ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು 'ಜಾಕಿ' ಸಿನಿಮಾ ರೀ-ರಿಲೀಸ್

By Shriram Bhat  |  First Published Mar 15, 2024, 2:50 PM IST

ರಗಡ್ ಹೈದನಾಗಿ 'ಪವರ್ ಸ್ಟಾರ್' ರಿ-ಎಂಟ್ರಿ ಕೊಡಲಿರುವ ಜಾಕಿ ಸಿನಿಮಾ, ಬರೋಬ್ಬರಿ 90ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಪವರ್ ಸ್ಟಾರ್ ಪತ್ನಿ ಅಶ್ವಿನ್ ಪುನೀತ್ ರಾಜ್‌ಕುಮಾರ್ ನರ್ತಕಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ.


ಪವರ್ ಸ್ಟಾರ್, ದಿವಂಗತ ನಟ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅವರ ನಟನೆಯ 'ಜಾಕಿ' ಚಿತ್ರವು 'ರೀ-ರಿಲೀಸ್' ಆಗಲಿದೆ. ಮಾರ್ಚ್ 17 ಪುನೀತ್ ಹುಟ್ಟುಹಬ್ಬ. ಈ ಸಂಬಂಧ, ಪುನೀತ್ ರಾಜ್‌ಕುಮಾರ್ ಅಭಿನಯದ 'ಜಾಕಿ' ಮರು ಬಿಡುಗಡೆ ಕಾಣಲಿದೆ. ಪುನೀತ್ ರಾಜ್‌ಕುಮಾರ್ ನಾಯಕತ್ವದ ಜಾಕಿ ಸಿನಿಮಾ 14 ವರ್ಷಗಳ ಹಿಂದೆ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಅಂದು ಈ ಚಿತ್ರವು ಯಶಸ್ವಯಾಗಿ 100 ದಿನ ಪೂರೈಸಿತ್ತು. 

ಇದೀಗ, ನಮ್ಮನ್ನಗಲಿರುವ ಅಪ್ಪು ನೆನಪಿನಲ್ಲೇ 'ಜಾಕಿ' ರಿ-ರಿಲೀಸ್ ಆಗಲಿದ್ದು, ಇದು '4K ವರ್ಷನ್'ನಲ್ಲಿ ಬರಲಿದೆ. ಜಾಕಿ ಚಿತ್ರಕ್ಕೆ ಹೊಸ ಟಚ್ ಕೊಟ್ಟಿದ್ದು, ಜಾನಕಿರಾಮನಾಗಿ ಅಂದು ಮಿಂಚಿದ್ದ ಪುನೀತ್ ಈಗ ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ. ಜಾಕಿ ಚಿತ್ರವು ಮಾನವ ಕಳ್ಳಸಾಗಣೆಯ ಕಥೆ ಹೊಂದಿದೆ. ಅಚ್ಚರಿ ಎಂಬಂತೆ ಜಾಕಿ ಚಿತ್ರದ ಮರುಬಿಡುಗಡೆಗೂ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಬೆಂಗಳೂರಿನಲ್ಲಿ ಮೊದಲ ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ. 

Tap to resize

Latest Videos

ಪ್ರಭಾಸ್‌ಗೆ 'ಡಾರ್ಲಿಂಗ್' ಅಂತ ಕರೆಯೋ ಸೀಕ್ರೆಟ್ ಬಿಚ್ಚಿಟ್ರು ಮಲಯಾಳಂ ನಟ ಪೃಥ್ವಿರಾಜ್!

ರಗಡ್ ಹೈದನಾಗಿ 'ಪವರ್ ಸ್ಟಾರ್' ರಿ-ಎಂಟ್ರಿ ಕೊಡಲಿರುವ ಜಾಕಿ ಸಿನಿಮಾ, ಬರೋಬ್ಬರಿ 90ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಪವರ್ ಸ್ಟಾರ್ ಪತ್ನಿ ಅಶ್ವಿನ್ ಪುನೀತ್ ರಾಜ್‌ಕುಮಾರ್ ನರ್ತಕಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ. ಅಭಿಮಾನಿಗಳ ಜೊತೆ ಕುಳಿತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಜಾಕಿ ಚಿತ್ರವನ್ನು ನೋಡಿದರು. ರೀ-ರಿಲೀಸ್ ಬಗ್ಗೆ ತಮ್ಮ ಸಂತಸವನ್ನು ಕೂಡ ವ್ಯಕ್ತಪಡಿಸಿದರು. 

ಬಾಲಿವುಡ್‌ ಆಫರ್ ಬಂದಿದ್ದು, ನಾನು ರಿಜೆಕ್ಟ್ ಮಾಡಿದ್ದೂ ನಿಜ; ನಟ ಮಹೇಶ್ ಬಾಬು ಶಾಕಿಂಗ್ ಹೇಳಿಕೆ!

ಅಂದಹಾಗೆ, ಜಾಕಿ ಚಿತ್ರವನ್ನು ದುನಿಯಾ ಸೂರಿ ನಿರ್ದೇಶನ ಮಾಡಿದ್ದರು. ಜಾಕಿ ಚಿತ್ರದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮಲಯಾಳಂ ನಟಿ ಭಾವನಾ ನಾಯಕಿಯಾಗಿದ್ದರು. ಆ ಬಳಿಕ ಭಾವನಾರನ್ನು ಸ್ಯಾಂಡಲ್‌ವುಡ್ ಉದ್ಯಮ ಹಾಗೂ ಸಿನಿಪ್ರೇಕ್ಷಕರು 'ಜಾಕಿ ಭಾವನಾ' ಎಂದೇ ಕರೆಯುತ್ತಾರೆ. ಒಟ್ಟಿನಲ್ಲಿ , 14 ವರ್ಷಗಳ ಬಳಿಕ, ಇಹಲೋಕ ತ್ಯಜಿಸಿರುವ ನಟ ಪುನೀತ್ ಈಗ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಸಿನಿಪ್ರೇಕ್ಷಕರಿಗೆ ಮತ್ತೊಮ್ಮೆ ದರ್ಶನ ನೀಡಲಿದ್ದಾರೆ.

ಸ್ಕೂಲಿನಲ್ಲಿ ತುಂಬಾ ಕುಳ್ಳಗಿದ್ದೆ, ಯಾರೊಂದಿಗೂ ಮಾತನಾಡುತ್ತಿರಲಿಲ್ಲ; ನಟ ವಿಜಯ್ ಸೇತುಪತಿ

click me!