ಪೂಜಾ ಮದುವೆ ಆಗಿದ್ದು ಒಬ್ರನ್ನ ಆದ್ರೆ ಗೂಗಲ್‌ ತೋರಿಸ್ತಾ ಇರೋದೇ ಇನ್ನೊಬ್ರನ್ನ!

Published : Nov 04, 2019, 07:40 PM IST
ಪೂಜಾ ಮದುವೆ ಆಗಿದ್ದು ಒಬ್ರನ್ನ ಆದ್ರೆ ಗೂಗಲ್‌ ತೋರಿಸ್ತಾ ಇರೋದೇ ಇನ್ನೊಬ್ರನ್ನ!

ಸಾರಾಂಶ

  ಮಳೆಯಲ್ಲಿ ಕುಣಿಯುತ್ತ ಸ್ಯಾಂಡಲ್‌ವುಡ್‌ಗೆ ಮುಂಗಾರು ತಂದ ನಟಿ ಪೂಜಾ ಗಾಂಧಿ ವೈವಾಹಿಕ ಜೀವನದ ಬಗ್ಗೆ ಗೂಗಲ್‌ ತೋರಿಸುತ್ತಿರುವ ಮಾಹಿತಿ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಇಲ್ಲಿ ಯಾರು ಯಾರಿಗೆ ಏನಾಗಬೇಕು ಅನ್ನೋದೆ ಗೊತ್ತಾಗುತ್ತಿಲ್ಲ.

 

ಯೋಗರಾಜ್‌ ಭಟ್ ಆ್ಯಕ್ಷನ್‌ ಕಟ್‌ ಹೇಳಿದ 'ಮುಂಗಾರು ಮಳೆ' ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು. ಇದಾದ ಮೇಲೆ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ಹೆಚ್ಚಾಗಿ ಸೌಂಡ್‌ ಮಾಡಿದ್ದು ಮಾತ್ರ 'ದಂಡುಪಾಳ್ಯ- 2'ಮತ್ತು 'ದಂಡುಪಾಳ್ಯ- 3'.

ಸೈಲೆಂಟಾಗಿ ಫೈಟಿಂಗ್‌ ಮುಗಿಸಿ ಬಂದ ನಟಿ!

 

ಮಳೆ ಹುಡುಗಿ ಎಲ್ಲೋದ್ರೂ ಸೌಂಡಿಲ್ಲ ಎಂದು ಅಭಿಮಾನಿಗಳು ಕೇಳುತ್ತಿದ್ದ ಪ್ರಶ್ನೆಗೆ ಪೂಜಾ ಗಾಂಧಿ ಸಾಹಸ ಹುಡುಗಿಯಾಗಿ 'ಸಿಂಹಾರಿಣಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದರ ಪೋಸ್ಟರ್ ಕೂಡಾ ರಿಲೀಸ್ ಮಾಡಿದ್ದರು ಆದರೆ ಚಿತ್ರ ತೆರೆಕಾಣಲಿಲ್ಲ. ಅದರ ಬಗ್ಗೆ ಯಾವ ಸುದ್ದಿಯೂ ಇಲ್ಲ. ಇದೀಗ ಮತ್ತೆ ಯಾಕೆ ಪೂಜಾ ಗಾಂಧಿ ವಿಚಾರ ಅಂತಾನಾ? ಇಲ್ಲಿದೆ ನೋಡಿ.

 

ಬಾಲಿವುಡ್‌ ಹೆಸರಾಂತ ನಟ ಸನ್ನಿ ಡಿಯೋಲ್‌ ಪತ್ನಿಯಾರೆಂದು ಗೂಗಲ್‌ನಲ್ಲಿ ಹುಡುಕಿದರೆ ಅದು ಪೂಜಾ ಡಿಯೋಲ್‌ ಎಂದು ಪೂಜಾ ಗಾಂಧಿ ಫೋಟೋ ತೋರಿಸುತ್ತಿದೆ. ಹೌದು! ಸನ್ನಿ ಪತ್ನಿ ಹೆಸರು ಲಿಂಡಾ ಡಿಯೋಲ್‌ ಅಲಿಯಾಸ್‌ ಪೂಜಾ ಡಿಯೋಲ್‌ ಆದರೆ ಫೋಟೋ ಮಾತ್ರ ಪೂಜಾ ಗಾಂಧಿಯದ್ದು ತೋರಿಸುತ್ತಿದೆ. ಇದೆಂಥಾ ಎಡವಟ್ಟು ಮರಾಯ್ರೆ!

ಪೂಜಾ ಗಾಂಧಿ ಈ ಹಿಂದೆ ಆನಂದ್‌ ಎಂಬುವರ ಜೊತೆ ನಿಶ್ಛಿತಾರ್ಥ ಮಾಡಿಕೊಂಡು ಕಾರಣ ಬಹಿರಂಗಪಡಿಸದೆ ಮದುವೆಗೆ ಬಿಗ್‌ ಬ್ರೇಕ್‌ ಹಾಕಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?