ಡಾ ರಾಜ್‌ ಚಿತ್ರ ಪ್ರದರ್ಶನದ ವೇಳೆ ಥಿಯೇಟರ್‌ಗೆ ಬೆಂಕಿ ಹಚ್ಚಿದ್ಯಾರು? ಡಾನ್‌ಗೆ ಚಾಡಿ ಹೇಳಿದ್ದು ಯಾರು?

Published : Feb 09, 2025, 03:03 PM ISTUpdated : Feb 09, 2025, 03:07 PM IST
ಡಾ ರಾಜ್‌ ಚಿತ್ರ ಪ್ರದರ್ಶನದ ವೇಳೆ ಥಿಯೇಟರ್‌ಗೆ ಬೆಂಕಿ ಹಚ್ಚಿದ್ಯಾರು? ಡಾನ್‌ಗೆ ಚಾಡಿ ಹೇಳಿದ್ದು ಯಾರು?

ಸಾರಾಂಶ

ಡಾ. ರಾಜ್‌ಕುಮಾರ್ ಅಭಿನಯದ "ಸಂಪತ್ತಿಗೆ ಸವಾಲ್" ಚಿತ್ರದ "ಯಾರೇ ಕೂಗಾಡಲಿ" ಹಾಡು ಡಾನ್ ಜಯರಾಜ್‌ರನ್ನು ಗುರಿಯಾಗಿಸಿ ಬರೆದಿದ್ದೆಂದು ವದಂತಿ ಹಬ್ಬಿತ್ತು. ಕೋಪಗೊಂಡ ಜಯರಾಜ್ ಕೆಲವು ಚಿತ್ರಮಂದಿರಗಳಿಗೆ ಬೆಂಕಿ ಹಚ್ಚಲು ಆದೇಶಿಸಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಘಟನೆ ಶೀಘ್ರವೇ ತಣ್ಣಗಾಯಿತು.

ಡಾ ರಾಜ್‌ಕುಮಾರ್ ಹಾಗೂ ಡಾನ್ ಜಯರಾಜ್ ಈ ಎರಡೂ ಹೆಸರನ್ನು ಕನ್ನಡಿಗರು ಎಂದೂ ಮರೆಯಲಾಗದು. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ್ದ ಮೇರು ನಟ ಡಾ ರಾಜ್‌ ಅವರು ಕನ್ನಡಿಗರ ಆರಾಧ್ಯ ದೈವ ಆದವರು. ಸಿನಿಪ್ರೇಕ್ಷಕರಿಂದ ಅಣ್ಣಾವ್ರು ಎಂದು ಕರೆಸಿಕೊಂಡಿದ್ದ ಡಾ ರಾಜ್‌ಕುಮಾರ್ ಅವರು ಇಂದಿಗೂ ಕೂಡ ಕರ್ನಾಟಕದ ಜನರ ಮನಸ್ಸಿನಿಂದ ಮರೆಯಾಗದವರು. ತಮ್ಮ ಸಿನಿಮಾಗಳಿಂದ, ಮಾಡಿದ ಪಾತ್ರಗಳ ಘನತೆಯಿಂದ ಇಂದಿಗೂ ಕೂಡ ಕನ್ನಡ  ಸಿನಿಪ್ರೇಕ್ಷಕರು ಡಾ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತಾರೆ. 

ಹಾಗೇ, ಡಾನ್ ಜಯರಾಜ್ ಕೂಡ ಒಂದು ಕಾಲದಲ್ಲಿ ಕರ್ನಾಟಕದ ಭೂಗತ ಲೋಕವನ್ನು ಅಕ್ಷರಶಃ ಆಳಿದ್ದವರು. ಭೂಗತ ಲೋಕದ ಪಾತಕಿ, ರೌಡಿ ಹಾಗೂ ಇನ್ನು ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಡಾನ್ ಜಯರಾಜ್ ಅವರು ತಮ್ಮ ಸಮಯದಲ್ಲಿ ತುಂಬಾ ಹವಾ ಮೆಂಟೇನ್ ಮಾಡಿದ್ದವರು. ಆದರೆ ಈ ಇಬ್ಬರಿಗೂ ಸಂಬಂಧಪಟ್ಟ ಘಟನೆಯೊಂದು ಅಂದು ಸದ್ದು ಮಾಡಿತ್ತು ಎಂದರೆ ನೀವು ನಂಬಲೇಬೇಕು. ಹೌದು, ಡಾನ್ ಜಯರಾಜ್‌ ಡಾ ರಾಜ್‌ ವಿರುದ್ಧ ಸಿಟ್ಟಿಗೆದ್ದಿದ್ದರು ಎನ್ನಲಾಗಿದೆ. 

ಅಣ್ಣಾವ್ರ 'ಭಕ್ತ ಕುಂಬಾರ' ಶೂಟಿಂಗ್ ವೇಳೆ ಮನಸ್ತಾಪ ಆಗಿದ್ದು ನಿಜವೇ? ಇಲ್ಲಿದೆ ಸತ್ಯ ಸಂಗತಿ!

