ಕನ್ನಡದ ಈ ನಟನ ಜೊತೆ ಮೇಘನಾ ರಾಜ್ ಮದುವೆ ವದಂತಿ: ಸತ್ಯಾಂಶ ಬಿಚ್ಚಿಟ್ಟ ನಟಿ!

Published : Mar 10, 2025, 06:56 PM ISTUpdated : Mar 10, 2025, 08:30 PM IST
ಕನ್ನಡದ ಈ ನಟನ ಜೊತೆ ಮೇಘನಾ ರಾಜ್ ಮದುವೆ ವದಂತಿ: ಸತ್ಯಾಂಶ ಬಿಚ್ಚಿಟ್ಟ ನಟಿ!

ಸಾರಾಂಶ

ನಟಿ ಮೇಘನಾ ರಾಜ್ ಅವರು ಇತ್ತೀಚಿನ ಸಂದರ್ಶನದಲ್ಲಿ ತಮ್ಮ ಮದುವೆಯ ವದಂತಿಗಳ ಬಗ್ಗೆ ಮಾತನಾಡಿದ್ದಾರೆ. ಕನ್ನಡದ ನಟರೊಬ್ಬರನ್ನು ಮದುವೆಯಾಗುತ್ತಾರೆ ಎಂಬ ವದಂತಿ ಹಬ್ಬಿದ್ದರಿಂದ ಬೇಸರವಾಯಿತು ಎಂದು ಹೇಳಿದ್ದಾರೆ. ಅಲ್ಲದೆ, ಸ್ಟಾರ್ ಕಿಡ್ಸ್‌ಗಳನ್ನು ಕನ್ನಡ ಚಿತ್ರರಂಗದಲ್ಲಿ ಸುಮ್ಮನೆ ದೂಷಿಸುತ್ತಾರೆ ಎಂದಿದ್ದಾರೆ. ನೆಗೆಟಿವ್ ಕಾಮೆಂಟ್ ಮಾಡುವವರ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಮಾ.10): ಕನ್ನಡ ಚಿತ್ರರಂಗದ ನಟಿ ಮೇಘನಾ ರಾಜ್ ಅವರ ಗಂಡ ಚಿರಂಜೀವಿ ಸರ್ಜಾ ನಿಧನದ ನಂತರ ಕನ್ನಡದ ಈ ನಟನನ್ನು ಮದುವೆ ಮಾಡಿಕೊಳ್ಳುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು. ಈ ಬಗ್ಗೆ ಸ್ವತಃ ನಟಿ ಮೇಘನಾ ರಾಜ್ ವದಂತಿಯ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದು, ಅವರ ಪ್ರತಿಕ್ರಿಯೆ ಏನಾಗಿತ್ತು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ಗೋಲ್ಡ್ ಕ್ಲಾಸ್ ವಿತ್‌ ಮಯೂರ ಯೂಟ್ಯೂಬ್ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ನಟಿ ಮೇಘನಾ ರಾಜ್ ಅವರು, ತಮ್ಮ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಹರಡಿದ ಹಲವು ವದಂತಿಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ, ಇತ್ತೀಚೆಗೆ ಮದುವೆ ಮಾಡಿಕೊಂಡ ಕನ್ನಡ ನಟನೊಬ್ಬನನ್ನು ಮೇಘನಾ ರಾಜ್ ಮದುವೆ ಮಾಡಿಕೊಳ್ಳುತ್ತಾರೆ ಎಂದು ವದಂತಿಯನ್ನು ಕೆಲವರು ಹರಡಿದ್ದರು. ಈ ವದಂತಿಯಿಂದ ತುಂಬಾ ಬೇಸರವಾಗಿತ್ತು ಎಂಬುದನ್ನು ನಟಿ ಹೇಳಿಕೊಂಡಿದ್ದಾರೆ. ಆದರೆ, ಈ ವಿಚಾರವನ್ನು ಸಂದರ್ಶನದಲ್ಲಿ ಮುಕ್ತವಾಗಿ ಹೇಳಿಕೊಳ್ಳದೇ ಬ್ರೇಕ್‌ನಲ್ಲಿ ಧನು ಜೊತೆಗೆ ಮದುವೆ ವದಂತಿ ಮಾತನಾಡಿದ್ದಾಗಿ ಹೇಳಿಕೊಂಡಿದ್ದಾರೆ.

