ಸದ್ದಿಲ್ಲದೇ ಓಟಿಟಿಯಲ್ಲಿ ಸಪ್ತದಾಗರದಾಚೆ ಬಿ-ಸೈಡ್​ ಬಿಡುಗಡೆ​: ಫುಲ್​ ಡಿಟೇಲ್ಸ್​ ಇಲ್ಲಿದೆ...

By Suvarna NewsFirst Published Jan 26, 2024, 4:57 PM IST
Highlights

ಸಪ್ತಸಾಗರದಾಚೆ ಬಿ-ಸೈಡ್​ ಚಿತ್ರವು ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ. 
 

ಬ್ಲಾಕ್​ ಬಸ್ಟರ್​ ಎಂದೇ ಸಾಬೀತಾಗಿದ್ದ ಸಪ್ತಸಾಗರದಾಚೆ ಎಲ್ಲೋ ಸೈಡ್​ ಎ ಬಳಿಕ ಇದೀಗ ಪಾರ್ಟ್​ ಬಿ ಕೂಡ ಸಕತ್​ ಸೌಂಡ್​ ಮಾಡಿತ್ತು.  ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ನಟನೆಯ ಪ್ರೇಮಕಾವ್ಯದ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಫ್ಯಾನ್ಸ್​ ಮೆಚ್ಚಿ ಕೊಂಡಾಡುತ್ತಿದ್ದಾರೆ. ರಕ್ಷಿತ್​ ಶೆಟ್ಟಿ, ಹೇಮಂತ್​ ಎಂ. ರಾವ್​, ರುಕ್ಮಿಣಿ ವಸಂತ್​, ಚೈತ್ರಾ ಜೆ. ಆಚಾರ್​, ಅದ್ವೈತ್​ ಗುರುಮೂರ್ತಿ ಸೇರಿದಂತೆ ಹಲವು ಕಲಾವಿದರನ್ನು ಒಳಗೊಂಡಿರುವ ಈ ಚಿತ್ರವನ್ನು ಇದಾಗಲೇ ಹಲವರು ಹಾಡಿ ಹೊಗಳಿದ್ದಾರೆ. ರಕ್ಷಿತ್ ಶೆಟ್ಟಿ   ಈ ಸಿನಿಮಾದಲ್ಲಿ ಮನು ಎಂಬ ಪಾತ್ರ ಮಾಡಿದ್ದಾರೆ. ಪ್ರೀತಿಗಾಗಿ ಮತ್ತು ಪ್ರೀತಿಸಿದವಳಿಗಾಗಿ ಜೀವನದಲ್ಲಿ ಸಾಕಷ್ಟು ರಿಸ್ಕ್​ಗಳನ್ನು ತೆಗೆದುಕೊಳ್ಳುವ ಆ ಪಾತ್ರವನ್ನು ರಕ್ಷಿತ್​ ಶೆಟ್ಟಿ ಅವರು ಚೆನ್ನಾಗಿ ನಿಭಾಯಿಸಿದ್ದಾರೆ.  

2023ರ ನವೆಂಬರ್ 17ರಂದು ತೆರೆಕಂಡಿದ್ದ ಈ ಸಿನಿಮಾ ಯಾವಾಗ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಫ್ಯಾನ್ಸ್​ ಕಾಯುತ್ತಿದ್ದರು. ಥಿಯೇಟರ್​ನಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್​ ಬಿ’ ಸಿನಿಮಾವನ್ನು ಮಿಸ್ ಮಾಡಿಕೊಂಡವರು ಈಗ ಒಟಿಟಿಯಲ್ಲಿ ನೋಡಿ ಎಂಜಾಯ್​ ಮಾಡಬಹಾಗಿದೆ. ಇದಕ್ಕೆ ಕಾರಣ ಈಗ ಓಟಿಟಿಯಲ್ಲಿ ಸಿನಿಮಾ ಲಭ್ಯವಾಗಲಿದೆ. ಹೆಚ್ಚು ಸದ್ದು ಗದ್ದಲವಿಲ್ಲದೇ ಇದಾಗಲೇ ಸ್ಟ್ರೀಮಿಂಗ್​ ಶುರುವಾಗಿಬಿಟ್ಟಿದೆ. ನಿನ್ನೆಯಿಂದ ಅಂದರೆ ಜನವರಿ 25ರ ರಾತ್ರಿಯಿಂದಲೇ ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್​ ಬಿ’ ಸಿನಿಮಾ ಸ್ಟ್ರೀಮಿಂಗ್​ಆಗಿದೆ.   

