ರಾತ್ರಿ 1 ಗಂಟೆಗೆ ಕರೆ ಮಾಡ್ತಾನೆ; ಯುಟ್ಯೂಬರ್‌ ವಿರುದ್ಧ ರೊಚ್ಚಿಗೆದ್ದ ನಟಿ ತನಿಷಾ

Published : Apr 05, 2023, 09:55 AM IST
ರಾತ್ರಿ 1 ಗಂಟೆಗೆ ಕರೆ ಮಾಡ್ತಾನೆ; ಯುಟ್ಯೂಬರ್‌ ವಿರುದ್ಧ ರೊಚ್ಚಿಗೆದ್ದ ನಟಿ ತನಿಷಾ

ಸಾರಾಂಶ

ಬೆತ್ತಲೆ ಸಿನಿಮಾ ಮಾಡ್ತೀರಾ ಎಂದು ಪ್ರಶ್ನೆ ಮಾಡಿದ ಯುಟ್ಯೂಬರ್ ವಿರುದ್ಧ ಗರಂ ಆದ ನಟಿ ತನಿಷಾ. ಮಧ್ಯೆರಾತ್ರಿ ಸುಸೈಡ್ ಮಾಡ್ಕೊಳ್ತೀನಿ ಅಂತಾನಂತೆ...   

ಪೆಂಟಗನ್‌ ಸಿನಿಮಾದಲ್ಲಿ ನಟಿ ತನಿಷಾ ತುಂಬಾ ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಪ್ರಚಾರಕ್ಕೆಂದು ಸಣ್ಣ ವಿಡಿಯೋ ರಿವೀಲ್ ಮಾಡಲಾಗಿದೆ ಆದರೆ ಇಡೀ ವಿಡಿಯೋ ಹಾಗೆ ಇದೆ ಅಂದುಕೊಂಡು ಯುಟ್ಯೂಬರ್‌ ಒಬ್ಬ ಬೆತ್ತಲೆ ಸಿನಿಮಾ ಮಾಡ್ತೀರಾ ಎಂದು ಪ್ರಶ್ನೆ ಮಾಡಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.  

'ಯುಟ್ಯೂಬರ್‌ ಜೊತೆ ನಡೆದಿರುವ ಘಟನೆಯಿಂದ ಅನೇಕರು ನನಗೆ ಕರೆ ಮಾಡಿ ವಿಚಾರಿಸಿಕೊಂಡಿದ್ದಾರೆ ಈ ರೀತಿ ಮಾನವೀಯತೆ ಬೆಲೆ ಗೊತ್ತಾಗಿದೆ. ಈ ಸಿನಿಮಾ ಸಂದರ್ಶನ ಮೂಲಕ ನಾನು ಅನೇಕರನ್ನು ಭೇಟಿ ಮಾಡಿರುವುದು ಪರ್ಸನಲ್ ಆಗಿ ನನಗೆ ಯಾರೂ ಪರಿಚಯವಿಲ್ಲ ನಮ್ಮ ಮನೆ ಹೆಣ್ಣು ಮಗಳು ಅಂತ ಮಾಧ್ಯಮದವರು ನನ್ನ ಪರ ನಿಂತುಕೊಂಡರು. ಯುಟ್ಯೂಬರ್ ಸುಶಾಂತ್ ಅನ್ನೋರು ಈ ಹಿಂದೆಯೂ ನನ್ನನ್ನು ಸಂಪರ್ಕಿಸಿ ನಿಮ್ಮ ರೆಸ್ಟೋರೆಂಟ್‌ನಲ್ಲಿ ಒಂದು ಸಂದರ್ಶನ ಮಾಡೋಣ ಎಂದು ಕೇಳಿಕೊಂಡಿದ್ದರು. ಅವ್ರು ಕೇಳೋ ರೀತಿ ಅಥವಾ ಮಾತನಾಡಿದ ರೀತಿ ನನಗೆ ಇಷ್ಟ ಆಗಿರಲಿಲ್ಲ ಅದಿಕ್ಕೆ ಹೇಳ್ತೀನಿ ಹೇಳ್ತೀನಿ ಅಂತ ಸುಳ್ಳು ಹೇಳುತ್ತಿದ್ದ. ಇದಲ್ಲದೆ ನಮ್ಮ ಸೀರಿಯಲ್ ಅಥವಾ ಈವೆಂಟ್‌ ಕಾರ್ಯಕ್ರಮಗಳಿಗೆ ಆಗಮಿಸಿ ನಾನಿದ್ದೀನಿ ನಾನಿದ್ದೀನಿ ಎಂದು ಓಡಾಡುತ್ತಿದ್ದರು. ನನ್ನ ಸಿನಿಮಾದವರ ಪರಿಚಯವಿದೆ ನೀವು ಬನ್ನಿ ಪ್ರೀಮಿಯರ್ ಶೋ ನೋಡಿಕೊಂಡು ಬರೋಣ ಎಂದು ಆಗಾಗ ಮೆಸೇಜ್ ಮಾಡುತ್ತಿದ್ದರು. ನನ್ನ ಜೊತೆ ಬಂದ್ರೆ ಬೆಳೆಯುವುದನ್ನು ಹೇಳಿಕೊಡುತ್ತೀನಿ ಎನ್ನುತ್ತಿದ್ದರು' ಎಂದು ತನಿಷಾ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ್ದಾರೆ. 

