ಅಪ್ಪು, ವೆರ್ ಈಸ್ ಉಪ್ಪು..? ಸೃಜನ್‌ ಪ್ರಶ್ನೆಗೆ ತಬ್ಬಿಬ್ಬಾದ ಪುನೀತ್: ತಗ್ಲಾಕ್ಕೊಂಡ ಪವರ್ ಸ್ಟಾರ್!

Published : Feb 10, 2025, 11:57 AM ISTUpdated : Feb 10, 2025, 12:07 PM IST
ಅಪ್ಪು, ವೆರ್ ಈಸ್ ಉಪ್ಪು..? ಸೃಜನ್‌ ಪ್ರಶ್ನೆಗೆ ತಬ್ಬಿಬ್ಬಾದ ಪುನೀತ್: ತಗ್ಲಾಕ್ಕೊಂಡ ಪವರ್ ಸ್ಟಾರ್!

ಸಾರಾಂಶ

ಪುನೀತ್ ಮತ್ತು ಸೃಜನ್ ಚಿತ್ರಾನ್ನ ಮಾಡುವ ಬಗೆ ಕುರಿತು ತಮಾಷೆಯ ಮಾತುಕತೆ ವೈರಲ್ ಆಗಿದೆ. ಉಪ್ಪು ಹಾಕುವುದನ್ನು ಮರೆತ ಪುನೀತ್, ತಮ್ಮ ತಪ್ಪನ್ನು ಮುಗ್ಧತೆಯಿಂದ ನಿಭಾಯಿಸಿದರು. ಈ ಹಳೆಯ ವಿಡಿಯೋ ಅಪ್ಪುವಿನ ಸರಳತೆ, ಮುಗ್ಧತೆಯನ್ನು ಮತ್ತೊಮ್ಮೆ ನೆನಪಿಸುತ್ತಿದೆ. ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟ ಪುನೀತ್ ರಾಜ್‌ಕುಮಾರ್‌ (Puneeth Rajkumar) ಹಾಗೂ ನಿರೂಪಕ ಸೃಜನ್ ಲೋಕೇಶ್ (Srujan Lokesh) ಮಾತುಕತೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ. ಅದರಲ್ಲಿ ನಟ ಪುನೀತ್ ಅವರಿಗೆ ಸೃಜನ್ ಅವರು ಏನೋ ಒಂದು ಕೇಳಿದ್ದಾರೆ. ಅದಕ್ಕೆ ಪುನೀತ್‌ ತಮಗೆ ಗೊತ್ತಿದೆ ಅಂತ ಹೇಳಿ, ಏನೇನೋ ಹೇಳಿ ತಗಲಾಕ್ಕೊಂಡಿದ್ದಾರೆ. ಎಲ್ಲವೂ ತಮಾಷೆಗಾಗಿಯೇ ನಡೆದಿದ್ದು. ಆದರೆ, ತಪ್ಪು ಹೇಳಿದ್ದರೂ ಕೂಡ ಅಪ್ಪು ಅದನ್ನು ಮ್ಯಾನೇಜ್‌ ಮಾಡೋಕೆ ನೋಡಿ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದ್ದಾರೆ. ಹಾಗಿದ್ದರೆ ಅದೇನು ಅಂತ ನೋಡಿ..  

ಚಿತ್ರಾನ್ನ ಮಾಡೋಕೆ ಬರುತ್ತಾ? ಹೂಂ.. ಅಂತ ಹೇಳಿದ ಪುನೀತ್ ಅದಕ್ಕೆ ಏನೇನ್ ಹಾಕ್ತಾರೆ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ರಾತ್ರಿ ಮಿಕ್ಕಿರೋ ಅನ್ನ, ಒಂದು ಬಾಂಡ್ಲಿಲಿ ಸ್ವಲ್ಪ ಎಣ್ಣೆ ಹಾಕಿ, ಕತ್ತರಿಸಿರೋ ಈರುಳ್ಳಿ, ಟೊಮ್ಯಾಟೋ, ಸ್ವಲ್ಪ ಮಸಾಲೆ ಪುಡಿ ಅಂತ ಹೇಳಿ, ಅಲ್ಲ ಅಲ್ಲ, ಅರಿಶಿನಪುಡಿ, ಒಗ್ಗರಣೆ ಹಾಕಿ, ಅದಕ್ಕೆ ಮಿಕ್ಕಿರೋ ಅನ್ನ ಹಾಕಿ ಲಾಸ್ಟಲ್ಲಿ ಒಂದು ಲಿಂಬೆ ಹಣ್ಣು ಹಾಕಿದ್ರೆ ಫಿನಿಶ್ ಅಂದಿದ್ದಾರೆ ಅಪ್ಪು.. ಅದಕ್ಕೆ ಸೃಜನ್ ಲೋಕೇಸ್ ಅವರು 'ಉಪ್ಪು...?' ಎಂದು ಕೇಳಿದಾಗ ಅಪ್ಪು ತಾವು ಹೇಳೇ ಇಲ್ಲ ಅಂತ ಶಾಕ್ ಆಗಿದ್ದಾರೆ. 

