ಯಾಕೋ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸದ ಯಶ್ ಅವ್ರಿಗೆ ಏನೋ ಗಿಫ್ಟ್ ಕೊಟ್ಟಿದ್ದಾರೆ!

Published : Jan 09, 2025, 03:36 PM ISTUpdated : Jan 09, 2025, 04:11 PM IST
ಯಾಕೋ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸದ ಯಶ್ ಅವ್ರಿಗೆ ಏನೋ ಗಿಫ್ಟ್ ಕೊಟ್ಟಿದ್ದಾರೆ!

ಸಾರಾಂಶ

ಯಶ್​ ತಮ್ಮ 38ನೇ ಹುಟ್ಟುಹಬ್ಬವನ್ನು ಗೋವಾದಲ್ಲಿ ಆಚರಿಸಿಕೊಂಡರು. ಅಭಿಮಾನಿಗಳಿಗೆ ಉಡುಗೊರೆಯಾಗಿ 'ಟಾಕ್ಸಿಕ್' ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಡ್ರಗ್ ಮಾಫಿಯಾ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಯಶ್ ಡ್ರಗ್ ಡಾನ್ ಆಗಿ ಕಾಣಿಸಿಕೊಂಡಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡಿದೆ.

ರಾಕಿಂಗ್ ಸ್ಟಾರ್ ಯಶ್ (Rocking Star Yash) ಬರ್ತ್​ಡೇ ಸಂಭ್ರಮದಲ್ಲಿದ್ದಾರೆ. ಈ ಸಾರಿ ಫ್ಯಾನ್ಸ್​ ಜೊತೆ ಸೆಲೆಬ್ರೇಷನ್​ಗೆ ಬ್ರೇಕ್ ಹಾಕಿರೋ ಯಶ್ ಗೋವಾದಲ್ಲಿ ಟಾಕ್ಸಿಕ್ ಟೀಂ ಮತ್ತು ಫ್ಯಾಮಿಲಿ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆದ್ರೆ ಫ್ಯಾನ್ಸ್​ಗೂ ರಾಕಿ ಮೋಸ ಮಾಡಿಲ್ಲ. ಟಾಕ್ಸಿಕ್ ಸಿನಿಮಾದ ಟೀಸರ್ ನ ಫ್ಯಾನ್ಸ್​ಗೆ ಗಿಫ್ಟ್​ ಆಗಿ ಕೊಟ್ಟಿದ್ದಾರೆ. ಯಶ್ ಟಾಕ್ಸಿಕ್ ಝಲಕ್ ಹೇಗಿದೆ..? ಟೀಸರ್ ಮೂಲಕ ರಾಕಿ ಕೊಟ್ಟಿರೋ ಹಿಂಟ್ ಏನು..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.

ಇದು ಯಶ್ ಅಭಿಮಾನಿಗಳ ಎರಡುವರೆ ವರ್ಷದ ಕಾಯುವಿಕೆ.. ಕೋಟ್ಯಾನುಕೋಟಿ ಅಭಿಮಾನಿಗಳು ಈ ಒಂದು ದಿನಕ್ಕಾಗಿ ಜಪ ತಪ ಎಲ್ಲ ಮಾಡಿದ್ರು. ಕೆಜಿಎಫ್-2 ರಿಲೀಸ್ ಬಳಿಕ ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಯಶ್​ ಟಾಕ್ಸಿಕ್ ಸಿನಿಮಾ ಅನೌನ್ಸ್ ಮಾಡಿದ್ರು. ಈಗ ಟಾಕ್ಸಿಕ್​​ನ ಸಖತ್​ ಆಗಿರೋ ಸರ್​ಪ್ರೈಸ್​ ಸಿಕ್ಕಿದೆ. ಅದೇ ಟಾಕ್ಸಿಕ್ ಟೀಸರ್​ ಟ್ರೀಟ್​.. 

ಯಶ್ ಸೂಪರ್ ಸ್ಟಾರ್ ಅಲ್ಲವೇ ಅಲ್ಲ, ಇನ್ನೊಬ್ರು; ರಾಜಮೌಳಿ ಪ್ರಕಾರ ಮತ್ಯಾರು?

ನ್ಯಾಷನಲ್ ಸ್ಟಾರ್ ಯಶ್​​​​ಗೆ ಹುಟ್ಟುಹಬ್ಬ. 38 ವರ್ಷದ ಯಶ್​​ ಟಾಕ್ಸಿಕ್​ ಟೀಸರ್​ನಲ್ಲಿ ಮತ್ತಷ್ಟು ಯಂಗ್ ಆಗಿದ್ದಾರೆ. ಮಾನ್​ ಸ್ಟರ್​ ಬರ್ತ್​ಡೇಗೆ ಅಂತ ಬಂದಿರೋ ಟಾಕ್ಸಿಕ್​ನ ಸ್ಪೆಷಲ್ ಟೀಸರ್​​ ಬಣ್ಣದ ಜಗತ್ತಿಗೆ ಡ್ರಗ್ಸ್​​ ಸ್ಟೋರಿಯ ಮತ್ತೇರಿಸಿದೆ. ಯಾಕಂದ್ರೆ ಟಾಕ್ಸಿಕ್​ ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿರೋ ಡ್ರಗ್​ ಮಾಫಿಯಾ ಕಥೆಯ ಸಿನಿಮಾ.