ನೆಗೆಟಿವ್ ಕಾಮೆಂಟ್‌ ಮಾಡುವವರಿಗೆ ಪಾಠ: ನಮ್ಮ ಕೆಲವು ವಿಡಿಯೋಗಳಿಗೆ ಕೆಲವರು ನೆಗೆಟಿವ್ ಕಾಮೆಂಟ್‌ಗಳು ಬರುತ್ತವೆ. ಕೆಟ್ಟದಾಗಿ ಕಾಮೆಂಟ್ ಮಾಡುವವರು ಅವರ ಐಡಿ ಸರಿಯಾಗಿ ಇರುವುದಿಲ್ಲ. ಅವರು ನಮ್ಮ ಚಿಂತನೆಯಲ್ಲೇ ಹಾಳು ಮಾಡಿಬಿಡುತ್ತಾರೆ. ನನ್ನ ಬಹಳ ವಿಡಿಯೋಗೆ ಕನ್ನಡವನ್ನು ಹೆಚ್ಚಾಗಿ ಬಳಸಿ ಎಂದು ಕಾಮೆಂಟ್ ಮಾಡುತ್ತಾರೆ. ನಾನು ಬೇಕಂತಲೇ ಇಂಗ್ಲೀಷ್‌ನಲ್ಲಿ ಮಾತನಾಡುವುದಿಲ್ಲ. ಅಗತ್ಯವಿದ್ದ ಕಡೆಗಳಲ್ಲಿ ನಾವು ಬಳಸುತ್ತೇವೆ. ನಾವು ರೆಸ್ಟೋರೆಂಟ್‌ಗೆ ಹೋದಾಗ ಭೋಜನ ತೆಗೆದುಕೊಂಡು ಬನ್ನಿ ಎಂದು ಹೇಳಲು ಸಾಧ್ಯವಾಗುತ್ತದೆಯೇ ಎಂದು ನಟಿ ಮೇಘನಾ ಕಾಮೆಂಟ್ ಮಾಡುವವರ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಧ್ವನಿಗೂಡಿಸಿದ ಆರ್‌.ಜೆ.ಮಯೂರ ಅವರು, ನಮ್ಮ ವಿಡಿಯೋಗೆ ಕಾಮೆಂಟ್‌ ಮಾಡುವವರಿಗಿಂತ ಚೆನ್ನಾಗಿ 'ನಮಗೆ ಅಚ್ಚ ಮತ್ತು ಸ್ವಚ್ಛ ಕನ್ನಡ ಬರುತ್ತದೆ. ನನಗೆ ಕಾಮೆಂಟ್ ಮಾಡುವವರಿಗಿಂತ ಸ್ಪಷ್ಟವಾಗಿ ಕನ್ನಡ ಬರುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 2ನೇ ಮದ್ವೆ ಆಗೋ ಆಲೋಚನೆ ಬಂದಿದ್ದು ಸುಳ್ಳುಲ್ಲ, ಆ ವ್ಯಕ್ತಿ ಸರಿ ಅಂದ್ರೆ ಚಿರು ಒಪ್ಪಿಗೆ ಕೊಡ್ತಾನೆ: ಮೇಘನಾ ರಾಜ್

