
ಪದ್ಮಶ್ರೀ ಪುರಸ್ಕೃತ ಸಾಹಿತಿ ದೊಡ್ಡ ರಂಗೇಗೌಡ ನಿರ್ದೇಶನದ ಮೊದಲ ಚಿತ್ರ ‘ಹಾರುವ ಹಂಸಗಳು’ ನಾಳೆ (ಆ.12 ) ನಮ್ಮ ಫ್ಲಿಕ್ಸ್ ಓಟಿಟಿ ಮೂಲಕ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆ ಪ್ರಯುಕ್ತ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಒಂದು ಹಾಡು ಹಾಗೂ ಟ್ರೇಲರ್ ಪ್ರದರ್ಶಿಸಲಾಯಿತು.
ಈ ಸಂದರ್ಭ ಮಾತನಾಡಿದ ದೊಡ್ಡ ರಂಗೇಗೌಡ ಅವರು, ‘ಚಿಕ್ಕಮಕ್ಕಳೂ ಮೊಬೈಲ್ ಗೀಳಿಗೆ ಸಿಲುಕಿರುವುದು ಈ ಚಿತ್ರ ಮಾಡಲು ಪ್ರೇರಣೆ. ಈ ವಿಷಯವನ್ನಿಟ್ಟು ಮೊದಲು ನಾಟಕ ಬರೆದೆ. ಬಳಿಕ ಸ್ನೇಹಿತರ ಒತ್ತಾಸೆಯಿಂದ ಎಪ್ಪತ್ತೈದನೇ ವಯಸ್ಸಿಗೆ ಕತೆ, ಚಿತ್ರಕತೆ, ಸಂಭಾಷಣೆ ಹಾಡಿನ ರಚನೆ ಜೊತೆಗೆ ನಿರ್ದೇಶನವನ್ನೂ ಮಾಡಿದೆ.
ಧ್ರುವ ಸರ್ಜಾ ಜೊತೆ ಜೋಗಿ ಪ್ರೇಮ್ ಹೊಸ ಸಿನಿಮಾ
ಜೊತೆಗೆ ಪ್ಲೇ ಸ್ಟೋರ್‌ನಲ್ಲಿ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಆ್ಯಪ್‌ಗಳ ಬಗ್ಗೆ ಬಿಜೆಪಿ ಮುಖಂಡ ಬಿ.ಎಲ್ ಸಂತೋಷ್ ಅವರಿಗೆ ತಿಳಿಸಿದೆ. ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಇದನ್ನು ಪ್ರಸ್ತಾಪಿಸಿ, ಆ ಎಲ್ಲಾ ಆ್ಯಪ್‌ಗಳನ್ನು ಡಿಲೀಟ್ ಮಾಡಿಸಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದ’ ಎಂದರು.ನಮ್ಮ ಫ್ಲಿಕ್‌ಸ್ ಓಟಿಟಿಯ ವಿಜಯ ಪ್ರಕಾಶ್, ‘ಈ ಸಿನಿಮಾಕ್ಕೆ ಕಮಿಶನ್ ಪಡೆಯದೇ ಬಂದ ಹಣವನ್ನೆಲ್ಲ ನಿರ್ಮಾಪಕರಿಗೆ ನೀಡಲಾಗುವುದು.
ಅದನ್ನವರು ಸಂಕಷ್ಟದಲ್ಲಿರುವ ಶಿಕ್ಷಕರಿಗೆ ನೀಡಲಿ’ಎಂದರು. ನಿರ್ಮಾಪಕ ವಾಸು ಪ್ರಸಾದ್, ಸೆನ್ಸಾರ್ ಮಂಡಳಿಯ ಸದಸ್ಯರು ಹಾಗೂ ಚಿತ್ರತಂಡದವರು ಉಪಸ್ಥಿತರಿದ್ದರು. ಮಾಸ್ಟರ್ ಓಜಸ್ ದೀಪ್, ಮಾಸ್ಟರ್ ಚಿನ್ಮಯ್, ದೊಡ್ಡರಂಗೇಗೌಡ, ರೂಪ ಮತ್ತಿತರರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.