ಕಲರ್​ ಫುಲ್ ಕ್ಲಬ್​​ನಲ್ಲಿ ಮದನಾರಿಯರ ಜೊತೆ ಯಶ್​ ಮಸ್ತಿ..!

ಯಶ್​ ಬರ್ತ್​ಡೇಗೆ ಬಂದ ಈ ಟೀಸರ್​ನಲ್ಲಿ ರಾಕಿಯ ಎಂಟ್ರಿ ರಗಡ್ ಆಗಿದೆ. ಬಾಯಲ್ಲಿ ಸಿಗರೇಟ್ ಹಚ್ಚಿ ಬರೋ ಯಶ್​ ಮಾದಕ ಜಗತ್ತಿನ ಡಾನ್ ರೀತಿ ಕಾಣಿಸಿದ್ದಾರೆ. ಕಲರ್​​ಫುಲ್​ ಕ್ಲಬ್​​ನಲ್ಲಿ ಮದನಾರಿಯರ ಜೊತೆ ಸಖತ್ ಮಸ್ತಿ ಮಾಡಿದ್ದಾರೆ. ಹಿಂದೆಂದೂ ನೋಡಿರದ ಲುಕ್​ನಲ್ಲಿ ಯಶ್ ಕಿಕ್ ಕೊಟ್ಟಿದ್ದಾರೆ. 
 
ರಾಕಿಯ ರಾಕಿಂಗ್ ಎಂಟ್ರಿ ಸಿಕ್ಕಾಪಟ್ಟೆ ಕಿಕ್ ಕೊಟ್ಟಿದೆ. ಕೆಜಿಎಫ್​​​ನಲ್ಲಿ ಚಿನ್ನದ ಬೇಟೆಗಾರನಾಗಿದ್ದ ರಾಕಿ ಈಗ ಟಾಕ್ಸಿಕ್​​ನಲ್ಲಿ ಕೆಜಿಎಫ್​ಗಿಂತಲೂ ಬಿಗ್ಗೆಸ್ಟ್ ವರ್ಲ್ಡ್​ ಸೃಷ್ಟಿಸೋಕೆ ಹೊರಟಿದ್ದಾರೆ. ಅದಕ್ಕಾಗಿ ಇಡೀ ಪ್ರಪಂಚವನ್ನೇ ಕಬ್ಜಾ ಮಾಡಿರೋ ಡ್ರಗ್​​​​ ದುನಿಯಾವನ್ನ ತೆರೆ ಮೇಲೆ ತೆರೆದಿಡುತ್ತಿದ್ದಾರೆ. ಕೆಜಿಎಫ್​ನಲ್ಲಿ ಗೋಲ್ಡ್ ಹಂಟರ್ ಯಶ್​ ಟಾಕ್ಸಿಕ್​ನಲ್ಲಿ ಡ್ರಗ್ಸ್​ ಡಾನ್ ಅವತಾರ ಎತ್ತಿದ್ದಾರೆ.

ಕನ್ನಡದ ನಟ ಯಶ್ ಫಾಲೋ ಮಾಡಿದ ಅಲ್ಲು ಅರ್ಜುನ್, ನೆಟ್ಟಿಗರ ಕಣ್ಣು ಕೆಂಪಾಗಿದ್ದೇಕೆ?

ರಾಷ್ಟ್ರಪ್ರಶಸ್ತಿ ವಿಜೇತೆ ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಗೆ ಕನ್ನಡದ ಕೆವಿಎನ್​ ಪ್ರೊಡಕ್ಷನ್ ಬಂಡವಾಳ ಹೂಡಿದೆ. ಟಾಕ್ಸಿಕ್ ​ಮ್ಯೂಸಿಕ್​ ಮತ್ತೊಂದು ಮೈಲುಗಲ್ಲಾಗೋ ಎಲ್ಲಾ ಲಕ್ಷಣ ಇದೆ ಅಂತ ಈ ಟೀಸರ್ ಹೇಳ್ತಾ ಇದೆ. ಆ ಕಡೆ ಫ್ಯಾನ್ಸ್​ ಜೊತೆ ಹುಟ್ಟುಹಬ್ಬಕ್ಕೆ ಬ್ರೇಕ್​ ಹಾಕಿರೋ ಯಶ್​​​, ಫ್ಯಾಮಿಲಿ, ಫ್ರೆಂಡ್ಸ್​​ ಹಾಗು ಟಾಕ್ಸಿಕ್ ಸಿನಿಮಾ ತಂಡದ ಜೊತೆ ಗೋವಾ ಬೀಚ್​​ನಲ್ಲಿ ಬರ್ತ್​ಡೇ ಆಚರಿಸಿದ್ದಾರೆ. ಆದ್ರೆ ಟೀಸರ್ ಮೂಲಕನೇ ಫ್ಯಾನ್ಸ್​ಗೆ ಬರ್ತ್​ಡೇ ಟ್ರೀಟ್ ಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ... 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?