ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಂಭಾವನೆಯ ವಿಚಾರ, ಸ್ಯಾಂಡಲ್‌ವುಡ್‌ಗಿಂತಾ ಟಾಲಿವುಡ್‌ನಲ್ಲೇ ಡಿಮ್ಯಾಂಡ್ ಜಾಸ್ತಿ ಆಯ್ತಾ?
ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಏಳು ಬೀಳುಗಳನ್ನು ನೋಡಿರುವ ಶ್ರೀಮುರುಳಿಗೆ ಬಿಗ್ ಬೇಕ್ ಕೊಟ್ಟಿದ್ದು ಪ್ರಶಾಂತ್ ನೀಲ್ ನಿರ್ದೇಶನ 'ಉಗ್ರಂ' ಚಿತ್ರ.
ಒಂದೇ ಹಾಡಿಗೆ 13 ಗೆಟಪ್‌ಗಳು; ಶ್ರೀಮುರಳಿ ಪತ್ನಿ ಕೈವಾಡ!
ಚಿನ್ನ, ಬಂಗಾರ, ಹೀರೋ ಎಂದು ಭೇಟಿ ಮಾಡುವ ಅಭಿಮಾನಿಗಳನ್ನು ಪ್ರೀತಿಯಿಂದ ಮಾತನಾಡಿಸುವವರು ರೋರಿಂಗ್ ಸ್ಟಾರ್ ಪ್ರೇಕ್ಷಕರನ್ನು ಮನೋರಂಜಿಸುವುದರಲ್ಲಿ ಎತ್ತಿದ ಕೈ. 'ಉಗ್ರಂ' ಚಿತ್ರದ ನಂತರ 'ರಥಾವರ', 'ಮಫ್ತಿ', 'ಭರಾಟೆ' ಚಿತ್ರಗಳಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ನೀಡುವ ಮೂಲಕ ಸ್ಯಾಂಡಲ್‌ವುಡ್ ಮಾಸ್ ಹೀರೋ ಎಂದು ಹೆಸರು ಮಾಡಿದ್ದಾರೆ.
ರೋರಿಂಗ್ ಸ್ಟಾರ್ ಭರಾಟೆ ಬಂಪರ್ ಹಿಟ್!
ಕೆಲ ದಿನಗಳ ಹಿಂದ ರಿಲೀಸ್ ಆದ ಭರಾಟೆ ಚಿತ್ರವೂ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಾಣುತ್ತಾ ಹಾಕಿದ ಬಂಡವಾಳವನ್ನು ಹಿಂಪಡೆಯಿತು. 10 ಮೋಸ್ಟ್ ಟಾಪ್ ಹೀರೋಗಳಲ್ಲಿ ಶ್ರೀ ಮುರುಳಿ ಇಬ್ಬರು. ಇಷ್ಟೆಲ್ಲಾ ಬೆಳವಣಿಗೆ ಆದ್ಮೇಲೆ ಸಂಭಾವನೆಯೂ ಬದಲಾಗಬೇಕು ಅಲ್ವಾ?
ತೆಲುಗು ನಿರ್ಮಾಣದ ಸಂಸ್ಥೆಯೊಂದು ಶ್ರೀಮುರಳಿಗೆ ಮೂರು ಚಿತ್ರಕ್ಕೆ 21 ಕೋಟಿ ಆಫರ್ ಕೊಟ್ಟಿರುವುದಾಗಿ ಗಾಂಧಿ ನಗರದಲ್ಲಿ ಮಾತುಗಳು ಹರಿದಾಡುತ್ತಿದೆ. ಅಂದರೆ ಒಂದು ಚಿತ್ರಕ್ಕೆ ಏಳು ಕೋಟಿ ಕೊಡುವುದಕ್ಕೆ ನಿರ್ಮಾಪಕರು ಮುಂದಾಗಿದ್ದಾರಂತೆ. ಈ ಪ್ರಾಜೆಕ್ಟ್ ಬಗ್ಗೆ ಶ್ರೀಮುರುಳಿ ಎಲ್ಲಿಯೂ ನಿಖರವಾದ ಮಾಹಿತಿ ನೀಡಿಲ್ಲ.