ಬ್ಲೂ ಫಿಲ್ಮ್‌ನಲ್ಲಿ ನಟಿಸುತ್ತೀರಾ? ಯೂಟ್ಯೂಬರ್ ಪ್ರಶ್ನೆಗೆ ಕನ್ನಡ ನಟಿ ತನಿಷಾ ಗರಂ

'ಕೆಲವು ವರ್ಷಗಳಿಂದ ಸೀರಿಯಲ್ ಮಾಡುತ್ತಿರುವೆ ಸಿನಿಮಾದವರು ಆರ್ಟಿಸ್ಟ್‌ ಎಂದು ಗುರುತಿಸುತ್ತಾರೆ. ಕಲಾವಿದೆ ಆಗಬೇಕು ಅನ್ನೋದು ನನ್ನ ಬಾಲ್ಯದ ಕನಸ್ಸು. ರಸ್ತೆಯಲ್ಲಿ ಹೋಗುತ್ತಿದ್ದರೆ ನಾಲ್ಕು ಜನ ಗುರುತಿಸುತ್ತಾರೆ. ನಿಯತ್ತಿನಿಂದ ಜೀವನ ಮಾಡಿಕೊಂಡು ಅವಕಾಶಗಳನ್ನು ಪಡೆಯುತ್ತಿರುವುದು ಯಾರ ಸಪೋರ್ಟ್ ಮತ್ತು ಬ್ಯಾಕ್ ಬೋನ್ ಇಲ್ಲದೆ ಸಿನಿಮಾ ಜರ್ನಿ ಆರಂಭಿಸಿರುವೆ. ಮೊನ್ನೆ ಯುಟ್ಯೂಬರ್‌ ಜೊತೆ ನಡೆದ ಘಟನೆ ದಿನ ನನ್ನ ಟೀಂ ನನ್ನ ಜೊತೆಗಿದ್ದರು ಅದಿಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು. ನನ್ನ ಜರ್ನಿಯಲ್ಲಿ ಯಾರೂ ನಾನಿದ್ದೀನಿ ಎಂದು ಹೇಳಿ ಅವಕಾಶ ಕೊಡಿಸಿಲ್ಲ ನನ್ನ ಪ್ರತಿಭೆಯಿಂದ ಕೆಲಸ ಪಡೆಯುತ್ತಿರುವುದು. ನಮ್ಮಂತ ಕಲಾವಿದರು ಪೇಮೆಂಟ್‌ಗೆ ಓಡಾಡಬೇಕು. ಕಷ್ಟ ಪಟ್ಟು ಏನೋ ಒಂದು ಕೆಲಸ ಮಾಡ್ಕೊಂಡು ಜೀವನ ನಡೆಸುತ್ತಿರುವೆ. ಫ್ಯಾಮಿಲಿಯಲ್ಲಿ ನನ್ನ ತಾಯಿ ಹೊರತು ಪಡಿಸಿ ಯಾರೂ ಸಪೋರ್ಟ್‌ ಮಾಡಿಲ್ಲ. ನಿಮ್ಮ ಸಾಂಗ್‌ಗಿಂತ ಇಂಟರ್‌ವ್ಯೂಗಳು ವೈರಲ್ ಆಗುತ್ತಿದೆ ಅದಿಕ್ಕೆ ಸಂದರ್ಶನ ಮಾಡುತ್ತಿರುವೆ ಎಂದು ಆರಂಭದಲ್ಲಿ ಹೇಳಿದ್ದರು. ನ್ಯೂಡ್ ಸಿನಿಮಾ ಮಾಡ್ತೀರಾ ಎಂದು ಕೇಳಿದಾಗ ಚಪ್ಪಲಿ ನೋಡಿ ಎತ್ತಿ ಹೊಡೆಯಬೇಕು ಎಂದು ಮಾಧ್ಯಮದವರು ಅನ್ನೋ ಕಾರಣ ಸುಮ್ಮನಿದ್ದು ಗೌರವ ಕೊಟ್ಟೆ' ಎಂದು ತನಿಷಾ ಹೇಳಿದ್ದಾರೆ.

