ಸಿನಿಮಾ ಗೀತೆಗಳ ಮಹಾಪ್ರಬಂಧಕ್ಕೆ ಡಾಕ್ಟರೇಟ್‌ ಪಡೆದ ಪ್ರಿಯದರ್ಶಿನಿ

By Kannadaprabha NewsFirst Published Sep 22, 2021, 11:15 AM IST
Highlights
  • ಕನ್ನಡ ಹಾಗೂ ತಮಿಳು ಚಲನಚಿತ್ರ ಸಂಗೀತ ಬೆಳೆದು ಬಂದ ಬಗೆಯ ಕುರಿತು ಮಹಾಪ್ರಬಂಧ
  • ಹಿನ್ನೆಲೆ ಗಾಯಕಿ ಪ್ರಿಯದರ್ಶಿನಿಗೆ ಡಾಕ್ಟರೇಟ್‌ ಪದವಿ

ಕಳೆದ ನೂರು ವರ್ಷಗಳಲ್ಲಿ ಕನ್ನಡ ಹಾಗೂ ತಮಿಳು ಚಲನಚಿತ್ರ ಸಂಗೀತ ಬೆಳೆದು ಬಂದ ಬಗೆಯ ಕುರಿತು ಹಿನ್ನೆಲೆ ಗಾಯಕಿ ಪ್ರಿಯದರ್ಶಿನಿ(Priyadarshini) ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಘಟಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಈ ಪದವಿ ಪ್ರದಾನ ಮಾಡಿದರು. ‘ಮ್ಯೂಸಿಕ್‌ ಇನ್‌ ಕನ್ನಡ ಆ್ಯಂಡ್‌ ತಮಿಳ್‌ ಸಿನಿಮಾ- ಎ ಸ್ಟಡಿ’ ಎಂಬ ಪ್ರಬಂಧವನ್ನು ಪ್ರಿಯದರ್ಶಿನಿ ಮಂಡಿಸಿದ್ದರು.

ಚಡ್ಡಿ ದೋಸ್ತ್ ಸಿನಿಮಾ ನೋಡಿದ್ರೆ ಚಿನ್ನದ ನಾಣ್ಯ

ಮದ್ರಾಸ್‌ ವಿಶ್ವವಿದ್ಯಾನಿಲಯದಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಲಂಡನ್‌ನ ‘ದಿ ರಾಯಲ್‌ ಸ್ಕೂಲ್‌ ಆಫ್‌ ಮ್ಯೂಸಿಕ್‌’ ಪಾಶ್ಚಾತ್ಯ ಸಂಗೀತ ಕಲಿತಿರುವ ಇವರು, ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನ 130ಕ್ಕೂ ಹೆಚ್ಚು ಚಿತ್ರಗಳಿಗೆ ಹಿನ್ನೆಲೆ ಗಾಯನ ಮಾಡಿದ್ದಾರೆ.

‘ನನ್ನದು ಚಲನಚಿತ್ರ ಸಂಗೀತದಲ್ಲಿ 1080 ಪುಟಗಳ ಸುದೀರ್ಘ ಪ್ರಬಂಧವಾದ್ದರಿಂದ ಇದನ್ನು ಗಿನ್ನೆಸ್‌ ವಿಶ್ವ ದಾಖಲೆ ಮತ್ತು ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್ಗೆ ಕಳುಹಿಸಲು ಯೋಚಿಸುತ್ತಿದ್ದೇನೆ’ ಎನ್ನುತ್ತಾರೆ ಪ್ರಿಯದರ್ಶಿನಿ.

click me!