'ಪೈಲ್ವಾನ್' ಸಂಕಷ್ಟದಲ್ಲಿ ಕೈ ಹಿಡಿದ ನಟರಿಗೆ ಥ್ಯಾಂಕ್ಸ್ ಹೇಳಿದ ನಿರ್ಮಾಪಕಿ!

Published : Nov 03, 2019, 11:48 AM IST
'ಪೈಲ್ವಾನ್' ಸಂಕಷ್ಟದಲ್ಲಿ ಕೈ ಹಿಡಿದ ನಟರಿಗೆ ಥ್ಯಾಂಕ್ಸ್ ಹೇಳಿದ ನಿರ್ಮಾಪಕಿ!

ಸಾರಾಂಶ

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ 50 ದಿನಗಳನ್ನು ಪೂರೈಸಿದ್ದು ಈ ಸಮಯದಲ್ಲಿ ಎದುರಾದ ಸಂಕಷ್ಟಕ್ಕೆ ಕೈ ಹಿಡಿದ ನಟರಿಗೆ ನಿರ್ಮಾಪಕಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಸ್ಯಾಂಡಲ್‌ವುಡ್‌ ಬ್ಲಾಕ್‌ ಬಾಸ್ಟರ್ ಹಿಟ್ ಸಿನಿಮಾ ಪೈಲ್ವಾನ್ 50 ದಿನಗಳ ಪೂರೈಸಿರುವ ಸಂತಸದ ವಿಚಾರವನ್ನು ನಿರ್ಮಾಪಕಿ ಸ್ವಪ್ನ ಕೃಷ್ಣ ಟ್ಟಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೌದು! ಪೈಲ್ವಾನ್ ರಿಲೀಸ್‌ಗೂ ಮುನ್ನ ಎಷ್ಟು ಸೌಂಡ್ ಮಾಡಿತ್ತೋ ರಿಲೀಸ್‌ ಆದ ನಂತರ ಅದಕ್ಕಿಂತ ಹೆಚ್ಚಾಗಿ ಸೌಂಡ್ ಮಾಡಿತ್ತು. ಸಿನಿಮಾವನ್ನು ರಿಚ್‌ ಆಗಿ ತೆಗೆಯಬೇಕು ಕನ್ನಡ ಚಿತ್ರರಂಗಕ್ಕೆ ಒಂದು ಗೌರವ ತರಬೇಕು ಅದನ್ನು ದೊಡ್ಡ ಮಟ್ಟದಲ್ಲಿ ಬೆಳಸಬೇಕು ಎಂದು ಕನಸು ಕಂಡಿದ್ದು ನಿರ್ಮಾಪಕಿ ಸ್ವಪ್ನ.

ನಿಖಿಲ್‌- ಕೃಷ್ಣ ಜೋಡಿಯ ಸಿನಿಮಾ ಕುರಿತು 8 ಸಂಗತಿಗಳು!

ಮೊದಲ ಚಿತ್ರ ಅಂದ್ಮೇಲೆ ಕೊಂಚ ಅಡೆ ತಡೆಗಳು ಇದಿದ್ದೇ ಅಲ್ವಾ? ಬಿಡುಗಡೆ ಸಮಯದಲ್ಲಿ ಹಣಕಾಸಿನ ತೊಂದರೆ ಬಂದಾಗ ನಿರ್ದೇಶಕಿ ಸ್ವಪ್ನ ಹಾಗೂ ನಿರ್ದೇಶಕ ಕೃಷ್ಣರ ಕೈ ಹಿಡಿದು ಸಾಥ್‌ ಕೊಟ್ಟವರು ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್‌ವುಡ್‌ ಹಂಬಲ್ ಮ್ಯಾನ್ ನಿಖಿಲ್ ಕುಮಾರಸ್ವಾಮಿ.

'ಬಿಡುಗಡೆ ಸಮಯದಲ್ಲಿ ನಮಗೆ ಹಣಕಾಸಿನ ತೊಂದರೆ ಎದುರಾಗಿತ್ತು, ಈ ಸಮಯದಲ್ಲಿ ತಂತ್ರಜ್ಞರನ್ನು ನಂಬಿ ನೀವು ನಮಗೆ ಹಣ ಸಹಾಯ ಮಾಡದಿದ್ದರೆ ಅಂದು ಚಿತ್ರ ರಿಲೀಸ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಮಗೆ ಸಹಾಯ ಮಾಡಿದ್ದಕ್ಕೆ ನಿಮಗೊಂದು ಬಿಗ್ ಥ್ಯಾಂಕ್ಸ್‌ ಯಶ್ ಮತ್ತು ನಿಖಿಲ್ ಕುಮಾರಸ್ವಾಮಿ' ಎಂದು ಬರೆದುಕೊಂಡಿದ್ದಾರೆ.

 

ಒಂದು ಚಿತ್ರದ ಯಶಸ್ಸಿಗೆ ಸಾವಿರಾರು ಜನರ ಶ್ರಮವಿರುತ್ತದೆ ಅದಕ್ಕೆ ಬಂಡವಾಳ ಹಾಕಬೇಕೆಂದರೆ ಮೊದಲು ತಂಡದಲ್ಲಿ ಕೆಲಸ ಮಾಡುವವರನ್ನು ನಂಬುವುದು. ಚಿತ್ರರಂಗದಲ್ಲಿ ನಂಬಿಕೆಯೇ ಜೀವನ. ಸ್ವಪ್ನ ಹಾಗೂ ಕೃಷ್ಣರನ್ನು ನಂಬಿದವರು ಯಶ್ ಹಾಗೂ ನಿಖಿಲ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