ಪವಿತ್ರಾ ಗೌಡ ಮದುವೆಯಾಗಿ ಡಿವೋರ್ಸ್ ಮಾಡಿಕೊಂಡಿರುವುದು ಸಂಜಯ್ ಸಿಂಗ್ ಎಂಬ ವ್ಯಕ್ತಿಯ ಜತೆ ಎಂಬ ಮಾಹಿತಿ ಇದೆ. ಆದರೆ ಸ್ವತಃ ಪವಿತ್ರಾ ಗೌಡ ಅವರು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಎಲ್ಲಿಯೂ 'ಸಂಜಯ್ ಸಿಂಗ್' ಹೆಸರನ್ನು ಬಳಸಿಲ್ಲ.
ಮಾಡೆಲ್ ಹಾಗೂ ನಟಿ ಪವಿತ್ರಾ ಗೌಡ (Pavithra Gowda) ಸದ್ಯ ಭಾರೀ ಟ್ರೆಂಡಿಂಗ್‌ನಲ್ಲಿ ಸುದ್ದಿಯಾಗ್ತಿದಾರೆ. ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijayalakshmi Darshan) ಜತೆ ಸೋಷಿಯಲ್ ಮೀಡಿಯಾ ಕಾಂಟ್ರೋವರ್ಸಿ (Parvithra Gowda and Vijayalakshmi Darshan Controversy) ಮಾಡಿಕೊಂಡಿರುವ ಪವಿತ್ರಾ ಗೌಡ, ಇಂದು ಸಖತ್ ಸುದ್ದಿಯಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ನಟಿ ಪವಿತ್ರಾ ಗೌಡ ಸೋಷಿಯಲ್ ಮೀಡಿಯಾ ಮೂಲಕ ಸುದ್ದಿಯಾಗಿದ್ದರು.
ಅವರಿಗೆ ಸಾಥ್ ಎನ್ನವಂತೆ 'ಡಿ ಬಾಸ್' ಫ್ಯಾನ್ಸ್, ವಿಜಯಲಕ್ಷ್ಮೀ ಫ್ಯಾನ್ಸ್ ಹಾಗೂ ಪವಿತ್ರಾ ಗೌಡ ಪರವಾಗಿರುವ ಕೆಲವರು ಕಾಮೆಂಟ್ ಮೇಲೆ ಕಾಮೆಂಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ರಂಪಾಟ ನಡೆಸಿದ್ದರು. ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮೀ, ಅವರಿಬ್ಬರ ಕಡೆಯವರ ಕಿತ್ತಾಟ ಅದೆಷ್ಟು ಜೋರಾಗಿದೆ ಎಂದರೆ ರೋಡ್ ರೋಡ್‌ನಲ್ಲಿ ಜನರು ಈ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಬಹಳಷ್ಟು ಜನರು ಈ ಸಂಗತಿ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲದಿಂದ ಸೋಷಿಯಲ್ ಮೀಡಿಯಾವನ್ನೇ ಮನೆ ಮಾಡಿಕೊಂಡಿದ್ದಾರೆ.
ದರ್ಶನ್ (Challenging Star) ಪತ್ನಿ ವಿಜಯಲಕ್ಷ್ಮೀ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಆದರೆ, ಪವಿತ್ರಾ ಗೌಡ ಯಾರು? ಹಲವರಿಗೆ ಇದು ಪ್ರಶ್ನೆಯಾಗಿ ಕಾಡುತ್ತಿದ್ದು ಮಾಹಿತಿಗಾಗಿ ಹುಡುಕಾಡುತ್ತಿದ್ದಾರೆ. ಪವಿತ್ರಾ ಗೌಡ ಮೊದಲು ಮಾಡೆಲ್, ಆಮೇಲೆ ನಟಿ. 'ಅಗಮ್ಯ' ಕನ್ನಡ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಪವಿತ್ರಾ ಗೌಡ ಬಳಿಕ 'ಛತ್ರಿಗಳು ಸಾರ್ ಛತ್ರಿಗಳು', ಪ್ರೀತಿ ಕಿತಾಬು ಹಾಗೂ ತಮಿಳಿನ '54321' ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ ಸಂಜಯ್ ಸಿಂಗ್ ಎಂಬವರನ್ನು ಮದುವೆಯಾಗಿದ್ದಾರೆ ಎನ್ನಲಾಗಿದೆ.
