ನಾನೇ ದರ್ಶನ್‌ಗೆ ಹಣ ನೀಡಿ ಸಿನಿಮಾ ಮಾಡೋ ಶಕ್ತಿ ಇರುವಾಗ ಇಂಥ ಸುದ್ದಿ ಯಾಕೆ ಬೇಕು?

By Shriram Bhat  |  First Published Dec 23, 2024, 2:13 PM IST

ಏನೇನೋ ಸುಖಾಸುಮ್ಮನೇ ಹೀಗೆಲ್ಲ ಓಡಾಡುವ ಗಾಸಿಪ್‌ಗಳಿಗೆ, ಹಬ್ಬಿಸುವ ವದಂತಿಗಳಿಗೆ ಉತ್ತರ ಕೊಟ್ಟುಕೊಂಡು ನಾನು ಕುಳಿತಿರೋದಕ್ಕೆ ಆಗುತ್ತಾ ಹೇಳಿ? ಅಲ್ಲದೆ ಇಲ್ಲಿವರೆಗೂ ನಮ್ಮ ಬಗ್ಗೆ ಮಾಡಿರುವ ಸುದ್ದಿಗಳಲ್ಲಿ, ಮಾಡಿರುವ ಆರೋಪಗಳಲ್ಲಿ ಅದೆಷ್ಟು ನಿಜ ಇತ್ತು, ಇದೆ?  ಸುಮ್ಮನೆ ಮಾತಾಡೋರು..


ಈಗ ಮಾತಾಡೋ ಟೈಮ್ ಬಂದಿದೆ ಎಂಬಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ (Dinakar Thoogudeepa) ದಿನಕರ್ ತೂಗುದೀಪ. ನಟ ದರ್ಶನ್‌ (Darshan Thoogudeepa) ಅವರು ಸದ್ಯ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದು, ಅನಾರೋಗ್ಯದ ನಿಮಿತ್ತ ತಮ್ಮ ಮೈಸೂರಿನ ಫಾರಂ ಹೌಸ್‌ಗೆ ಶಿಫ್ಟ್ ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಆರೋಪಿಯಾಗಿ ಜೈಲು ಸೇರಿ ಈಗ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದು ಬಹುತೇಕ ಎಲ್ಲರಿಗೂ ಗೊತ್ತಿದೆ. ಸದ್ಯ, ನಟ ದರ್ಶನ್ ಅವರ ಮುಂದಿನ ವೃತ್ತಿ ಬದುಕಿನ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆಯೇ ಕೇಳಿದ ಪ್ರಶ್ನೆಗೆ ದಿನಕರ್ ತೂಗುದೀಪ ಉತ್ತರ ಕೊಟ್ಟಿದ್ದಾರೆ. 

'ಒಡಹುಟ್ಟಿದ ತಮ್ಮನಿಗೆ ವಾಸಕ್ಕೆ ಸ್ವಂತ ಮನೆ ಇಲ್ಲ. ದಿನಕರ್ ಅವ್ರು ಸಿಂಗಲ್ ರೂಮ್ ಬಾಡಿಗೆ ಮನೆಯಲ್ಲಿದ್ದಾರೆ. ದರ್ಶನ್ ಅವರು ಯಾರೋ ಬೇರೆಯವರಿಗೆ 10 ಕೋಟಿ ಮನೆ ಕೊಡಿಸಿದ್ದಾರೆ...ಹೀಗಂತ ದರ್ಶನ್‌ ಅವರು ಜೈಲಿಗೆ ಹೋದ ಸಂದರ್ಭದಲ್ಲಿ ಓಡಾಡಿದ ಈ ಸುದ್ದಿ ಬಗ್ಗೆ ಏನು ಹೇಳುತ್ತೀರಿ?' ಎಂಬ ಪ್ರಶ್ನೆಗೆ ಮಾರ್ಮಿಕ ಉತ್ತರ ನೀಡಿದ್ದಾರೆ ದಿನಕರ್ ತೂಗುದೀಪ. 

Tap to resize

Latest Videos

undefined

'ಯುಐ' ಬಗ್ಗೆ ಇವ್ರ ವಿಮರ್ಶೆ ಕೇಳಿದ್ರೆ ನೋಡೋದು ಬೇಡ ಅಂದ್ಕೊಂಡಿದ್ರೂ ನೀವು ಹೋಗ್ತೀರಾ!