ಉಪವಾಸ, ಡಯೆಟ್‌ ಮಾಡದೇ 17 ದಿನದಲ್ಲಿ 4ಕೆ.ಜಿ. ಕಳಕೊಂಡ ರ್‍ಯಾಪಿಡ್‌ ರಶ್ಮಿ ಟಿಪ್ಸ್‌ ಕೇಳಿ...

ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿದವರ ಪೈಕಿ ಕಿಚ್ಚ ಸುದೀಪ್​ ಅವರು ತಮ್ಮದೇ ಆದ ರೀತಿಯಲ್ಲಿ  ಅಭಿಪ್ರಾಯವನ್ನು ತಿಳಿಸಿದ್ದರು. ತಮ್ಮ ಎಕ್ಸ್​ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಕಿಚ್ಚ ಸುದೀಪ್​ ಕತ್ತೆ ಎಂದು ಕೊನೆಯಲ್ಲಿ ತಮಾಷೆಯಾಗಿ ಹೇಳುವ ಮೂಲಕ, ಅಭಿಮಾನದ ಸುರಿಮಳೆಯನ್ನೇ ಈ ಚಿತ್ರಕ್ಕೆ ನೀಡಿದ್ದರು.  ಈ ಚಿತ್ರ  ಮಾಸ್ಟರ್​ ಪೀಸ್​ ಎಂದು ಅವರು ಕರೆದಿದ್ದರು. ಧನ್ಯವಾದಗಳು ರಕ್ಷಿತ್‌ ಶೆಟ್ಟಿ, ಈ ಚಿತ್ರ ನೋಡಿದೆ. ಇದೊಂದು ಮೇರುಕೃತಿ. ಇಂತಹ ಒಂದು ಗಮನಾರ್ಹ ಸಿನಿಮಾ ಅನುಭವಿಸಲು ಅವಕಾಶ ದೊರಕಿರುವುದರಿಂದ ನಿಜಕ್ಕೂ ತುಂಬಾ ಸಂತೋಷವಾಗಿದೆ. ನಿಮಗೆಲ್ಲರಿಗೂ ಚಿಯರ್ಸ್‌ ಎಂದು ಟಿಪ್ಪಣಿ ಬರೆದಿದ್ದ ಸುದೀಪ್‌ ಅವರು,  "ಹೆವಿ ಲವ್ವು- ಅಗಾಧ ಪ್ರೀತಿ, ಎಕ್ಸಲೆಂಟ್‌ ಪರ್ಫಾಮೆನ್ಸ್‌- ಕಲಾವಿದರ ಅತ್ಯುತ್ತಮ ನಟನೆ, ಎಕ್ಸಲೆಂಟ್‌ ಡೈರೆಕ್ಷನ್‌- ಹೇಮಂತ್‌ ರಾವ್‌ ಅವರ ಅದ್ಭುತ ನಿರ್ದೇಶನ, ಎಕ್ಸಲೆಂಟ್‌ ಸಿನಿಮಾಟ್ರೊಗ್ರಫಿ" ಎಂದು ಶ್ಲಾಘನೆ ವ್ಯಕ್ತಪಡಿಸಿದ್ದರು. ಕೊನೆಯಲ್ಲಿ ಅವರು, ‘ಅತ್ಯುತ್ತಮ ನಟನೆ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಛಾಯಾಗ್ರಹಣ. ಇಂಥ ಸಿನಿಮಾ ಮಾಡಲು ಧೈರ್ಯ ತೋರಿಸಿದ ನಿಮ್ಮನ್ನು ನಾನು ಬಹಳ ಗೌರವಿಸುತ್ತೇನೆ. ಹೇಮಂತ್​ ರಾವ್​ ಅವರು ಅದ್ಭುತ ವಿಷನ್​ ಇರುವಂತಹ ನಿರ್ದೇಶಕ. ಕ್ಯಾಪ್ಟನ್​ ಸ್ಥಾನದಲ್ಲಿ ಅವರ ಕೆಲಸ ಪರ್ಫೆಕ್ಟ್​ ಆಗಿದೆ. ನಿಮ್ಮ ಮತ್ತು ನಿಮ್ಮ ತಂಡದ ಬಗ್ಗೆ ಹೆಮ್ಮೆ ಮೂಡಿದೆ. ಕತ್ತೆ’ ಎಂದು ಸುದೀಪ್​ ಅವರು ಪೋಸ್ಟ್​ ಮಾಡಿದ್ದರು. ಸಿನಿಮಾ ತೋರಿಸಿದ ರಕ್ಷಿತ್​ ಶೆಟ್ಟಿಗೆ ಸುದೀಪ್​ ಅವರು ಧನ್ಯವಾದ ತಿಳಿಸಿದ್ದಾರೆ.