ಸ್ಟಾರ್ ಕಿಡ್ಸ್‌ಗೆ ಕನ್ನಡ ಚಿತ್ರರಂಗದಲ್ಲಿ ಭಾರೀ ವಿರೋಧ: ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಕಿಡ್ಸ್‌ ಕುರಿತಾಗಿ ಮಾತನಾಡಿದ ನಟಿ ಮೇಘನಾ ಅವರು, ಸಿನಿಮಾದ ಇಂಡಸ್ಟ್ರಿಯಲ್ಲಿ ಸ್ಟಾರ್ ಕಿಡ್ ಆಗಿರುವುದು ತುಂಬಾ ಚಾಲೆಂಜಿಂಗ್ ಆಗಿದೆ. ಸ್ಟಾರ್ ಕಿಡ್ಸ್‌ಗೆ ಸುಖಾಸುಮ್ಮನೆ ದೂಷಣೆ ಮಾಡುತ್ತಿದ್ದಾರೆ. ಸ್ಟಾರ್ ಕಿಡ್ಸ್‌ಗೆ ತುಂಬಾ ಟ್ಯಾಲೆಂಟ್ ಇದ್ದರೂ ಅವರನ್ನು ಜನರು ಒಪ್ಪಿಕೊಳ್ಳುವುದಕ್ಕೆ ಮುಂದೆ ಬರುವುದಿಲ್ಲ. ಜನರು ಅವರನ್ನು ದೂಷಣೆ ಮಾಡುತ್ತಾರೆ. ಬೇರೆ ಬೇರೆ ಸಿನಿಮಾ ಇಂಡಸ್ಟ್ರಿಯಲ್ಲಿ ಹೀಗೆ ಇದೆಯೋ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ, ಕನ್ನಡದಲ್ಲಿ ಸ್ಟಾರ್ ಕಿಡ್ಸ್‌ಗೆ ಜನರು ಭಾರೀ ವಿರೋಧ ವ್ಯಕ್ತಪಡಿಸುತ್ತಾರೆ. ಇನ್ನು 'ಕನ್ನಡದ ಹಲವು ಒಳ್ಳೆಯ ಸಿನಿಮಾಗಳಿಗೆ ವೇದಿಕೆಯೇ ಸಿಗಲಿಲ್ಲ. ಅದರಲ್ಲಿ ಬ್ಲಿಂಕ್ ಕೂಡ ಒಂದಾಗಿದೆ. 

ಇನ್ನು ನಾನು ಈ ಸಂದರ್ಶನ ಕೊಟ್ಟಿದ್ದು ತುಂಬಾ ಖುಷಿಯಾಗಿದೆ. ನಾನು ಇದನ್ನು ತುಂಬಾ ಇಷ್ಟಪಟ್ಟಿದ್ದೇನೆ. ಈ ದಿನ ನನಗೆ ತುಂಬಾ ಒಳ್ಳೆಯ ದಿನವಾಗಿದೆ ಎಂದು ನಟಿ ಮೇಘನಾರಾಜ್ ಹೇಳಿದರು. 'ವೀಕ್ಷಕರೇ ನಟಿ ಮೇಘನಾರಾಜ್ ಅವರಿಗೆ ಹಿಂಗೆಲ್ಲಾ ಪ್ರಶ್ನೆಗಳನ್ನು ಕೇಳಿದ್ದೀರಾ? ಎಂದು ಕೇಳಬೇಡಿ. ಅವರೊಂದಿಗೆ ಉತ್ತರಿಸಲು ಸಾಧ್ಯವಾಗುವಂತಹ ಪ್ರಶ್ನೆಗಳನ್ನು ಕೇಳಿದ್ದೇನೆ ಎಂದು ಗೋಲ್ಡ್‌ಕ್ಲಾಸ್ ಯೂಟೂಬ್ ಸಂದರ್ಶನದ ಆರ್.ಜೆ. ಮಯೂರ ಅವರು ಹೇಳಿದ್ದಾರೆ.

ಇದನ್ನೂ ಓದಿ: ಎರಡು ಫ್ಯಾಮಿಲಿ ನಡುವೆ ಹಲವು ವಿಚಾರಗಳನ್ನು ಸರಿ ಮಾಡಲು ರಾಯನ್ ಬರಬೇಕಿತ್ತು, ಈಗ ಚೆನ್ನಾಗಿದ್ದೀವಿ: ಮೇಘನಾ ರಾಜ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