ಏನೇನೋ ಸುಖಾಸುಮ್ಮನೇ ಹೀಗೆಲ್ಲ ಓಡಾಡುವ ಗಾಸಿಪ್‌ಗಳಿಗೆ, ಹಬ್ಬಿಸುವ ವದಂತಿಗಳಿಗೆ ಉತ್ತರ ಕೊಟ್ಟುಕೊಂಡು ನಾನು ಕುಳಿತಿರೋದಕ್ಕೆ ಆಗುತ್ತಾ ಹೇಳಿ? ಅಲ್ಲದೆ ಇಲ್ಲಿವರೆಗೂ ನಮ್ಮ ಬಗ್ಗೆ ಮಾಡಿರುವ ಸುದ್ದಿಗಳಲ್ಲಿ, ಮಾಡಿರುವ ಆರೋಪಗಳಲ್ಲಿ ಅದೆಷ್ಟು ನಿಜ ಇತ್ತು, ಇದೆ?  ಸುಮ್ಮನೆ ಮಾತಾಡೋರು ಮಾತನಾಡಲಿ, ಸಮಯ ಬಂದಾಗ ಸತ್ಯದ ಅರಿವಾಗುತ್ತದೆ. ನನ್ನ 'ಜೊತೆ ಜೊತೆಯಲಿ' ಸಿನಿಮಾವನ್ನು ನಾನೇ ನಿರ್ಮಿಸಿದ್ದು. ಆಗ ನಮ್ಮ ತಾಯಿ ಒಂದು ಮಾತು ಹೇಳಿದರು, 'ನಿಮ್ಮ ತಂದೆ ಜೀವಪೂರ್ತಿ ದುಡಿದ ದುಡ್ಡನ್ನು ನೀನು ಒಂದೇ ಚಿತ್ರದಲ್ಲಿ ದುಡಿದೆ' ಅಂತ. 

ಇನ್ನು 'ಬುಲ್ ಬುಲ್‌', 'ನವಗ್ರಹ' ಸೇರಿ ಇಲ್ಲಿವರೆಗೂ ನಾನು 3 ಸಿನಿಮಾ ನಿರ್ಮಿಸಿದ್ದೇನೆ. ಎಲ್ಲ ಮುೂರು ಸಿನಿಮಾ ಕೂಡ ಬ್ಲಾಕ್‌ ಬಾಸ್ಟರ್ ಹಿಟ್‌. ಹತ್ತು ವರ್ಷಗಳ ಹಿಂದೆಯೇ ನಾನು ಫಾರ್ಚುನರ್ ಕಾರು ತೆಗೆದುಕೊಂಡಿದ್ದೇನೆ. ನಾಳೆಯಿಂದ ನಾನು ಸಿನಿಮಾ ಮಾಡಲ್ಲ ಅಂತ ಮನೆಯಲ್ಲಿ ಕೂತರೂ ರಾಯಲ್‌ ಆಗಿಯೇ ಬದುಕುತ್ತೇನೆ. ಈಗ ಹೇಳಿ ನನಗೆ ಸ್ವಂತ ಮನೆ ಮಾಡಿಕೊಳ್ಳೋದು ಕಷ್ಟನಾ? ದರ್ಶನ್‌ ನನಗೆ ಮನೆ ಕೂಡ ಮಾಡಿಕೊಟ್ಟಿಲ್ಲ ಅಂತಾರಲ್ಲ, ಅವರಿಗೆ ಒಂದು ಮಾತು ಹೇಳುತ್ತೇನೆ. ಯಾವುದಾದರೂ ಮನೆ, ಪ್ರಾಪರ್ಟಿ ತೋರಿಸಿ ನನಗೆ ಇದು ಬೇಕು ದರ್ಶನ್‌ ಅಂದರೆ ಐದು ನಿಮಿಷ ಯೋಚನೆ ಕೂಡ ಮಾಡದೆ ನನಗೆ ಕೊಡಿಸುತ್ತಾನೆ.

ಶಿವರಾಜ್‌ಕುಮಾರ್-ವಿನೋದ್ ರಾಜ್‌ ಭೇಟಿ ವೇಳೆ ಯಾವ ಗುಟ್ಟು ಹೊರಬಿತ್ತು? ಓಹೋ, ಇದಾ ವಿಷ್ಯ?