ಅದು ಡಾ ರಾಜ್‌ಕುಮಾರ್ ಹಾಗೂ ಮಂಜುಳಾ ನಟನೆಯ 'ಸಂಪತ್ತಿಗೆ ಸವಾಲ್' ಚಿತ್ರ ತೆರೆಗೆ ಬಂದ ಸಮಯ. ಅದರಲ್ಲಿ ಯಾರೇ ಕೂಗಾಡಲಿ ಎಂಬ ಹಾಡು ಇತ್ತು, ಅದು ತುಂಬಾ ಜನಪ್ರಿಯವಾಗಿತ್ತು ಕೂಡ. ಆ ಹಾಡನ್ನು ಸ್ವತಃ ಡಾ ರಾಜ್‌ಕುಮರ್ ಅವರೇ ಹಾಡಿದ್ದರು. ಆದರೆ ಆ ಹಾಡನ್ನು ನಿಮ್ಮ ಸಲುವಾಗಿಯೇ ಬರೆಸಿ ಡಾ ರಾಜ್ ಅವರಿಂದ ಹಾಡಿಸಲಾಗಿದೆ ಎಂದು ಡಾನ್ ಜಯರಾಜ್‌ಗೆ ಯಾರೋ ಕಿವಿ ಚುಚ್ಚಿದ್ದಾರಂತೆ. ಅದರಿಂದ ಅವರು ಕೋಪಗೊಂಡಿದ್ದರು. 

ಹೌದು, ಯಾರೋ ಸಿನಿಮಾರಂಗದವರೇ ಹೋಗಿ ಡಾನ್ ಜಯರಾಜ್‌ ಅವರ ಬಳಿ ಹಾಗೆ ಹೇಳಿದ್ದರಂತೆ. ಅಂದು ಕರ್ನಾಟಕದಲ್ಲಿ ಭೂಗತ ಲೋಕದಲ್ಲಿ ತಮ್ಮದೇ ಹವಾ ಸೃಷ್ಟಿಸಿಕೊಂಡಿದ್ದವರು ಡಾನ್ ಜಯರಾಜ್. ಅಂಥವರ ಬಳಿ ಹೋಗಿ ಯಾರೋ 'ನಿಮ್ಮ ಸಲುವಾಗಿಯೇ ಆ ಹಾಡನ್ನು ಬರೆಯಿಸಲಾಗಿದೆ. 'ಯಾರೇ ಕೂಗಾಡಿದ್ರೂ , ಅಂದ್ರೆ ನೀವು ಕೂಗಾಡಿದ್ರೂ ಯಾರಿಗೂ ಭಯ ಇಲ್ವಂತೆ' ಎಂದಿದ್ದಾರೆ. ಅದರಿಂದ ಕೋಪಗೊಂಡು ರೊಚ್ಚಿಗೆದ್ದಿದ್ದಾರೆ ಡಾನ್ ಜಯರಾಜ್. 

ಹಂಸಲೇಖಾ ಮನೆಯಲ್ಲಿ ಯಾರ ಫೋಟೋ ಇದೆ? ಅವ್ರ ಲೈಫಲ್ಲಿ ಮುಖ್ಯವಾದ ಮೂರು 'ರತ್ನ'ಗಳು ಇವ್ರಂತೆ!

ಅಷ್ಟಾಗಿದ್ದೇ ತಡ, ಡಾನ್ ಜಯರಾಜ್ ಕಡೆಯವರು ಡಾ ರಾಜ್‌ಕುಮಾರ್ ಅಭಿನಯದ 'ಸಂಪತ್ತಿಗೆ ಸವಾಲ್' ಚಿತ್ರವು ಪ್ರದರ್ಶನ ಕಾಣುತ್ತಿದ್ದ ಕೆಲವು ಥಿಯೇಟರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಭಯದಿಂದ ಕೆಲವು ಸಿನಿಮಾಗಳ ಶೋ ನಿಲ್ಲಿಸಲಾಗಿದೆ. ಕೆಲವು ಥಿಯೇಟರ್‌ಗಳು ಆವತ್ತು ಬಾಗಿಲು ಹಾಕಿಕೊಂಡಿವೆ. ಆದ್ರೆ, ಅದು ಹೇಗೋ ಸುದ್ದಿ ತಣ್ಣಗಾಗಿದೆ, ಘಟನೆ ಅಲ್ಲಿಗೇ ನಿಂತಿದೆ. ಆಗ ಈ ಘಟನೆ ಕರ್ನಾಟಕದ ತುಂಬಾ ಬಹಳಷ್ಟು ಸೌಂಡ್ ಮಾಡಿತ್ತು. ಈಗಲೂ ಕೂಡ ಅದನ್ನು ನೆನಪಿಸಿಕೊಂಡು ಕೆಲವು ಹೇಳುತ್ತಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್
ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!