'ಪಾದರಾಯ' ಬಿಟ್ಟು 'ಐ ಯಾಮ್ ಕಲ್ಕಿ' ಹಿಂದೆ ಹೊರಟ ಚಕ್ರವರ್ತಿ ಚಂದ್ರಚೂಡ್; ನಾಯಕ ಯಾರು?

Published : Apr 04, 2023, 05:54 PM ISTUpdated : Apr 04, 2023, 06:21 PM IST
'ಪಾದರಾಯ' ಬಿಟ್ಟು 'ಐ ಯಾಮ್ ಕಲ್ಕಿ' ಹಿಂದೆ ಹೊರಟ ಚಕ್ರವರ್ತಿ ಚಂದ್ರಚೂಡ್; ನಾಯಕ ಯಾರು?

ಸಾರಾಂಶ

'ಪಾದರಾಯ' ಸಿನಿಮಾ ಕೈ ಬಿಟ್ಟು 'ಐ ಯಾಮ್ ಕಲ್ಕಿ' ಸಿನಿಮಾ ಮಾಡುತ್ತಿದ್ದಾರೆ ಚಕ್ರವರ್ತಿ ಚಂದ್ರಚೂಡ್. ಇದಕ್ಕೆ ಸ್ಯಾಂಡಲ್ ವುಡ್ ನಟ ರಾಜವರ್ಧನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ನಿರ್ದೇಶಕ, ನಟ ನಾಗಶೇಖರ್ ಮತ್ತು ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಕಾಂಬಿನೇಷನ್ ನಲ್ಲಿ ಪಾದರಾಯ ಎನ್ನುವ ಸಿನಿಮಾ ಅನೌನ್ಸ ಆಗಿತ್ತು. ಈ ಸಿನಿಮಾ ಮೂಲಕ ತೆಲುಗು ಗಾಯಕಿ ಮಂಗ್ಲಿ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಅಂದುಕೊಂಡತೆ ಆಗಿದ್ದರೆ ಈ ಸಿನಿಮಾ ಈಗಾಗಲೇ ಚಿತ್ರೀಕರಣ ಪ್ರಾರಂಭ ಮಾಡಿ ಬಹುತೇಕ ಮುಗಿಯುವ ಹಂತಕ್ಕೆ ಬರಬೇಕಿತ್ತು. ಆದರೆ ಆ ಸಿನಿಮಾ ಅನೇಕ ಕಾರಣಗಳಿಂದ ಪ್ರಾರಂಭದಲ್ಲಿ ನಿಂತಿದೆ. ಆ ಸಿನಿಮಾ ನಿಂತೋಯ್ತು ಅಂತ ಚಕ್ರವರ್ತಿ ಚಂದ್ರಚೂಡ್ ಸೈಲೆಂಟ್ ಆಗಿಲ್ಲ ಮತ್ತೊಂದು ಸಿನಿಮಾ ಮೂಲಕ ಬರ್ತಿದ್ದಾರೆ. ಹೌದು ಪಾದರಾಯ ಸಿನಿಮಾ ಬಿಟ್ಟು ಇದೀಗ 'ಐ ಯಾಮ್ ಕಲ್ಕಿ' ಎನ್ನುವ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.  

'ಐ ಯಮ್ ಕಲ್ಕಿ' ಸಿನಿಮಾ ಮಾಡುತ್ತಿರುವ ಬಗ್ಗೆ ಈಗಾಗಲೇ ಸುದ್ದಿ ವೈರಲ್ ಆಗಿದೆ. ಅಂದಹಾಗೆ ಈ ಸಿನಿಮಾಗೆ ಸ್ಯಾಂಡಲ್ ವುಡ್‌ನ ಖ್ಯಾತ ನಟ ರಾಜವರ್ಧನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಪಕ್ಕ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿರಲಿದೆ ಎನ್ನುವ ಮಾತು ಕೇಳಿಬಂದಿದೆ. ರಾಜವರ್ಧನ್ ಈಗಾಗಲೇ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರಣಯಂ, ಗಜರಾಮ ಮುಂತಾದ ಸಿನಿಮಾಗಳಲ್ಲಿನಟಿಸುತ್ತಿದ್ದಾರೆ. ಇದೀಗ ಚಕ್ರವರ್ತಿ ಚಂದ್ರಚೂಡ್  ಜೊತೆ 'ಐ ಯಾಮ್ ಕಲ್ಕಿ'ಯಾಗಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. 