ಮೂಗಿನ ಬಗ್ಗೆ ಪುನೀತ್ ಹೇಳಿದ್ದೇನು? ಅಶ್ವಿನಿ ಎದುರಿಗೇ ಅನುಶ್ರೀ ಕಣ್ಣೀರು ಹಾಕಿದ್ದೇಕೆ?

ಸೃಜನ್ ಆಗ 'ಅಪ್ಪು, ವೆರ್ ಈಸ್ ಉಪ್ಪು..?' ಎಂದು ಹೇಳುವ ಮೂಲಕ ಅಲ್ಲಿದ್ದ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದ್ದಾರೆ. ಆಗ ಪುನೀತ್‌ ಅವರಿಗೆ ಸ್ವಲ್ಪ ಮುಜುಗರವಾಗಿ 'ಎಲ್ಲಾ ಆದ್ಮೇಲೆ ಬೇಕಂದ್ರೆ ಹಾಕಿದ್ರಾಯ್ತು ಅಂತ ಹೇಳೊ ಮೂಲಕ ತಮಾಷೆಯಾಗಿ ತಮ್ಮ ತಪ್ಪನ್ನು ಮ್ಯಾನೇಜ್ ಮಾಡೋಕೆ ನೋಡಿದಾರೆ. ಒಟ್ಟಿನಲ್ಲಿ, ಚಿತ್ರಾನ್ನ ಮಾಡೊದು ಅಲ್ಪಸ್ವಲ್ಪ ಗೊತ್ತು ಎಂದು ಪುನೀತ್ ಪ್ರದರ್ಶನ ಮಾಡಿದ್ದಾರೆ. ಆದರೆ, ಇಬ್ಬರೂ, ಸೃಜನ್-ಪುನೀತ್ ಸೇರಿ ಕಡಲೇಬೇಳೆ, ಕಡ್ಲೇಕಾಯಿ ಹಾಕೋದನ್ನ ಹೇಳಲು ಮರ್ತಿದ್ದಾರೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. 

ಚಿತ್ರಾನ್ನ ಮಾಡೋದು ಅಪ್ಪುಗೆ ಗೊತ್ತಿದೆಯೋ ಇಲ್ವೋ, ಆದ್ರೆ ಮುಗ್ಧ ನಗು ಹೊರಸೂಸುವ ಮೂಲಕ ತಾವೊಬ್ಬರು ಮುಗ್ಧ ಮನಸ್ಸಿನ ಜೀವಿ ಎಂಬುದನ್ನು ನಟ ಪುನೀತ್‌ ರಾಜ್‌ಕುಮಾರ್ ಅವರು ಜಗತ್ತಿಗೇ ತೋರಿಸಿದ್ದಾರೆ.ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವ ಎಲ್ಲ ವಿಡಿಯೋಗಳೂ ಕನಿಷ್ಠ ಮೂರು ವರ್ಷಕ್ಕಿಂತ ಮೊದಲಿನವು ಎಂಬುದು ಎಲ್ಲರಿಗೂ ಅರ್ಥವಾಗುತ್ತವೆ. ಈ ಕಾರಣಕ್ಕೆ ಇಂದು ನಮ್ಮೊಂದಿಗಿಲ್ಲದ ಅಪ್ಪು ಬಗ್ಗೆ ವಿಭಿನ್ನ ಕಾಮೆಂಟ್‌ಗಳು ಹರಿದು ಬರುತ್ತವೆ.

ನಟ ದರ್ಶನ್ ಭೇಟಿಯಾಗ್ತಾರೆ 'ಬಿಗ್ ಬಾಸ್' ರಜತ್ ಕಿಶನ್, ಎಲ್ಲಿ.. ಯಾವಾಗ.. ಯಾಕೆ..? 

ಡಾ ರಾಜ್‌ಕುಮಾರ್ ಅಂಥ ಮೇರು ನಟರ ಮಗನಾದರೂ, ಪುನೀತ್ ಅವರು ತುಂಬಾ ಸರಳತೆಯನ್ನು ಮೈಗೂಡಿಸಿಕೊಂಡಿದ್ದರು. ಸಂದರ್ಶನಗಳಲ್ಲಿ ಕೂಡ ಅವರು ಯಾವತ್ತೂ ಅಹಂಕಾರ ಪ್ರದರ್ಶನ ಮಾಡುತ್ತಿರಲಿಲ್ಲ. 40ಕ್ಕಿಂತ ಹೆಚ್ಚು ವಯಸ್ಸಾದ ಮೇಲೆ ಕೂಡ ಆ ಮುಗ್ಧತೆ ಕಳೆದುಕೊಂಡಿರಲಿಲ್ಲ. ಮುಗುವಿನಂಥ ಮನಸ್ಸು ಅವರನ್ನು ಯಾವ ವಯಸ್ಸಿನಲ್ಲೂ ಬಿಟ್ಟು ಹೋಗಿರಲೇ ಇಲ್ಲ. ಅದೇ ಅವರನ್ನು ಇಂದಿಗೂ ಕನ್ನಡದ ಸಿನಿಪ್ರೇಕ್ಷಕರು ಇಷ್ಟಪಡಲು ಮುಖ್ಯ ಕಾರಣ ಎನ್ನಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