
ಬೆಂಗಳೂರು (ಸೆ.28): ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ಅಕ್ಟೋಬರ್ 20ರಂದು ನಿಧನರಾದರು. ಇಡೀ ಕನ್ನಡ ನಾಡು ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಸರೋಜಾ ಅವರ ಅಗಲಿಗೆ ಸಂತಾಪ ಸೂಚಿಸಿತ್ತು. ಇದೀಗ ಸುದೀಪ್ ಅವರ ತಾಯಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದು ಸಂತಾಪ ಸೂಚಿಸಿದ್ದಾರೆ. ಈ ಪತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿರುವ ಕಿಚ್ಚ ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ ಎಂದು ಬರೆದುಕೊಂಡಿದ್ದಾರೆ.
ಮೋದಿ ಪತ್ರದಲ್ಲೇನಿದೆ?
ಶ್ರೀ ಸುದೀಪ್ ಸಂಜೀವ್ ಅವರೇ, ನಿಮ್ಮ ತಾಯಿ ಶ್ರೀಮತಿ ಸರೋಜಾ ಸಂಜೀವ್ ಅವರ ನಿಧನದ ಸುದ್ದಿ ಕೇಳಿ ನನಗೆ ಆಳವಾದ ದುಃಖವಾಗಿದೆ. ತಾಯಿಯ ಅಗಲಿಕೆ ತುಂಬಲಾರದ ನಷ್ಟ.
ಬಿಗ್‌ಬಾಸ್‌ನಲ್ಲಿ ಅಚ್ಚರಿ ಎಲಿಮಿನೇಷನ್, ಮಾನಸ ಎಲಿಮಿನೇಟ್ ಆಗಿಲ್ಲ, ಆದ್ರೆ ಇದ್ದಕ್ಕಿದ್ದಂತೆ ಬದಲಾದ ಮೋಕ್ಷಿತಾ ಪೈ!
"ಮಾತುಲಕಿ ಮಾರ್ದವಂ ಸಾಮ್ಯಶೂನ್ಯಮ್" ಎಂದು ಹೇಳಿದಂತೆ, ತಾಯಿಯ ಹೃದಯದ ಮೃದುತ್ವಕ್ಕೆ ಈ ಜಗತ್ತಿನಲ್ಲಿ ಬೇರೆ ಸಾಟಿಯಿಲ್ಲ. ನಿಮ್ಮ ಭಾವನಾತ್ಮಕ ವೇದನೆ ಅವಳೊಂದಿಗೆ ಮುರಿಯಲಾಗದ ಬಂಧವನ್ನು ಪ್ರತಿಬಿಂಬಿಸುತ್ತದೆ ಇದೇ ವೇಳೆ ನಿಮ್ಮ ಮತ್ತು ಕುಟುಂಬದ ಮೇಲೆ ಅಕೆ ಬೀರಿದ ಪ್ರಭಾವವನ್ನು ಒತ್ತಿಹೇಳುತ್ತದೆ. ಅವಳು ನಿಮ್ಮ ನೆನಪುಗಳಲ್ಲಿ ಬದುಕುವುದನ್ನು ಮುಂದುವರಿಸುತ್ತಾಳೆ ಮತ್ತು ಅವಳಿಂದ ತುಂಬಿದ ಮೌಲ್ಯಗಳು ನಿಮಗೆ ಸ್ಫೂರ್ತಿ ನೀಡುತ್ತವೆ ಎಂದು ನನಗೆ ನಂಬಿಕೆ ಇದೆ.
ನಿಮ್ಮ ಜೀವನದಲ್ಲಿ ನಿಜವಾಗಿಯೂ ಅತ್ಯಂತ ಕಷ್ಟಕರವಾದ ಹಂತ ಯಾವುದು, ನಾನು ಬಲ್ಲೆ. ನನ್ನ ಆಳವಾದ ಸಂತಾಪ ಮತ್ತು ಸಹಾನುಭೂತಿ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಕುಟುಂಬ ಮತ್ತು ಹಿತೈಷಿಗಳೊಂದಿಗೆ ಇದೆ.ಈ ನಷ್ಟ, ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನಿಮಗೆ ದಯಪಾಲಿಸಲಿ ಓಂ ಶಾಂತಿ! ಎಂದು ಪತ್ರದಲ್ಲಿ ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.
ಶೋಭಿತಾ ಜೊತೆಗೆ ಮದುವೆಗೂ ಮುನ್ನ, ಮಾಜಿ ಪತ್ನಿ ಸಮಂತಾಳೊಂದಿಗಿನ ಕೊನೆಯ ಪೋಸ್ಟ್ ಡಿಲೀಟ್ ಮಾಡಿದ ನಾಗಚೈತನ್ಯ!
ಅಕ್ಟೋಬರ್ 23 ರಂದು ಬರೆದಿರುವ ಪತ್ರ ಸುದೀಪ್ ಕೈ ಸೇರಿದ್ದು ಇಂದು ಈ ಪತ್ರವನ್ನು ಕಿಚ್ಚ ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಧನ್ಯವಾದ ತಿಳಿಸಿದ್ದಾರೆ.
ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ನಿಮ್ಮ ಸಹಾನುಭೂತಿಯ ಸಂತಾಪ ಪತ್ರಕ್ಕಾಗಿ ಪ್ರಾಮಾಣಿಕ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು ಈ ಆಳವಾದ ಕಷ್ಟದ ಸಮಯದಲ್ಲಿ ಸಾಂತ್ವಾನದ ಮೂಲಸೆಲೆಯನ್ನು ನೀಡಿದೆ.ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ.ನಿಮ್ಮ ವಿಶ್ವಾಸಕ್ಕೆ ನಾನು ಅಭಾರಿ ಎಂದು ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.