ನಿಮಗೇನು ಬೇಕು ಎಂಬುದರ ಬಗ್ಗೆ ನೀವು ಮೊದಲು ನಿರ್ಧಾರ ಮಾಡಿಕೊಳ್ಳಿ. ಬಳಿಕ, ಅದನ್ನು ಸಾಧಿಸಲು ಯತ್ನಿಸಿ. ನಾವು ಕೆಜಿಎಫ್ ಸಿನಿಮಾ ಮೂಲಕ ಲಿಮಿಟೇಶನ್ ಮೀರಿ ಹೋಗಲು ಪ್ರಯತ್ನಿಸಿ ಅದರಲ್ಲಿ ಸಫಲತೆ ಕೂಡ ಪಡೆದಿದ್ದೇವೆ.
ಕನ್ನಡದ ನಟ, ರಾಕಿಂಗ್ ಸ್ಟಾರ್ ಯಶ್ (Rocking Star Yash) ಸಂದರ್ಶನವೊಂದರಲ್ಲಿ ಮುತ್ತಿನಂಥ ಮಾತನ್ನು ಆಡಿದ್ದಾರೆ. ಕೆಜಿಎಫ್ ಬಳಿಕ ಇಡೀ ಜಗತ್ತು ಯಶ್ ಕಡೆ ತಿರುಗಿ ನೋಡುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್' ಹಾಗೂ ಕೆಜಿಎಫ್ 2' ಚಿತ್ರಗಳು ಜಗತ್ತಿನೆಲ್ಲೆಡೆ ಸದ್ದು ಮಾಡಿದ್ದು, ಈಗ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಯಶ್ ಏನೇ ಮಾತನಾಡಿದರೂ ಜಗತ್ತು ಕೇಳಿಸಿಕೊಳ್ಳುತ್ತದೆ, ಮಾತಿಗೆ ಭಾರೀ ಮರ್ಯಾದೆ ಕೊಡುತ್ತಿದೆ. ಹಾಗಿದ್ದರೆ ಯಶ್ ಏನು ಹೇಳಿದ್ದಾರೆ?
'ನಾವು ಲಿಮಿಟೇಶನ್ ಮೈಂಡ್‌ಸೆಟ್ ಬಿಟ್ಟು ಹೊರಗೆ ಬರಬೇಕು. ಅವಕಾಶಗಳು ಜಗತ್ತಿನಲ್ಲಿ ಎಲ್ಲ ಕಡೆಯೂ ಇದೆ. ನಮಗೆ ನಾವೇ ಬೇಲಿ ಹಾಕಿಕೊಂಡು ಒದ್ದಾಡುವುದನ್ನು ಬಿಟ್ಟು, ಬೇಲಿ ದಾಟಿ ಸಾಧಿಸಲು ಮೊದಲು ಪ್ರಯತ್ನ ಪಡಬೇಕು. ನಾವೇ ಕಟ್ಟಿಕೊಂಡ ಹಗ್ಗವನ್ನು ಹರಿದುಕೊಂಡು ಸಾಧನೆ ಮಾಡಲು ಹೋರಾಟ ಮಾಡಿ. ಯಾಕೆ ಆಗುವುದಿಲ್ಲ? ಇಡೀ ಜಗತ್ತೇ ನಮ್ಮನ್ನು ಗೌರವಿಸುತ್ತದೆ. ಮೊದಲು ಸಾಧಿಸಿ ತೋರಿಸಬೇಕು, ನಮ್ಮಲ್ಲಿರುವ ಕೀಳರಿಮೆ ಹೋಗಲಾಡಿಸಬೇಕು.
ಪ್ರೇಕ್ಷಕರು ಥಿಯೇಟರ್‌ಗೆ ಬಾರದಿರುವ ಸೀಕ್ರೆಟ್ ರಿವೀಲ್ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ!
ನಿಮಗೇನು ಬೇಕು ಎಂಬುದರ ಬಗ್ಗೆ ನೀವು ಮೊದಲು ನಿರ್ಧಾರ ಮಾಡಿಕೊಳ್ಳಿ. ಬಳಿಕ, ಅದನ್ನು ಸಾಧಿಸಲು ಯತ್ನಿಸಿ. ನಾವು ಕೆಜಿಎಫ್ ಸಿನಿಮಾ ಮೂಲಕ ಲಿಮಿಟೇಶನ್ ಮೀರಿ ಹೋಗಲು ಪ್ರಯತ್ನಿಸಿ ಅದರಲ್ಲಿ ಸಫಲತೆ ಕೂಡ ಪಡೆದಿದ್ದೇವೆ. ನಾವು ಅಂತಲ್ಲ, ಯಾರೇ ಆದರೂ ಸರಿಯಾದ ದೃಷ್ಟಿಕೋನ ಹೊಂದಿ ಮುನ್ನಡೆದರೆ ಖಂಡಿತವಾಗಿಯೂ ಸಕ್ಸಸ್ ಪಡೆಯಲು ಸಾಧ್ಯ. ಕೆಜಿಎಫ್ ಮೂಲಕ ನಾವು ಕನ್ನಡ ಸಿನಿಮಾ ಉದ್ಯಮ ಕೂಡ ಮನಸ್ಸು ಮಾಡಿದರೆ ದೊಡ್ಡ ರೀತಿಯಲ್ಲಿ ಬಿಸಿನೆಸ್ ಮಾಡಬಹುದು ಎಂದು ತೋರಿಸಿಕೊಟ್ಟೆವು.
ವಿಷ್ಣುವರ್ಧನ್-ಭಾರತಿ ಮೊದಲು ಭೇಟಿಯಾಗಿದ್ದು ಎಲ್ಲಿ; ಲವ್ ಆಗಿದ್ದು ಯಾವಾಗ?
ನಾವು ಯಾವತ್ತೂ ನಾವು ಚಿಕ್ಕವರು, ಬೇರೆಯವರು ದೊಡ್ಡವರು ಅಂತಲೇ ಯೋಚಿಸುತ್ತೇವೆ. ಹಾಗೇನಿಲ್ಲ. ನನ್ನ ಪ್ರಕಾರ ಇಲ್ಲಿ ಯಾರೂ ದೊಡ್ಡವರಿಲ್ಲ, ಯಾರೂ ಚಿಕ್ಕವರಿಲ್ಲ. ಯಾರು ಏನು ಬೇಕಾದರೂ ಸಾಧಿಸಿ ತೋರಿಸಬಹುದು. ಮೊದಲು ನಮಗೆ ನಾವೇ ಬೇಲಿ ಹಾಕಿಕೊಳ್ಳುವದನ್ನು ನಿಲ್ಲಿಸಬೇಕು. ನಮಗೆ ನಾವೇ ಹಗ್ಗ ಕಟ್ಟಿಕೊಂಡು ಒದ್ದಾಡುವುದನ್ನು ತೊಲಗಿಸಬೇಕು. ಆಗ ಬಹಳಷ್ಟನ್ನು ಸಾಧಿಸಲು ಸಾಧ್ಯ' ಎಂದಿದ್ದಾರೆ ನಟ ಯಶ್. ಅಂದಹಾಗೆ, ನಟ ಯಶ್ ಸದ್ಯ ಬಾಲಿವುಡ್‌ನ 'ರಾಮಾಯಣ' ಹಾಗೂ ಗೀತೂ ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮದುವೆ ಬಳಿಕ ಸೀಸನ್ ಸಂಬಂಧ ಕುರಿತು ಮಾತನಾಡಿದ ವಿದ್ಯಾ ಬಾಲನ್; ಏನಿದರ ಒಳಗುಟ್ಟು?