'ನಡೆದ ಘಟನೆಯನ್ನು ವಿಡಿಯೋದಲ್ಲಿ ರೆಕಾರ್ಡ್‌ ಮಾಡಲಾಗಿತ್ತು ಆಗ ವಿಡಿಯೋ ಆಫ್‌ ಮಾಡಿದ ತಕ್ಷಣ ನನಗೆ ಇನ್ನೂ ಹೊಡೆಯಬೇಕು ನೀವು ಜನರು ಹೆಚ್ಚಿಗೆ ನೋಡುತ್ತಾರೆ ನಾನು ವೈರಲ್ ಆಗಬೇಕು ಹೆಸರು ಮಾಡಬೇಕು ಎನ್ನುತ್ತಾನೆ. ಈ ಘಟನೆಯಿಂದ ಅವನಿಗೆ ಬೇಸರ ಇಲ್ಲ. ನಮ್ಮ ಮನೆಯವರ ಮುಂದೆ ಮಾತನಾಡಿದರೆ ಅಲ್ಲಿ ಹೊಡೆದಾಕುತ್ತಿದ್ದರು. ಯುಟ್ಯೂಬರ್‌ ಅಲ್ವಾ ವಾರ್ನಿಂಗ್ ಕೊಟ್ಟು ಕ್ಷಮಿಸಿ ಕಳುಹಿಸಿದೆವು ಆದರೆ ಅವನು ಸುಮ್ಮನಾಗಿಲ್ಲ. ರಾತ್ರಿ 1 ವರೆಗೆ ಕಾಲ್ ಮಾಡಿ ನನ್ನನ್ನು ಬಳಸಿಕೊಂಡು ಪ್ರಚಾರ ತೆಗೆದುಕೊಳ್ಳುತ್ತಿದ್ದೀರಾ ನಾನು ಸುಸೈಡ್ ಮಾಡಿಕೊಂಡರೆ ಏನು ಮಾಡ್ತೀರಾ ಎಂದು ಪ್ರಶ್ನೆ ಮಾಡಿದ್ದಾನೆ. ವಿಡಿಯೋ ಅಪ್ಲೋಡ್ ಮಾಡಿ ಅನ್ಯಾಯ ಆಗಿದೆ ಎಂದು ಅವನು ಪಬ್ಲಿಸಿಟಿ ತೆಗೆದುಕೊಳ್ಳುತ್ತಿದ್ದಾನೆ' ಎಂದಿದ್ದಾರೆ ತನಿಷಾ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