ಪುಟ್ಟಣ್ಣರ ಪತ್ನಿಯಾಗಿದ್ದ ನಟಿ ಆರತಿ ಅಮೆರಿಕಾದಲ್ಲಿ ಏನ್ಮಾಡ್ತಿದಾರೆ; ಕೋಲಾರಕ್ಕೆ ಯಾಕೆ ಬರ್ತಾರೆ!?
ನೆನಪಿರಲಿ, ಪವಿತ್ರಾ ಗೌಡ ಮದುವೆಯಾಗಿ ಡಿವೋರ್ಸ್ ಮಾಡಿಕೊಂಡಿರುವುದು ಸಂಜಯ್ ಸಿಂಗ್ ಎಂಬ ವ್ಯಕ್ತಿಯ ಜತೆ ಎಂಬ ಮಾಹಿತಿ ಇದೆ. ಆದರೆ ಸ್ವತಃ ಪವಿತ್ರಾ ಗೌಡ ಅವರು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಎಲ್ಲಿಯೂ 'ಸಂಜಯ್ ಸಿಂಗ್' ಹೆಸರನ್ನು ಬಳಸಿಲ್ಲ, ಸಂಜಯ್ ಎಂದಷ್ಟೇ ಬಳಸಿದ್ದಾರೆ. ತಮ್ಮ ಮಗಳ ಹೆಸರು ಖುಷಿ ಗೌಡ ಎಂದು ಬರೆದುಕೊಂಡಿದ್ದಾರೆ. ತಾವು ಸಂಜಯ್ ಜತೆ ಡಿವೋರ್ಸ್ ಮಾಡಿಕೊಂಡಿದ್ದು, ದರ್ಶನ್ ಶ್ರೀನಿವಾಸ್ ಗೌಡ ಅವರ ಜತೆ ಇಷ್ಟಪಟ್ಟು ಬಾಳುವೆ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಇಲ್ಲಿಯವರಗೂ ಖುಷಿ ಗೌಡ 'ದರ್ಶನ್ ಶ್ರೀನಿವಾಸ'ರವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ; ಪವಿತ್ರಾ ಗೌಡ
ನಟಿ ಪವಿತ್ರಾ ಗೌಡ ಅವರು ಸ್ವಂತ ಬೊಟಿಕ್ (Boutique)ನಡೆಸುತ್ತಿದ್ದು, ಹೆಸರು 'ರೆಡ್ ಕಾರ್ಪೆಟ್ ಸ್ಟುಡಿಯೋಸ್- 777' ಎನ್ನಲಾಗಿದೆ. ಅಲ್ಲಿ ವುಮೆನ್ಸ್ ಸ್ಪೆಷಲ್, ಇಂಡಿಯನ್ ಟ್ರೆಡಿಷನಲ್, ವೆಸ್ಟರ್ನ್ ಹಾಘು ಇಂಡೋ ವೆಸ್ಟರ್ನ್ ಗಾರ್ಮೆಂಟ್ಸ್ ದೊರೆಯುತ್ತವೆ ಎಂಬ ಮಾಹಿತಿಯಿದೆ. ಪವಿತ್ರಾ ಗೌಡ ಬಾಟಿಕ್‌ನಲ್ಲಿ ದೊರಕುವ ಪ್ರಾಡಕ್ಟ್‌ಗಳಿಗೆ ಆ ಏರಿಯಾದಲ್ಲಿ ಒಳ್ಳೆಯ ಬೇಡಿಕೆಯಿದೆ ಎನ್ನಲಾಗಿದೆ. ಒಟ್ಟಿನಲ್ಲಿ, ಸದ್ಯ ಬಣ್ಣದ ಲೋಕದಿಂದ ತುಸು ದೂರವಿರುವ ಪವಿತ್ರಾ ಗೌಡ 'ಬಿಸನೆಸ್ ವುಮೆನ್' ಆಗಿ ಗುರುತಿಸಿಕೊಂಡಿದ್ದಾರೆ.
ಮಕ್ಳ ನಂಬ್ಕೊಂಡು ಗೌರಿ ಶ್ರೀನಿವಾಸ್ ಬರ್ತಿದಾರೆ, ಜಾಗ ಬಿಡಿ; ಮರಿಬೇಡಿ..,ಹೆಣ್ಮಕ್ಳೇ ಸ್ಟ್ರಾಂಗು ಗುರೂ!