ಅಣ್ಣಾವ್ರ ಕುಟುಂಬಕ್ಕೆ ಆರೋಗ್ಯದ ವಿಚಾರದಲ್ಲಿ ಏಟ್ ಮೇಲೆ ಏಟು ಬೀಳುತ್ತಿದೆ; ನೋವು ಹಂಚಿಕೊಂಡ ಪೂರ್ಣಿಮಾ ರಾಮ್‌ಕುಮಾರ್

By Vaishnavi Chandrashekar  |  First Published Jan 10, 2025, 10:55 AM IST

ಮನೆಯಲ್ಲಿ ಮೂವರನ್ನು ಕಳೆದುಕೊಂಡ ಮೇಲೆ ಹೇಗೆ ಮನಸ್ಸು ಬದಲಾಗಿತ್ತು. ತಂದೆ ಕಳೆದುಕೊಂಡ ನೋವಿನಿಂದ ಹೊರ ಬರಲು ಪಾರ್ವತಮ್ಮ ಧೈರ್ಯ ಕೊಟ್ಟಿದ್ದು ಹೀಗೆ..... 


ಡಾ ರಾಜ್‌ಕುಮಾರ್‌ ಮತ್ತು ಡಾ ಪಾರ್ವತಮ್ಮರವರು ಕನ್ನಡ ಚಿತ್ರರಂಗದ ದೊಡ್ಡ ಪಿಲ್ಲರ್‌ಗಳು. ಅವರ ಅಗಲಿಕೆಯ ನೋವು ಕುಟುಂಬಸ್ಥರಿಗೆ ಮಾತ್ರವಲ್ಲ ಅಭಿಮಾನಿಗಳಿಗೂ ಇದೆ. ನೋವಿನಿಂದ ಹೊರ ಬಂದು ದೊಡ್ಡ ಮನೆ ಮಕ್ಕಳು ಬೆಳೆಯುತ್ತಿರುವುದನ್ನು ನೋಡುತ್ತಿರುವಾಗಲೇ ಅಪ್ಪು ಅಗಲಿದರು. ನೂರಾರೂ ಸಾವಿರಾರು ಜನರಿಗೆ ಸಹಾಯ ಮಾಡಿರುವ ಅಪ್ಪು ವಿಚಾರದಲ್ಲಿ ದೇವರು ಯಾಕೆ ಇಷ್ಟೋಂದು ಕ್ರೂರಿಯಾದ ಅನ್ನೋ ಪ್ರಶ್ನೆ ಕೂಡ ಹುಟ್ಟಿಕೊಳ್ಳುತ್ತದೆ. ಕುಟುಂಬಸ್ಥರು ಅಗಲಿದಾಗ ಎಷ್ಟು ನೋವಾಗುತ್ತದೆ ಅದರಿಂದ ಹೊರ ಬಂದಿದ್ದು ಹೇಗೆ ಎಂದು ಪೂರ್ಣಿಮಾ ರಾಜ್‌ಕುಮಾರ್ ಹಂಚಿಕೊಂಡಿದ್ದಾರೆ. 

'ತಂದೆ ತೀರಿಕೊಂಡಾಗ ನಾವು ನಾರ್ಮಲ್ ಆಗೋಕೆ ತುಂಬಾ ಸಮಯ ಬೇಕಿತ್ತು. ಅವರು ಇಲ್ಲ ಅನ್ನೋದು ನಮ್ಮ ತಲೆಗೆ ಬರುತ್ತಿರಲಿಲ್ಲ, ರೂಮಿಗೆ ಹೋಗಿ ನೋಡೋದು ಮಾಡುತ್ತಿದ್ವಿ. ಸಮಯ ಕಳೆಯುತ್ತಿದ್ದಂತೆ ಭಯ ಆಗಲು ಶುರುವಾಗಿತ್ತು. ಅಮ್ಮ ಒಬ್ಬರೇ ಬೇರೆ ರೀತಿಯಲ್ಲಿ ಯೋಚನೆ ಮಾಡುತ್ತಿದ್ದರು. ಅಮ್ಮ ಅಳುವುದು ಏನೂ ಮಾಡಲಿಲ್ಲ. ಮನೆಯಲ್ಲಿ ನಾವು ನಾರ್ಮಲ್ ಆಗಿ ಇರಬೇಕು ಶೂಟಿಂಗ್ ಹೋಗಬೇಕು ಎಂದು ಅಮ್ಮ ಹೇಳುತ್ತಿದ್ದರು. ಅದಾದ ಮೇಲೆ ಬೇರೆ ಯಾವ ನೋವು ಬಂದರೂ ಕಷ್ಟ ಅನಿಸಲಿಲ್ಲ. ತಾಯಿ ಆರೋಗ್ಯದ ವಿಚಾರ ಗೊತ್ತಾದ ದಿನ ನಾವು ಬೇಸರದಲ್ಲಿ ಇದ್ವಿ ಆದರೆ ಅವರು ಇರುತ್ತಿದ್ದ ರೀತಿ ನೋಡಿ ಅಯ್ಯೋ ಅವರು ಖುಷಿಯಾಗಿದ್ದಾರೆ ಚೆನ್ನಾಗಿದ್ದಾರೆ ನಾವು ಯಾಕೆ ಗಾಬರಿ ಮಾಡಿಕೊಳ್ಳಬೇಕು ಅಂತ ಸುಮ್ಮನಿರುತ್ತಿದ್ದೆ' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಪೂರ್ಣಿಮಾ ಮಾತನಾಡಿದ್ದಾರೆ.

