆಯರೊಬ್ಬರು ಚನ್ನೈನಿಂದ ಈ Marks Card ಮತ್ತು ಆಸ್ತಿ ದಾಖಲೆ ಪತ್ರ ಕಳುಹಿಸಿ ಕೊಟ್ಟರು ಆದ್ದರಿಂದ ಇಂದು ಇವನ್ನು ಬಹಿರಂಗ ಪಡಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?