ಸುದೀಪ್​ ಅವರ ಈ ಟ್ವೀಟ್​ಗೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗೆ ಮೇರು ನಟನೊಬ್ಬ ಇನ್ನೊಂದು ಚಿತ್ರವನ್ನು ಹಾಡಿ ಹೊಗಳುವುದಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.  ಈ ಚಿತ್ರದಲ್ಲಿ ನಟಿಸಿರುವ  ನಟಿ ಚೈತ್ರಾ ಆಚಾರ್‌ ಕೂಡ ಸುದೀಪ್​ ಅವರ ಟ್ವೀಟ್​ಗೆ ಹರ್ಷ ವ್ಯಕ್ತಪಡಿಸಿದ್ದು, "ಧನ್ಯವಾದ ಸರ್"‌ ಎಂದಿದ್ದಾರೆ. "ಇವತ್ತು ಬೆಳಗ್ಗೆ ನಾನು ನೋಡಿದ ಎಷ್ಟು ಸುಂದರ ಟ್ವೀಟ್‌" ಎಂದು ಶ್ರೀಕಂಠ ಆರಾಧ್ಯ ಪ್ರತಿಕ್ರಿಯೆ ನೀಡಿದ್ದಾರೆ. ಅದೇ ರೀತಿ ಸುದೀಪ್‌ ಅವರು 'ಕತ್ತೆ' ಎಂದು ಬರೆದಿರುವ ಬಗ್ಗೆಯೂ ಸಾಕಷ್ಟು ಅಭಿಪ್ರಾಯ ವ್ಯಕ್ತವಾಗಿದ್ದು, ಇಷ್ಟು ಪ್ರೀತಿಯ ಮಾತನಾಡಿರುವ ತಮಗೆ ಧನ್ಯವಾದ, ಒಳ್ಳೆಯ ಕಲಾವಿದನ ಮನಸ್ಸು ಇದು ಎಂದೆಲ್ಲಾ ಹರ್ಷ ವ್ಯಕ್ತಪಡಿಸಿದ್ದಾರೆ.  ಕತ್ತೆ ಎನ್ನುವುದು ಪದವಲ್ಲ, ಅದೊಂದು ಭಾವನೆ ಎಂದಿದ್ದಾರೆ.  

ನ್ಯೂಯಾರ್ಕ್​ ಟೈಂಸ್ಕ್ವೇರ್​ನಲ್ಲಿ ಅಪ್ಪು ಜೊತೆ ಅನು... ಹುಟ್ಟುಹಬ್ಬಕ್ಕೆ ಮರೆಯಲಾಗದ ಗಿಫ್ಟ್​: ನಟಿ ಹೇಳಿದ್ದೇನು?
 

click me!