Tap to resize

Latest Videos

 

ಯಾಕೆ ರಾಜ್‌ಕುಮಾರ್ ಬ್ಯಾನರ್‌ನಲ್ಲಿ ಪತಿ ರಾಮ್‌ಕುಮಾರ್ ಸಿನಿಮಾ ಮಾಡಲಿಲ್ಲ ಅಂತ ಕೊನೆಗೂ ಸತ್ಯ ಬಿಚ್ಚಿಟ್ಟ ಪೂರ್ಣಿಮಾ!

'ಮನೆಯಲ್ಲಿ ಏನೇ ಆದರೂ ಮೊದಲು ಗಾಬರಿ ಆಗುವುದು ಅಪ್ಪು ಮತ್ತು ನಾನು. ಅಳ್ಕೊಂಡು ನಾನು ಸುಮ್ಮನಾಗುತ್ತಿದ್ದರೆ ಆದರೆ ಅಪ್ಪು ಮಾತ್ರ ಸುಮ್ಮನೆ ಇರುತ್ತಿರಲಿಲ್ಲ. ತಾಯಿ ಥೆರಪಿ ನಡೆಯುವ ಸಮಯದಲ್ಲಿ ನಾವೆಲ್ಲರೂ ಒಟ್ಟಿಗೆ ಇದ್ವೀ..ಎಂದೂ ಅವರನ್ನು ಒಂಟಿಯಾಗಿ ಬಿಡುತ್ತಿರಲಿಲ್ಲ. ಅಮ್ಮ ತುಂಬಾ ಕಷ್ಟ ಪಟ್ಟರು ಏಕೆಂದರೆ ಗೊತ್ತಾದಾಗ 3ನೇ ಸ್ಟೇಜ್‌ನಲ್ಲಿ ಇತ್ತು. ಆಗ ಅಮ್ಮ ಡಯಾಬಿಟಿಕ್ ಆಗಿದ್ದರು. ರಾಘಣ್ಣ ಪ್ರತಿ ದಿನವೂ ಜೊತೆ ಕರೆದುಕೊಂಡು ಹೋಗುತ್ತಿದ್ದರು ಚೆನ್ನಾಗಿ ನೋಡಿಕೊಂಡ. ಚಿಕಿತ್ಸೆ ನಂತರ ಸುಮಾರು 6 ವರ್ಷಗಳ ಕಾಲ ಅಮ್ಮ ಚೆನ್ನಾಗಿದ್ದು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ಅಮ್ಮ ತೀರಿಕೊಂಡ ಮೇಲೆ ಅವರನ್ನು ನೆನಪಿಸಿಕೊಂಡು ಸದಾ ಮಾತನಾಡುತ್ತಿದೆ. ಆಗ ಅಪ್ಪು ಧೈರ್ಯ ಕೊಟ್ಟಿದ್ದು...ಈ ರೀತಿ ಯೋಚನೆ ಮಾಡಬೇಡ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಅಂತ' ಎಂದು ಪೂರ್ಣಿಮಾ ಹೇಳಿದ್ದಾರೆ.

ನಮ್ಮನ್ನು ಯಾವ ಜಾಗದಲ್ಲಿ ಇಟ್ಟಿರುತ್ತಾರೆ ಅನ್ನೋದು ಮುಖ್ಯ; ಪತಿ ರಾಮ್‌ಕುಮಾರ್‌ ಬಗ್ಗೆ ಅಣ್ಣಾವ್ರ ಮಗಳ ಮಾತು ವೈರಲ್

'ಅಪ್ಪು ತೀರಿಕೊಂಡಾಗ ಮತ್ತೆ ನನ್ನ ಮನಸ್ಸು ಆ ರೀತಿ ಯೋಚನೆ ಮಾಡಲು ಶುರು ಮಾಡಿತ್ತು ಆಗ ಅವನು ಹೇಳಿದ ಮಾತುಗಳನ್ನು ನೆನಪಿಸಿಕೊಂಡೆ. ಅಪ್ಪ ಹೋದ ಮೇಲೆ ನಮಗೆ ಇದಕ್ಕಿಂತ ಹೆಚ್ಚು ನೋವು ಇನ್ನು ಏನು ಬರುತ್ತೆ? ಅಷ್ಟು ದೊಡ್ಡ ನೋವಿನಿಂದ ನಾವು ಹೊರ ಬಂದಿದ್ದೀವಿ ಅಂದರೆ ಇದ್ದಕ್ಕಿಂತ ಮತ್ತೊಂದು ನೋವು ಏನೂ ಇಲ್ಲ. ಮನೆಯಲ್ಲಿ ಇರುವ ಪ್ರತಿಯೊಬ್ಬರು ಅಪ್ಪುನ ಅಷ್ಟು ಚೆನ್ನಾಗಿ ನೋಡಿಕೊಂಡಿದ್ದೀವಿ ಅತಿ ಚಿಕ್ಕ ವಯಸ್ಸಿನ ವ್ಯಕ್ತಿ ಅವನು' ಎಂದಿದ್ದಾರೆ ಪೂರ್ಣಿಮಾ. 

ರಾಮ್‌ಕುಮಾರ್ ಸರ್‌ ತಂದೆ ಪಾತ್ರಕ್ಕಾದರೂ ಕಮ್‌ಬ್ಯಾಕ್ ಮಾಡಲೇಬೇಕು; ನೆಟ್ಟಿಗರಿಂದ ಶುರುವಾಯ್ತು ಡಿಮ್ಯಾಂಡ್!

click me!