
ಶಿವರಾಜ್‌ಕುಮಾರ್‌ಗೆ ಓಂ ಚಿತ್ರದಲ್ಲಿ ಮುತ್ತಿಟ್ಟು 'ಶಿವರಾಜ್‌ಕುಮಾರ್ ಕಿಸ್ಸಿಗೆ ಡಮಾರ್ ಕೇಳ್ರಣ್ಣೋ' ಹಾಡಿನ ಮೂಲಕ ಸೌಂಡ್ ಮಾಡಿದ ನಟಿ ಪ್ರೇಮಾ ಗಾಂಧಿ ನಗರದಲ್ಲಿ ಸದ್ದಿಲ್ಲದೆ ಸೈಡಿಗೆ ಹೋಗಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಪ್ರೇಮಾ ತಮ್ಮ ಮುಂದಿನ ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ.' ನಾನು ಚಿತ್ರರಂಗದಿಂದ ಎಂದೂ ದೂರ ಉಳಿಯುವುದಿಲ್ಲ. ನನಗೆ ಇಷ್ಟವಾಗುವ ಪಾತ್ರ ಸಿಕ್ಕರೆ ಖಂಡಿತಾ ನಟಿಸುತ್ತೇನೆ. ತುಂಬಾ ಕಥೆಗಳನ್ನು ಕೇಳುತ್ತಿದ್ದೇನೆ. ಆದರೆ ನನಗೆ ಉತ್ತಮ ಪೋಷಕ ಪಾತ್ರ ಸಿಕ್ಕರೆ ಖಂಡಿತಾ ಮಾಡಿಯೇ ಮಾಡುತ್ತೇನೆ' ಎಂದು ಹೇಳಿದ್ದಾರೆ.
ಸ್ಯಾಂಡಲ್‌ವುಡ್ ‘ಚಂದ್ರಮುಖಿ’ಗೆ ಟಾರ್ಚರ್ ಕೊಟ್ರಾ ಉಪೇಂದ್ರ?
90 ರ ದಶಕದಲ್ಲಿ ಸ್ಟಾರ್ ನಟಿ ಎಂದೆನಿಸಿಕೊಂಡ ಖ್ಯಾತಿ ಅವರದ್ದು. ಅನಂತರ ಮದುವೆಯಾಗಿ ಬಣ್ಣದ ಲೋಕದಿಂದ ಕೊಂಚ ದೂರ ಉಳಿದರೂ ಒಂದಲ್ಲಾ ಒಂದು ರೀತಿ ವೈವಾಹಿಕ ಬದುಕಿನ ವಿಚಾರದಲ್ಲಿ ಸುದ್ದಿಯಾಗುತ್ತಿದ್ದರು.
'ರಾಜಕುಮಾರ'ನಿಗೆ ರಾಣಿಯಾಗಿ ಮಿಂಚಿದ ಪ್ರಿಯಾ ರಿಯಲ್ ಲೈಫ್ ಹೀರೋ ಯಾರು?
ಕೆಲ ತಿಂಗಳ ಹಿಂದೆ ಕೊಡಗಿನಲ್ಲಿ ತಮ್ಮ ಎಂ.ಸಿ. ಅಯ್ಯಪ್ಪನ ಮದುವೆಯಲ್ಲಿ ಪ್ರೇಮ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಅಷ್ಟೇ ಅಲ್ಲದೆ ಜೀ ಕನ್ನಡದ 'ವೀಕೆಂಡ್ ವಿತ್ ರಮೇಶ್' ನಲ್ಲಿ ತಮ್ಮ ವೃತಿ ಜೀವನದಲ್ಲಿ ಕಂಡ ಏರು ಪೇರುಗಳ ಬಗ್ಗೆ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.