ಅಂದಹಾಗೆ ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಪೋಸ್ಟರ್ ರಾಜವರ್ಧನ್ ಹುಟ್ಟುಹಬ್ಬದಂದು ಬಹಿರಂಗವಾಗಲಿದೆ. ಈ ಸಿನಿಮಾ ಸದ್ಯ ಪ್ರಿಪ್ರೊಡಕ್ಷನ್ ಹಂತದಲ್ಲಿದೆ. ಈ ಬಗ್ಗೆ ಮಾತನಾಡಿರುವ ರಾಜವರ್ಧನ್ ಈ ಚಿತ್ರವನ್ನು ತಮ್ಮ ನಟನಾ ವೃತ್ತಿಜೀವನದ ಅತ್ಯುತ್ತಮ ಸ್ಕ್ರಿಪ್ಟ್‌ಗಳಲ್ಲಿ ಒಂದೆಂದು ಹೇಳಿದ್ದಾರೆ. ಈ ಪ್ರಾಜೆಕ್ಟ್ ನಲ್ಲಿ ನಟಿಸಲು ನಿರ್ದೇಶಕ ಚಂದ್ರಚೂಡ್ ಅವರು ಕಥೆ ಬರೆದಿರುವುದು ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದಾರೆ. 

ಆರಂಭದಲ್ಲೇ ನಿಂತ 'ಪಾದರಾಯ' ಚಿತ್ರದ ಹೆಸರಲ್ಲಿ ಹಣದ ದಂಧೆ; ಉಗ್ರ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಚಂದ್ರಚೂಡ್

ಈ ಪಾತ್ರಕ್ಕೆ ಸಾಕಷ್ಟು ತಯಾರಿ ಬೇಕಾಗಿದ್ದು ಬಾಡಿ ಹುರಿಗೊಳಿಸಬೇಕಂತೆ. 'ಪಾತ್ರಕ್ಕಾಗಿ ಟ್ರಾನ್ಸ್ ಫಾರ್ಮೇಷನ್ ಆಗಲು ಹೇಳಿದ್ದಾರೆ. ನಾನು ಈಗಾಗಲೇ ಕೆಲಸ ಪ್ರಾರಂಭಿಸಿದ್ದೇನೆ. ಮುಂದಿನ ಕೆಲವು ತಿಂಗಳುಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ,  ಆ ನಂತರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುತ್ತೇವೆ. ಚಿತ್ರ, ಮತ್ತು ವಿಶೇಷವಾಗಿ ನನ್ನ ಪಾತ್ರದ ಬಗ್ಗೆ ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿದ್ದಾರೆ

ಗಾಯಕಿ ಮಂಗ್ಲಿ ಈಗ ನಾಯಕಿ; ನಿರ್ದೇಶಕ ನಾಗಶೇಖರ್ ಜೊತೆ ನಟನೆ

ಈ ಸಿನಿಮಾ ಹೇಗಿರಲಿದೆ ನಾಯಕಿಯಾಗಿ ಯಾರು ಎಂಟ್ರಿ ಕೊಡಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ನಿಂತಿರುವ ಪಾದರಾಯ ಸಿನಿಮಾ ಯಾವಾಗ ಸೆಟ್ಟೇರಲಿದೆ, ಗಾಯಕಿ ಮಂಗ್ಲಿ ಅವರೇ ನಾಯಕಿಯಾಗಿ ಮುಂದುವರೆಯುತ್ತಾರಾ ಎಂದು ಕಾದುನೋಡಬೇಕಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