ಆದರೆ, ನನಗೆ ಈ ಸುಮ್ಮನೆ ಏನೇನೋ ಮಾತನಾಡುವ ಜನರು ಹೇಳಬೇಕು.. ನಾನು ಯಾಕೆ ನನ್ನ ಅಣ್ಣನಿಂದ ಅವೆಲ್ಲವನ್ನೂ ನಿರೀಕ್ಷೆ ಮಾಬೇಕು? ಯಾಕೆ ಅವರಿಂದ ಸೇವೆ ಮಾಡಿಸಿಕೊಳ್ಳಬೇಕು? ನಾನು ತುಂಬಾ ಸ್ವಾಭಿಮಾನಿ. ಯಾರ ಮುಂದೆಯೂ ನಾನು ಕೈ ಒಡ್ಡಲ್ಲ. ಇನ್ನು, ದರ್ಶನ್‌ ಸೆಲ್ಪ್‌ ಮೇಡ್‌ ವ್ಯಕ್ತಿ. ನನ್ನದು ಅದೇ ರಕ್ತ. ನನ್ನ ದುಡಿಮೆಯಲ್ಲಿ ನಾನು ಬದುಕಬೇಕು, ನನ್ನ ದುಡಿಮೆ, ನನ್ನ ಕುಟುಂಬ, ನನ್ನ ಮಕ್ಕಳು ಅಂತ ಯೋಚನೆ ಮಾಡುತ್ತೇನೆ. ದರ್ಶನ್‌ಗೆ ನಾನೇ ಸಂಭಾವನೆ ಕೊಟ್ಟು ಸಿನಿಮಾ ಮಾಡುವಷ್ಟು ಶಕ್ತಿ ಇದ್ದಾಗ ದರ್ಶನ್‌ ನನಗೆ ಯಾಕೆ ಆಸ್ತಿ ಮಾಡಿ ಕೊಡಬೇಕು ಅಥವಾ ಕೊಡಿಸಬೇಕು?

ಇನ್ನು, ನಟ 'ದರ್ಶನ್‌ ಅವರು ಯಾವಾಗ ಸಿನಿಮಾ ಶೂಟಿಂಗ್‌ಗೆ ಹಾಜರಾಗಬಹುದು?' ಎಂಬ ಪ್ರಶ್ನೆಗೆ 'ಆ ಬಗ್ಗೆ ನಾವು ಇನ್ನೂ ಪರಸ್ಪರ ಮಾತನಾಡಿಕೊಂಡಿಲ್ಲ. ಏಕೆಂದರೆ ಅವರಿಗೆ ಚಿಕಿತ್ಸೆ ಆಗಬೇಕಿದೆ. ಅದಕ್ಕೆ ಒಂದೂವರೆ ತಿಂಗಳು ಬೇಕಾಗುತ್ತದೆ ಅಂತ ಹೇಳುತ್ತಿದ್ದಾರೆ. ಹೀಗಾಗಿ ಈಗಲೇ ಆ ಬಗ್ಗೆ ಏನೂ ಹೇಳಲಾಗದು. ಸಮಯ ಬಂದಾಗ ಎಲ್ಲವೂ ಬಹಿರಂಗವಾಗುತ್ತದೆ, ಭವಿಷ್ಯ ನುಡಿಯುವುದು ಕಷ್ಟ' ಎಂದಿದ್ದಾರೆ ದಿನಕರ್ ತೂಗುದೀಪ. 

ವರದಪ್ಪ ಅಂದು ಹೇಳಿದ್ದ ಮಾತನ್ನು ನಾನು ಎಂದಿಗೂ ಮರೆಯೊಲ್ಲ: ಪಾರ್ವತಮ್ಮ ರಾಜ್‌ಕುಮಾರ್

ಇನ್ನು, ಇತ್ತೀಚೆಗೆ ಮರು ಬಿಡುಗಡೆಯಾದ ಚಿತ್ರಗಳ ಪೈಕಿ ಅತಿ ಹೆಚ್ಚು ಗಳಿಕೆ ಮಾಡಿದ್ದ ಎರಡನೇ ಚಿತ್ರ ನಮ್ಮ 'ನವಗ್ರಹ.' ಮೊದಲ ಚಿತ್ರ ಪುನೀತ್‌ರಾಜ್‌ಕುಮಾರ್‌ ನಟನೆಯ 'ಜಾಕಿ', ಇದು ನನಗೆ ತುಂಬಾ ಖುಷಿ ಕೊಟ್ಟಿದೆ.  ಎಂಬ ಸೀಕ್ರೆಟ್‌ ಕೂಡ ಹೇಳಿದ್ದಾರೆ ನಿರ್ದೇಶಕ ದಿನಕರ್ ತೂಗುದೀಪ. ಈ ಮೂಲಕ ಹಲವರ ಮನಸ್ಸಿನಲ್ಲಿ ಮೂಡಿದ್ದ, ಓಡಾಡುತ್ತಿದ್ದ ಪ್ರಶ್ನೆಗಳಿಗೆ, ಸಂದೇಹಗಳಿಗೆ ಹಾಗೂ ಗಾಸಿಪ್‌ಗಳಿಗೆ ಉತ್ತರ ನೀಡಿದ್ದಾರೆ. 
 

click me!